ಆ್ಯಪ್ನಗರ

ಬೆಳ್ಳಿ ಪ್ರಕಾಶ್‌, ದತ್ತ ಪ್ರತಿಕ್ರಿಯೆ

ಹಾಸನ ಲೋಕಸಭೆ ಕ್ಷೇತ್ರದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬಳಿಕ ವಿವಿಧ ಪಕ್ಷ ದ ಮುಖಂಡರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ ಹೀಗಿದೆ.

Vijaya Karnataka 19 Apr 2019, 5:00 am
ಕಡೂರು: ಹಾಸನ ಲೋಕಸಭೆ ಕ್ಷೇತ್ರದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬಳಿಕ ವಿವಿಧ ಪಕ್ಷ ದ ಮುಖಂಡರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ ಹೀಗಿದೆ.
Vijaya Karnataka Web belli prakash datta reaction
ಬೆಳ್ಳಿ ಪ್ರಕಾಶ್‌, ದತ್ತ ಪ್ರತಿಕ್ರಿಯೆ


ಶಾಸಕ ಬೆಳ್ಳಿಪ್ರಕಾಶ್‌: ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಸಾಧನೆ, ದೇಶದ ರಕ್ಷ ಣೆ ಬಗ್ಗೆ ಅವರು ತೆಗೆದುಕೊಂಡ ನಿರ್ಧಾರ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಗಮನವಿರಿಸಿ ಬಹುತೇಕ ಜನರು ಅದರಲ್ಲಿಯೂ ಯುವಜನತೆ ಬಿಜೆಪಿ ಅಭ್ಯರ್ಥಿ ಎ.ಮಂಜು ಪರವಾಗಿ ಮತ ಚಲಾಯಿಸಿರುವ ವಿಶ್ವಾಸವಿದೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಸನ ಲೋಕಸಭೆ ಕ್ಷೇತ್ರದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ.

ಮಾಜಿ ಶಾಸಕ ವೈ.ಎಸ್‌.ವಿ ದತ್ತ : ಪ್ರಸ್ತುತ ಚುನಾವಣೆ ಜನತಂತ್ರ ಮತ್ತು ಸರ್ವಾಧಿಕಾರದ ನಡುವಿನ ಹೋರಾಟ. ಒಂದೇ ದೇಶ, ಒಂದೇ ತೆರಿಗೆ, ಒಂದೇ ನಾಯಕ ಎಂಬಂತಹ ರಹಸ್ಯ ತಂತ್ರವನ್ನು ದೇಶದ ಜನರ ಮೇಲೆ ಹೇರಲಾಗುತ್ತಿದೆ. ಕೋಮುವಾದಿ ಶಕ್ತಿಯನ್ನು ಮಣಿಸುವ ಕಠಿಣ ನಿರ್ಧಾರದಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳು ಮೈತ್ರಿ ಮಾಡಿಕೊಂಡಿವೆ. ಎರಡೂ ಪಕ್ಷ ದ ಮುಖಂಡರು ಮತ್ತು ತಳಹಂತದವರೆಗಿನ ಕಾರ್ಯಕರ್ತರು ಈ ಚುನಾವಣೆಯಲ್ಲಿ ಅತ್ಯುತಮವಾಗಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಶ್ರಮ ಹಾಕಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಗೆಲುವು ನಿಚ್ಚಳ ಸತ್ಯ. ಇವಿಎಂ ಯಂತ್ರಗಳ ಕಾರ್ಯವೈಖರಿ ಬಗ್ಗೆ ಮೊದಲಿನಿಂದಲೂ ಕಾಂಗ್ರೆಸ್‌, ಜೆಡಿಎಸ್‌ ಪಕ್ಷ ಗಳು ತಮ್ಮದೇ ಆದ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದವು. ಈ ಬಾರಿಯ ಚುನಾವಣೆಯಲ್ಲಿ ನೂರಾರು ಕಡೆ ಇವಿಎಂ ಯಂತ್ರಗಳು ಕೈಕೊಟ್ಟ ಬಗ್ಗೆ ಮಾಹಿತಿ ಬರುತ್ತಿದೆ. ಹಿಂದಿನ ಮತಪತ್ರದ ಮತದಾನ ಪ್ರಕ್ರಿಯೆಯೇ ಉತ್ತಮವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ