ಆ್ಯಪ್ನಗರ

ಉಪ ಕಸುಬಿನಿಂದ ರೈತರಿಗೆ ಲಾಭ

ಕೃಷಿ ಜತೆಗೆ ರೈತರು ಉಪಕಸುಬು ಕೈಗೊಂಡರೆ ಆರ್ಥಿಕ ಲಾಭ ಗಳಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತ ಅನಿಲ್‌ಕುಮಾರ್‌ ಹೇಳಿದರು.

Vijaya Karnataka 6 Aug 2019, 5:00 am
ಚಿಕ್ಕಮಗಳೂರು : ಕೃಷಿ ಜತೆಗೆ ರೈತರು ಉಪಕಸುಬು ಕೈಗೊಂಡರೆ ಆರ್ಥಿಕ ಲಾಭ ಗಳಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತ ಅನಿಲ್‌ಕುಮಾರ್‌ ಹೇಳಿದರು.
Vijaya Karnataka Web benefits to farmers by sub profession
ಉಪ ಕಸುಬಿನಿಂದ ರೈತರಿಗೆ ಲಾಭ


ತಾಲೂಕಿನ ಮಲ್ಲೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಲಸಬಾಳು ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತೋಟಗಾರಿಕೆ ಇಲಾಖೆ, ದೇವೀರಮ್ಮ ಕಾಳುಮೆಣಸು ಬೆಳೆಗಾರರ ಸಂಘದಿಂದ ಆಯೋಜಿಸಿದ್ದ ಕಾಳುಮೆಣಸು ಹೊಸ ಪ್ರದೇಶ ವಿಸ್ತರಣೆ, ಜೇನುಕೃಷಿ ತರಬೇತಿ ಕಾರ‍್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಮಲ್ಲೇನಹಳ್ಳಿ ದೇವೀರಮ್ಮ ಕಾಳುಮೆಣಸು ಬೆಳೆಗಾರರ ಸಂಘದ 40 ರೈತರಿಗೆ ಕಾಳುಮೆಣಸು ಬೆಳೆಯಲ್ಲಿ ತಾಂತ್ರಿಕತೆ, ರೋಗ ಹತೋಟಿ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಕೃಷಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಮೂಡಿಗೆರೆ ತೋಟಗಾರಿಕೆ ಮಹಾ ವಿದ್ಯಾಲಯದ ವಿಜ್ಞಾನಿ ಭೂಮಿಕ ಮಾತನಾಡಿ, ದೇಶದಲ್ಲಿ ಕಾಳುಮೆಣಸು ಹೆಚ್ಚಾಗಿ ಬೆಳೆಯಲಾಗುತ್ತಿದೆ. ನೆರಳಿನಲ್ಲಿ ಬೆಳೆಯುವ ಕಾಳುಮೆಣಸಿಗೆ ಯಾವುದೇ ರೋಗ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ಲೋಹಿತ್‌ ಮಾತನಾಡಿದರು. ಜೇನು ಕೃಷಿ ತರಬೇತುದಾರ ನಿರ್ವಾಣಪ್ಪ, ತಾ.ಪಂ. ಮಾಜಿ ಉಪಾಧ್ಯಕ್ಷ ವೈ.ಜಿ.ಸುರೇಶ್‌, ಗ್ರಾ.ಪಂ. ಅಧ್ಯಕ್ಷ ಸತೀಶ್‌, ಸಂಘದ ಅಧ್ಯಕ್ಷ ಶಂಕರೇಗೌಡ ಹಾಜರಿದ್ದರು. ತೋಟಗಾರಿಕೆ ಅಧಿಕಾರಿ ಅರುಣಕುಮಾರ್‌ ಸ್ವಾಗತಿಸಿ, ಶಿವೇಗೌಡ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ