ಆ್ಯಪ್ನಗರ

ತಿಂಗಳೊಳಗೆ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನೀರು

ಜು.30 ರೊಳಗಾಗಿ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ತಿಳಿಸಿದರು.

Vijaya Karnataka 4 Jul 2019, 6:28 pm
ತರೀಕೆರೆ ಗ್ರಾಮಾಂತರ : ಜು.30 ರೊಳಗಾಗಿ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ತಿಳಿಸಿದರು.
Vijaya Karnataka Web CKM-3SID1


ಅವರು ಬುಧವಾರ ತಾಲೂಕಿನ ಹಳಿಯೂರು ಸಮೀಪದಲ್ಲಿನ ರೈಲ್ವೇ ಹಳಿ ಬಳಿಯಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಅಜ್ಜಂಪುರ ಸಮೀಪದ ಹೆಬ್ಬೂರು ಬಳಿ ರೈಲ್ವೇ ಬ್ರಿಡ್ಜ್‌ ಕಾಮಗಾರಿ ಪೂರ್ಣಗೊಳ್ಳದ ಕಾರಣ ಪರ್ಯಾಯವಾಗಿ ಪೈಪ್‌ಲೈನ್‌ ಅಳವಡಿಸಿ ನೀರು ಬಿಡಿಸಲು ಕ್ರಮ ಕೈಗೊಳ್ಳಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಗೆ ವಶಪಡಿಸಿಕೊಳ್ಳಲಾಗಿರುವ ರೈತರ ಜಮೀನುಗಳಿಗೆ ಈಗಾಗಲೇ 90 ಭಾಗ ಪರಿಹಾರ ನೀಡಲಾಗಿದೆ ಎಂದರು.

ಲಿಂಗನಮಕ್ಕಿ ಜಲಾಶಯದಿಂದ ನೀರು ಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಕೆಲ ದಿನಗಳ ಹಿಂದೆ ಕಾಮಗಾರಿ ವೀಕ್ಷಿಸಲು ಆಗಮಿಸಿದ್ದಾಗ ತಿಳಿಸಿದ್ದರು ಎಂದು ಪತ್ರಕರ್ತರು ಕೇಳಿದಾಗ ಸವಿವರು ಸಿಡಿಮಿಡಿಗೊಂಡರು. ಸಂಸದರು ಮೊದಲು ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳ ದಾರಿ ತಿಳಿದುಕೊಳ್ಳಲಿ , ಕೇಂದ್ರ ಸರಕಾರದಿಂದ ಇದನ್ನು ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಂತೆ ಇದಕ್ಕೆ ದ್ವನಿಗೂಡಿಸಿದ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಆನೇಕಲ್ಲಿನಿಂದ ಬಂದು ಇಲ್ಲಿ ಏನು ಮಾಡಲು ಸಾಧ್ಯ? ಸಂಸದರಿಗೆ ಮಾಹಿತಿ ಕೊರತೆ ಇದೆ ಎಂದು ಉತ್ತರಿಸಿದರು.ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ರಘುನಾಥ್‌, ಮಾಜಿ ಶಾಸಕ ಗೋವಿಂದಪ್ಪ, ಸೂಪರಿಂಟೆಂಡೆಂಟ್‌ ಎಂಜಿನಿಯರ್‌ಗಳಾದ ವೇಣುಗೋಪಾಲ್‌, ಪಾಳೇಗಾರ್‌, ತರೀಕೆರೆ ಎಇಇ ರಾಜು, ಕಾಂಗ್ರೆಸ್‌ ಮುಖಂಡ ರವಿಶ್ಯಾನುಭೋಗ್‌, ವಕೀಲರಾದ ಮಲ್ಲಿಕಾರ್ಜುನ್‌, ಚಂದ್ರಶೇಖರ್‌ಮೂರ್ತಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ