ಆ್ಯಪ್ನಗರ

ಗಂಟೆ ಸದ್ದಿನ ಜತೆ ಪಿಕಳಾರದ ಇಂಚರ

ಸಾಮಾನ್ಯವಾಗಿ ಹಕ್ಕಿಗಳು ಪೊದೆ, ಪೊಟರೆ, ಗಿಡ, ಮರಗಳಲ್ಲಿ ಗೂಡು ಕಟ್ಟಿ ಸಂತಾನ ಅಭಿವೃದ್ಧಿ ಮಾಡುವುದು ಸಹಜ. ಆದರೆ,ಪಿಕಳಾರ ಹಕ್ಕಿಯೊಂದು ದೇವಸ್ಥಾನದ ಕಬ್ಬಿಣ ತೂಗುಯ್ಯಾಲೆಯ ಸರಪಳಿಯಲ್ಲಿ ಗೂಡು ಕಟ್ಟಿ ಮರಿಗಳನ್ನು ಮಾಡಿ ಗಮನ ಸೆಳೆದಿದೆ.

Vijaya Karnataka 20 Jun 2019, 5:00 am
ಅಜ್ಜಂಪುರ: ಸಾಮಾನ್ಯವಾಗಿ ಹಕ್ಕಿಗಳು ಪೊದೆ, ಪೊಟರೆ, ಗಿಡ, ಮರಗಳಲ್ಲಿ ಗೂಡು ಕಟ್ಟಿ ಸಂತಾನ ಅಭಿವೃದ್ಧಿ ಮಾಡುವುದು ಸಹಜ. ಆದರೆ,ಪಿಕಳಾರ ಹಕ್ಕಿಯೊಂದು ದೇವಸ್ಥಾನದ ಕಬ್ಬಿಣ ತೂಗುಯ್ಯಾಲೆಯ ಸರಪಳಿಯಲ್ಲಿ ಗೂಡು ಕಟ್ಟಿ ಮರಿಗಳನ್ನು ಮಾಡಿ ಗಮನ ಸೆಳೆದಿದೆ.
Vijaya Karnataka Web CKM-17ajp02


ಯಾವುದೇ ಹಕ್ಕಿಗಳು ರಕ್ಷಣೆ ಸಿಗುವ ಜಾಗದಲ್ಲಿ ಗೂಡು ಕಟ್ಟಿ ಮಾಡುತ್ತವೆ.ಪಿಕಳಾರ ಅಜ್ಜಂಪುರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ದೇವರಿಗೆ ನಿರ್ಮಿಸಿರುವ ತೂಗುಯ್ಯಾಲೆಯ ಕಬ್ಬಿಣದ ಸರಪಳಿಯಲ್ಲಿ ಗೂಡು ಕಟ್ಟಿ ಮರಿಗಳನ್ನು ಪೋಷಿಸುತ್ತಿದೆ. ಈಗಾಗಲೇ ಹಕ್ಕಿಗಳ ಇಂಚರ ದೇವಸ್ಥಾನದಲ್ಲಿ ಕೇಳಿ ಬರುತ್ತಿದೆ. ಪುಟ್ಟ ಮರಿಗಳಿಗೆ ತಾಯಿ ಪಿಕಳಾರ ಆಹಾರವನ್ನು ಕೊಕ್ಕಿನಲ್ಲಿ ನೀಡುತ್ತಿರುವುದನ್ನು ದೇವಸ್ಥಾನಕ್ಕೆ ಬರುವ ಭಕ್ತರು, ಮಕ್ಕಳು ಕುತೂಹಲದಿಂದ ನೋಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ