ಆ್ಯಪ್ನಗರ

ಬಿಪಿಎಲ್‌ ಆ್ಯಪ್‌, ಯೂಟ್ಯೂಬ್‌ ಲಿಂಕ್‌ ಬಿಡುಗಡೆ

ಕಾಫಿಲ್ಯಾಂಡ್‌ ಕ್ರಿಕೆಟ್‌ ಕ್ಲಬ್‌ ವತಿಯಿಂದ ಡಿ.11ರಿಂದ ಕಲಾರಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾಳೆಹೊನ್ನೂರು ಪ್ರೀಮಿಯರ್‌ ಲೀಗ್‌(ಬಿಪಿಎಲ್‌) ಎರಡನೇ ಆವೃತ್ತಿ ಪಂದ್ಯಾವಳಿಗಳ ವೀಕ್ಷ ಣೆಗಾಗಿ ವಿನ್ಯಾಸಗೊಳಿಸಿರುವ ಯೂಟ್ಯೂಬ್‌ ಲಿಂಕ್‌ ಹಾಗೂ ಬಿಪಿಎಲ್‌ ಆ್ಯಪ್‌ ಅನ್ನು ಬಿಪಿಎಲ್‌ ಸಿಇಒ ಟಿ.ಎಂ.ಉಮೇಶ್‌ ಕಲ್ಮಕ್ಕಿ ಬಿಡುಗಡೆಗೊಳಿಸಿದ್ದಾರೆ.

Vijaya Karnataka 10 Dec 2018, 10:01 pm
ಬಾಳೆಹೊನ್ನೂರು : ಕಾಫಿಲ್ಯಾಂಡ್‌ ಕ್ರಿಕೆಟ್‌ ಕ್ಲಬ್‌ ವತಿಯಿಂದ ಡಿ.11ರಿಂದ ಕಲಾರಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾಳೆಹೊನ್ನೂರು ಪ್ರೀಮಿಯರ್‌ ಲೀಗ್‌(ಬಿಪಿಎಲ್‌) ಎರಡನೇ ಆವೃತ್ತಿ ಪಂದ್ಯಾವಳಿಗಳ ವೀಕ್ಷ ಣೆಗಾಗಿ ವಿನ್ಯಾಸಗೊಳಿಸಿರುವ ಯೂಟ್ಯೂಬ್‌ ಲಿಂಕ್‌ ಹಾಗೂ ಬಿಪಿಎಲ್‌ ಆ್ಯಪ್‌ ಅನ್ನು ಬಿಪಿಎಲ್‌ ಸಿಇಒ ಟಿ.ಎಂ.ಉಮೇಶ್‌ ಕಲ್ಮಕ್ಕಿ ಬಿಡುಗಡೆಗೊಳಿಸಿದ್ದಾರೆ.
Vijaya Karnataka Web CKM-9BHR3


ಅವರು ಶನಿವಾರ ಆ್ಯಪ್‌, ಯೂಟ್ಯೂಬ್‌ ಲಿಂಕ್‌ ಬಿಡುಗಡೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿ, ಎರಡನೇ ಆವೃತ್ತಿಯ ಬಾಳೆಹೊನ್ನೂರು ಪ್ರೀಮಿಯರ್‌ ಲೀಗನ್ನು ವಿಶಿಷ್ಟವಾಗಿಸುವ ಉದ್ದೇಶದಿಂದ ಈ ಬಾರಿ ಬಾಳೆಹೊನ್ನೂರು ಪ್ರೀಮಿಯರ್‌ ಲೀಗ್‌ ಎಂಬ ಆ್ಯಪ್‌ ಅನ್ನು ವಿನ್ಯಾಸಗೊಳಿಸಲಾಗಿದ್ದು, ಐಪಿಎಲ್‌, ಕೆಪಿಎಲ್‌, ರಣಜಿ, ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ದೊರೆಯುವಂತೆ ಬಿಪಿಎಲ್‌ನ ಎಲ್ಲ ಪಂದ್ಯಗಳ ಕ್ಷ ಣ ಕ್ಷ ಣದ ಮಾಹಿತಿ, ಸ್ಕೋರ್‌ ವಿವರಗಳನ್ನು ಇದರಲ್ಲಿ ಪಡೆಯಬಹುದಾಗಿದೆ. ಗೂಗಲ್‌ ಸರ್ಚ್‌, ಪ್ಲೇ ಸ್ಟೋರ್‌ ಹಾಗೂ ಐಎಸ್‌ಒ ಮೂಲಕ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ ಎಂದರು.

ಅದಲ್ಲದೇ ಉದ್ಘಾಟನಾ ಸಮಾರಂಭದಿಂದ ಆರಂಭಗೊಳಿಸಿ, ಫೈನಲ್‌ ಪಂದ್ಯಗಳವರೆಗೂ ಬಿಪಿಎಲ್‌ ಎಲ್ಲ ಚಿತ್ರಣಗಳನ್ನು ವಿಶ್ವಾದ್ಯಂತ ಪ್ರಚುರಪಡಿಸುವ ನಿಟ್ಟಿನಲ್ಲಿ ಎಲ್ಲ ಪಂದ್ಯಗಳ ನೇರಪ್ರಸಾರವನ್ನು ಯೂಟ್ಯೂಬ್‌ ಮೂಲಕ ಬಿತ್ತರಿಸಲು ಲಿಂಕ್‌ ಸಹ ತಯಾರಿಸಲಾಗಿದೆ. ಕ್ರೀಡಾಭಿಮಾನಿಗಳು ಯೂಟ್ಯೂಬ್‌, ಗೂಗಲ್‌ ಸರ್ಚ್‌ ಅಥವಾ ಅದರ ಲಿಂಕ್‌ ಮೂಲಕ ಪಂದ್ಯಗಳನ್ನು ಕುಳಿತಲ್ಲಿಂದಲೇ ನೇರವಾಗಿ ವೀಕ್ಷಿಸಬಹುದಾಗಿದೆ. ಯೂಟ್ಯೂಬ್‌ ಲಿಂಕ್‌ ಹಾಗೂ ಬಿಪಿಎಲ್‌ ಆ್ಯಪ್‌ ಕುರಿತಾದ ಮಾಹಿತಿಗಾಗಿ 9741133505, 9448568504 ದೂರವಾಣಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಕಾಫಿಲ್ಯಾಂಡ್‌ ಕ್ರಿಕೆಟ್‌ ಕ್ಲಬ್‌ ಅಧ್ಯಕ್ಷ ಡಾ.ನವೀನ್‌ಲಾಯ್ಡ್‌ ಮಿಸ್ಕಿತ್‌, ಪ್ರಮುಖರಾದ ಇಬ್ರಾಹಿಂ ಶಾಫಿ, ಸಿ.ಪಿ.ರಮೇಶ್‌, ಅಬ್ದುಲ್‌ ಲತೀಫ್‌, ಎಸ್‌.ಕೆ.ರಫೀಕ್‌, ಮೋಯಿನ್‌, ಆ್ಯಪ್‌ ವಿನ್ಯಾಸಕಾರ ಜಾಶೀರ್‌, ಜಾಬೀರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ