ಆ್ಯಪ್ನಗರ

ತಾಯಿ ಹಾಲುಣಿಸುವುದು ಪಾರಂಪರಿಕ ಕ್ರಿಯೆ

ನವಜಾತ ಶಿಶುವಿಗೆ ತಾಯಿ ಹಾಲುಣಿಸುವುದು ಪಾರಂಪರಿಕ ಕ್ರಿಯೆ. ಪ್ರತಿ ಜೀವರಾಶಿ ಬದುಕು ಉಳಿಸಿಕೊಳ್ಳಲು ಮೊದಲ ಆಹಾರ ಎದೆಹಾಲು ಎಂದು ಕರ್ನಾಟಕ ಆರೋಗ್ಯ ಇಲಾಖೆಯ ಅಸಾಂಕ್ರಾಮಿಕ ರೋಗಗಳ ವಿಭಾಗದ ಉಪನಿರ್ದೇಶಕ ಬೆಂಗಳೂರಿನ ಡಾ.ಎಚ್‌.ವಿ.ರಂಗಸ್ವಾಮಿ ಹೇಳಿದರು.

Vijaya Karnataka 11 Aug 2019, 5:00 am
ಚಿಕ್ಕಮಗಳೂರು : ನವಜಾತ ಶಿಶುವಿಗೆ ತಾಯಿ ಹಾಲುಣಿಸುವುದು ಪಾರಂಪರಿಕ ಕ್ರಿಯೆ. ಪ್ರತಿ ಜೀವರಾಶಿ ಬದುಕು ಉಳಿಸಿಕೊಳ್ಳಲು ಮೊದಲ ಆಹಾರ ಎದೆಹಾಲು ಎಂದು ಕರ್ನಾಟಕ ಆರೋಗ್ಯ ಇಲಾಖೆಯ ಅಸಾಂಕ್ರಾಮಿಕ ರೋಗಗಳ ವಿಭಾಗದ ಉಪನಿರ್ದೇಶಕ ಬೆಂಗಳೂರಿನ ಡಾ.ಎಚ್‌.ವಿ.ರಂಗಸ್ವಾಮಿ ಹೇಳಿದರು.
Vijaya Karnataka Web CKM-9SHIVU-P2


ಚಿಕ್ಕಮಗಳೂರು ರೋಟರಿಕ್ಲಬ್‌, ಜಿ.ಪಂ., ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆ, ಪ್ರಸೂತಿವೈದ್ಯರ ಸಂಘದ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಜಾಗೃತಿ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ನಾಗೇಂದ್ರ ಮಗುವಿನ ಮೆದುಳಿಗೆ ಚುರುಕುತನ ತುಂಬಿ ಹಂತ ಹಂತವಾಗಿ ಬೆಳವಣಿಗೆಗೆ ತಾಯಿಯ ಎದೆಹಾಲು ಸಹಕಾರಿ ಎಂದರು.

ಆರೋಗ್ಯವಂತ ಮಗು, ಆರೋಗ್ಯವಂತ ರಾಷ್ಟ್ರ ವಿಶೇಷ ಕರಪತ್ರ ಬಿಡುಗಡೆ ಮಾಡಿದ ರೋಟರಿ ಕ್ಲಬ್‌ ಅಧ್ಯಕ್ಷ ಗೌತಮ್‌ಚಂದ್‌ ಸಿಯಾಲ್‌ ಮಾತನಾಡಿದರು.

ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಸರ್ಜನ್‌ ಡಾ.ಎಸ್‌.ಕುಮಾರನಾಯ್ಕ ಅಧ್ಯಕ್ಷ ತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ ಡಾ.ಬಾಲಕೃಷ್ಣ, ಆರ್‌ಸಿಎಚ್‌ ಜಿಲ್ಲಾಧಿಕಾರಿ ಡಾ.ಭರತಕುಮರ್‌, ನಿವಾಸಿ

ವೈದ್ಯಾಧಿಕಾರಿ ಡಾ.ಕಲ್ಪನಾ, ಪ್ರಸೂತಿತಜ್ಞರಾದ ಡಾ.ಶಿವಕುಮಾರ್‌ ಡಾ.ಉಮಾಶಂಕರ್‌, ಪದ್ಮಿನಿ ಮತ್ತಿತರರು ಹಾಜರಿದ್ದರು. ಶುಶ್ರೂಷಕಿ ಲತಾ ಪ್ರಾರ್ಥಿಸಿ,ಮಮತಾ ಸ್ವಾಗತಿಸಿದರು. ಸುನಿತಾ ಬಿ.ಸೆಲ್ವ ನಿರೂಪಿಸಿ, ಜಿಲ್ಲಾ ಆರೋಗ್ಯಶಿಕ್ಷ ಣಾಧಿಕಾರಿ ಜಲಜಾಕ್ಷಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ