ಆ್ಯಪ್ನಗರ

ಬಿಎಸ್‌ವೈ ಸಿಎಂ, ಬಿಜೆಪಿ ವಿಜಯೋತ್ಸವ

ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಜೆ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Vijaya Karnataka 27 Jul 2019, 6:44 pm
ಚಿಕ್ಕಮಗಳೂರು : ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಜೆ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
Vijaya Karnataka Web CKM-26SHIVU-P4


ತಾಲೂಕು ಕಚೇರಿ ಆವರಣದಿಂದ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿ ಹನುಮಂತಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಎಚ್‌.ಲೋಕೇಶ್‌ ಮಾತನಾಡಿ, ಕರ್ನಾಟಕದ ಜನತೆ ಇಂದು ನಿಜವಾಗಿಯೂ ನಿಟ್ಟುಸಿರು ಬಿಟ್ಟಿದ್ದಾರೆ. ಜನತೆ ಸುವರ್ಣಾಕ್ಷ ರದಲ್ಲಿ ಬರೆದಿಡುವಂತಹ ಕೆಲಸ ಕಾರ್ಯಕಗಳನ್ನು ಬಿಜೆಪಿ ಸರಕಾರ ಮಾಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಈವರೆಗೆ ಕೇವಲ ನಿಂಬೆಹಣ್ಣು ಮತ್ತು ಮೂಢನಂಬಿಕೆಗಳಿಂದ ಸರಕಾರ ನಡೆಸುತ್ತಿದ್ದ ದೇವೇಗೌಡರ ಕುಟುಂಬ ಹಾಗೂ ಕಾಂಗ್ರೆಸ್‌ನ ಮೂಲೋಚ್ಛಾಟನೆ ಆಗಿದೆ. ಕಾಮಗಾರಿ ಮತ್ತು ವರ್ಗಾವಣೆಗಳಲ್ಲಿ ಈವರೆಗೆ ನಡೆದಿರುವ ಲೂಟಿಯ ಬಗ್ಗೆ ಬಿಜೆಪಿ ಸರಕಾರ ತನಿಖೆ ನಡೆಸಲಿದೆ ಎಂದರು.ಮತ್ತೊಬ್ಬ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಾಜಪ್ಪ ಮಾತನಾಡಿ, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದಿಂದ ಜನರು ಬೇಸತ್ತಿದ್ದರು. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ರಾಜ್ಯದ ಜನತೆಗೆ ಸದೃಢ ಸರಕಾರವನ್ನು ನೀಡಲಿದೆ ಎಂದು ಹೇಳಿದರು. ಜಿ.ಪಂ.ಸದಸ್ಯ ಬಿ.ಜಿ.ಸೋಮಶೇಖರ್‌, ಮುಖಂಡರಾದ ಪುಟ್ಟೇಗೌಡ, ಹಂಪಯ್ಯ, ನಾರಾಯಣಗೌಡ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ