ಆ್ಯಪ್ನಗರ

ಸಿಎಂ ಹೆಲಿಕ್ಯಾಪ್ಟರ್‌ ಲ್ಯಾಂಡಿಂಗ್‌ಗೆ ಪರಿಶೀಲನೆ

ಸೊಲ್ಲಾಪುರ ಗ್ರಾಮದಲ್ಲಿಮಂಗಳವಾರ ನಡೆಯುವ ಗುರುಸಿದ್ದರಾಮ ಶಿವಯೋಗಿಗಳ 847ನೇ ಜಯಂತಿ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೆಲಿಕ್ಯಾಪ್ಟರ್‌ನಲ್ಲಿಬರುವ ಹಿನ್ನೆಲೆಯಲ್ಲಿಲ್ಯಾಂಡಿಂಗ್‌ಗೆ ಅಜ್ಜಂಪುರ ಶೆಟ್ರು ಸಿದ್ದಪ್ಪ ಸರಕಾರಿ ಕಾಲೇಜು ಕ್ರೀಡಾಂಗಣವನ್ನು ಸೋಮವಾರ ಎಸ್‌ಪಿ ಹರೀಶ್‌ ಪಾಂಡೆ ಮತ್ತು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಪರಿಶೀಲಿಸಿದರು.

Vijaya Karnataka 14 Jan 2020, 5:00 am
ಅಜ್ಜಂಪುರ: ಸೊಲ್ಲಾಪುರ ಗ್ರಾಮದಲ್ಲಿಮಂಗಳವಾರ ನಡೆಯುವ ಗುರುಸಿದ್ದರಾಮ ಶಿವಯೋಗಿಗಳ 847ನೇ ಜಯಂತಿ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೆಲಿಕ್ಯಾಪ್ಟರ್‌ನಲ್ಲಿಬರುವ ಹಿನ್ನೆಲೆಯಲ್ಲಿಲ್ಯಾಂಡಿಂಗ್‌ಗೆ ಅಜ್ಜಂಪುರ ಶೆಟ್ರು ಸಿದ್ದಪ್ಪ ಸರಕಾರಿ ಕಾಲೇಜು ಕ್ರೀಡಾಂಗಣವನ್ನು ಸೋಮವಾರ ಎಸ್‌ಪಿ ಹರೀಶ್‌ ಪಾಂಡೆ ಮತ್ತು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಪರಿಶೀಲಿಸಿದರು.
Vijaya Karnataka Web 13AJP01_35


ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಮಾತನಾಡಿ, ಮುಖ್ಯಮಂತ್ರಿಗಳು ಆಗಮಿಸುವ ಹಿನ್ನೆಲೆಯಲ್ಲಿಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಪæäಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಡಿವೈಎಸ್‌ಪಿ ರೇಣುಕಾ ಪ್ರಸಾದ್‌, ಹೆಲಿಕಾಪ್ಟರ್‌ ಬಂದಿಳಿದಾಗ ಸೂಕ್ತ ರಕ್ಷಣೆ ಕಾರ್ಯಕ್ಕಾಗಿ 25 ಪæäಲೀಸರನ್ನು ನಿಯೋಜನೆ ಮಾಡಲಾಗಿದೆ. ಪæೖಲೆಟ್‌ಗಳ ವಿಶ್ರಾಂತಿಗಾಗಿ ತಾ.ಪಂ. ಕಾರ್ಯಾಲಯ ಕಾಯ್ದಿರಿಸಿದೆ. ತರೀಕೆರೆ ಅಬಕಾರಿ ಅಧಿಕಾರಿಗಳು ಈ ಸಂದರ್ಭ ಅವರೊಂದಿಗೆ ಇರುತ್ತಾರೆ ಎಂದರು.

ಅಜ್ಜಂಪುರ ತಹಸೀಲ್ದಾರ್‌ ವೈ.ವಿಶ್ವೇಶ್ವರರಡ್ಡಿ, ತರೀಕೆರೆ ಉಪವಿಭಾಗಾಧಿಕಾರಿ ರೂಪಾ, ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರದ ಫಿಜಿಶಿಯನ್‌ ಡಾ. ನಟರಾಜ್‌, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ ಡಾ.ಜಿ.ಪುರುಷೋತ್ತಮ್‌, ತರೀಕೆರೆ ಅಬಕಾರಿ ನಿರೀಕ್ಷಕ ಎಂ.ಸಿ.ಶಂಕರ್‌, ಕಡೂರು ಉಮಾಶಂಕರ್‌, ಎಂಜಿನಿಯರ್‌ ಮೋಹನಕುಮಾರ್‌ ಹಾಜರಿದ್ದರು.
...............
ಬೆಳಗ್ಗೆ 11.50ಕ್ಕೆ ಕ್ರೀಡಾಂಗಣಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ರಸ್ತೆ ಮೂಲಕ ಸೊಲ್ಲಾಪುರಕ್ಕೆ ಆಗಮಿಸಿ, 12.05ಕ್ಕೆ ನಡೆಯುವ ಜಯಂತಿ ಸಮಾರಂಭ ಉದ್ಘಾಟಿಸುವರು. ಹೆಲಿಕ್ಯಾಪ್ಟರ್‌ನಲ್ಲಿಇಳಿಯುತ್ತಿದ್ದಂತೆ ಜಿಲ್ಲಾಡಳಿತ ಮತ್ತು ಗಣ್ಯರು ಅವರನ್ನು ಸ್ವಾಗತಿಸಲಿದ್ದಾರೆ. ಈ ಸಂದರ್ಭ ಜನರ ನೂಕು ನುಗ್ಗಲು ತಪ್ಪಿಸಲು ಕ್ರೀಡಾಂಗಣ ಸುತ್ತ ಮುತ್ತ ಬ್ಯಾರಿಕೇಡ್‌ ನಿರ್ಮಿಸಲಾಗಿದೆ. ಕೇವಲ 10 ನಿಮಿಷ ಪತ್ರಕರ್ತರೊಂದಿಗೆ ಮಾತನಾಡುವ ಮುಖ್ಯಮಂತ್ರಿಗಳು ಸಮಾರಂಭ ನಡೆಯುವ ಸ್ಥಳಕ್ಕೆ ತೆರಳುವರು.
ಮದ್ಯ ಮಾರಾಟ ನಿಷೇಧ
ಸೊಲ್ಲಾಪುರ ಗ್ರಾಮದಲ್ಲಿನಡೆಯುವ ಸಿದ್ದರಾಮ ಜಯಂತಿ ಪ್ರಯುಕ್ತ ಮದ್ಯ ಮಾರಾಟ ನಿಷೇಧ ಎಂದು ಜಿಲ್ಲಾಧಿಕಾರಿ ಗೌತಮ್‌ ಬಗಾದಿ ಆದೇಶ ಹೊರಡಿಸಿದ್ದಾರೆ.
14ಮತ್ತು 15ರಂದು ಎರಡೂ ದಿನ 10 ಕಿ.ಮೀ. ವ್ಯಾಪ್ತಿಯಲ್ಲಿಮದ್ಯ ಮಾರಾಟ ಸಂಗ್ರಹ, ಸಾಗಣೆ ಇವುಗಳನ್ನು ನಿಷೇಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ