ಆ್ಯಪ್ನಗರ

ಮಗು ಕಳ್ಳಿ ಬಂಧನ,ನಿಟ್ಟುಸಿರು ಬಿಟ್ಟ ದಂಪತಿ

ನಗರದ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿಶನಿವಾರ ಗಂಡು ಶಿಶುವೊಂದನ್ನು ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಆಕೆಯಿಂದ ಕದ್ದ ಮಗುವನ್ನು ವಶಕ್ಕೆ ಪಡೆಯಲಾಗಿದೆ.

Vijaya Karnataka 6 Jan 2020, 5:00 am
ಚಿಕ್ಕಮಗಳೂರು: ನಗರದ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿಶನಿವಾರ ಗಂಡು ಶಿಶುವೊಂದನ್ನು ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಆಕೆಯಿಂದ ಕದ್ದ ಮಗುವನ್ನು ವಶಕ್ಕೆ ಪಡೆಯಲಾಗಿದೆ.
Vijaya Karnataka Web child detention of cactus
ಮಗು ಕಳ್ಳಿ ಬಂಧನ,ನಿಟ್ಟುಸಿರು ಬಿಟ್ಟ ದಂಪತಿ


ತಾಲೂಕಿನ ಅಂಬಳೆ ಗ್ರಾಮದ ಮಹಿಳೆಯೊಬ್ಬರನ್ನು ಬಂಧಿತ ಆರೋಪಿ. ಇವರು ಹಾಲಿ ಹೋಮ್‌ಗಾರ್ಡ್‌ ಆಗಿ ಸೇವೆ ಸಲ್ಲಿಸುತ್ತಿದ್ದು ಕರ್ತವ್ಯಕ್ಕೆ ಹೆಚ್ಚು ಗೈರಾಗುತ್ತಿದ್ದರು ಎಂದು ಎಸ್ಪಿ ಹರೀಶ್‌ ಪಾಂಡೆ ತಿಳಿಸಿದ್ದಾರೆ.

ಸಿಸಿ ಟಿವಿ ಫುಟೇಜ್‌ ಆಧಾರದಲ್ಲಿಆಕೆ ವಾಸವಾಗಿದ್ದ ರಾಮನಹಳ್ಳಿ ನಿವಾಸಕ್ಕೆ ತೆರಳಿ ನೋಡಿದಾಗ ಆಕೆಯೊಂದಿಗೆ ಅಪಹರಣವಾಗಿದ್ದ ಗಂಡು ಮಗು ಕೂಡ ಇತ್ತು. ಮಗುವನ್ನು ಕೂಡಲೇ ಮಕ್ಕಳ ವಿಶೇಷ ನಿಗಾ ಘಟಕಕ್ಕೆ ದಾಖಲು ಮಾಡಲಾಗಿದೆ. ತನಗೆ ಗಂಡು ಬೇಕಿದ್ದ ಕಾರಣ ಮಗು ಅಪಹರಿಸಿದ್ದೇನೆ ಎಂದು ತನಿಖೆ ವೇಳೆ ಮಹಿಳೆ ಬಾಯಿ ಬಿಟ್ಟಿದ್ದಾಳೆ. ಮಗು ಅಪಾಯದಿಂದ ಪಾರಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಅಸ್ಸಾಂನಿಂದ ಕೆಲಸ ಅರಸಿ ವಲಸೆ ಬಂದಿದ್ದ ಅಂಜಲಿ ಮತ್ತು ರುನು ದಂಪತಿಗೆ ಹೊಸ ವರ್ಷದ ಮೊದಲ ದಿನವೇ ಗಂಡು ಮಗು ಜನಿಸಿತ್ತು. ಮಗುವಿಗೆ ಜ್ವರ ಬಂದಿದ್ದ ಕಾರಣ ಆಸ್ಪತ್ರೆಯ ಕೆಎಂಸಿ ಘಟಕದಲ್ಲಿಶನಿವಾರ ಇಡಲಾಗಿತ್ತು. ಇದೇ ಸಂದರ್ಭವನ್ನು ಕಾಯುತ್ತಿದ್ದ ಮಹಿಳೆ ಯಾರೂ ಇಲ್ಲದ ಸಮಯ ನೋಡಿ ಮಗುವನ್ನು ಎತ್ತಿಕೊಂಡು ಆಟವಾಡಿಸುವ ರೀತಿ ನಟಿಸುತ್ತ ಆಸ್ಪತ್ರೆಯಿಂದ ಹೊರಕ್ಕೆ ಬಂದು ಇದ್ದಕ್ಕಿದ್ದಂತೆ ಪರಾರಿಯಾಗಿದ್ದಳು.ಊಟ ತರಲು ಹೊರ ಹೋಗಿದ್ದ ರುನು ವಿಷಯ ತಿಳಿದು ಕುಸಿದು ಹೋಗಿದ್ದ. ವಿಷಯ ತಿಳಿದ ಬಾಣಂತಿ ಅಂಜಲಿಗೆ ಆಕಾಶವೇ ಕಳಚಿ ಬಿದ್ದಂತಾಗಿ ಮಗು ಬೇಕು ಎಂದು ಅಂಗಲಾಚಿದ್ದಳು.ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಳೆದ 24 ಗಂಟೆಯೊಳಗೆ ಪ್ರಕರಣ ಬೇಧಿಸುವಲ್ಲಿಯಶಸ್ವಿಯಾಗಿದ್ದಾರೆ. ಪ್ರಕರಣ ಮಹಿಳಾ ಪೊಲೀಸ್‌ ಠಾಣೆಯಲ್ಲಿದಾಖಲಾಗಿದೆ.ಮಗು ಸಿಕ್ಕಿದ್ದರಿಂದ ಅಸ್ಸಾಂ ಮೂಲದ ದಂಪತಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ