ಆ್ಯಪ್ನಗರ

ಮೋಡ ಕವಿದ ವಾತವಾರಣ, ಆತಂಕದಲ್ಲಿ ರೈತರು

ಮಲೆನಾಡಿನಲ್ಲಿ ಭತ್ತದ ಕಟಾವು ಶುರುವಾಗಿದ್ದು, ಮೋಡ ಕವಿದ ವಾತವಾರಣದಿಂದ ರೈತರು ಆತಂಕಗೊಂಡಿದ್ದಾರೆ.

Vijaya Karnataka 24 Dec 2018, 5:00 am
ಶೃಂಗೇರಿ : ಮಲೆನಾಡಿನಲ್ಲಿ ಭತ್ತದ ಕಟಾವು ಶುರುವಾಗಿದ್ದು, ಮೋಡ ಕವಿದ ವಾತವಾರಣದಿಂದ ರೈತರು ಆತಂಕಗೊಂಡಿದ್ದಾರೆ.
Vijaya Karnataka Web CKM-22SRI2


ಈಗಾಗಲೆ ರೈತರು ಭತ್ತದ ಕೃಷಿಯಲ್ಲಿ ನಿರಾಸಕ್ತಿ ತೋರುತ್ತಿರುವುದರಿಂದ ವರ್ಷ ವರ್ಷವೂ ಭತ್ತದ ಉತ್ಪಾದನೆಯಲ್ಲಿ ಗಮನಾರ್ಹ ಇಳಿಕೆಯಾಗುತ್ತಿದೆ. ತಾಲೂಕಿನಲ್ಲಿ 8873 ಎಕರೆ ಗದ್ದೆಯಲ್ಲಿ ಭತ್ತದ ಕೃಷಿಯನ್ನು ಕೈಗೊಳ್ಳಲಾಗುತ್ತಿದೆ. ಪ್ರತಿ ವರ್ಷವೂ ರೈತರು ಗದ್ದೆಯನ್ನು ಬೀಳು ಬಿಡುವ ಪರಿಪಾಠ ಮುಂದುವರಿಸಿದ್ದಾರೆ.ಭತ್ತದ ಬೇಸಾಯದಲ್ಲಿ ಆದಾಯ ಕಡಿಮೆ,ಕೆಲಸ ಜಾಸ್ತಿಯಾಗಿದೆ.

ಭತ್ತಕ್ಕೆ ಸೂಕ್ತ ಬೆಲೆ ಇಲ್ಲದಿರುವುದು ಕೃಷಿಗಾಗಿ ಹೆಚ್ಚುತ್ತಿರುವ ಖರ್ಚು ವೆಚ್ಚಗಳು ಕಾರ್ಮಿಕರ ಸಮಸ್ಯೆ ರಾಸಾಯನಿಕ ಗೊಬ್ಬರಗಳ ಮತ್ತು ಕೀಟನಾಶಕಗಳ ಬೆಲೆ ಗಗನಕ್ಕೆರಿರುವುದು, ಹವಮಾನದ ಅಸಮತೋಲನ ಹಾಗೂ ಬೆಳೆಗೆ ಕಾಡುಪ್ರಾಣಿಗಳ ಉಪಟಳ ಮುಂತಾದವು ಭತ್ತದ ಕೃಷಿಯನ್ನು ಕೈಗೊಳ್ಳುವಲ್ಲಿ ರೈತರ ನಿರುತ್ಸಾಹಕ್ಕೆ ಕಾರಣವಾಗಿದೆ. ವಿಪರೀತ ಮಳೆಯಿಂದಾಗಿ ಬಹಳಷ್ಟು ಗದ್ದೆಗಳು ಗುಡ್ಡಗಳು ಜರಿದು ಭತ್ತದ ಗದ್ದೆಗಳಲ್ಲಿ ಮಣ್ಣು ತುಂಬಿ ಸಾಗುವಳಿ ಮಾಡದ ಸ್ಥಿತಿ ಒಂದೆಡೆಯಾದರೆ ಮತ್ತೊಂದೆಡೆ ನಾಟಿ ಮಾಡಿದ ಗದ್ದೆಗಳು ಗುಡ್ಡದ ಜರಿತದ ಹೊಡೆತಕ್ಕೆ ಸಿಲುಕಿ ನಾಟಿ ಮಾಡಿದ ಗದ್ದೆಗಳು ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಹೋಗಿ ಪುನಃ ನಾಟಿ ಮಾಡದ ಸ್ಥಿತಿಗೆ ತಲುಪಿದೆ.

ತಾಲೂಕಿನಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಕಟಾವು ಯಂತ್ರಗಳು ಬಂದಿದ್ದು, ಮೋಡ ಕವಿದ ವಾತಾವರಣದಿಂದ ರೈತರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಮೋಡ ವಾತಾವರಣ ಕಡಿಮೆಯಾಗುತ್ತಿದ್ದಂತೆ ಯಂತ್ರಕ್ಕೆ ಬೇಡಿಕೆ ಹೆಚ್ಚಿ ಬಾಡಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಯಂತ್ರೋಪಕರಣದ ಕೊರತೆಯು ಎದುರಾಗುವ ಸಾಧ್ಯತೆ ಇದೆ. ಇನ್ನೂ ಕೆಲವೆಡೆ ಕಾರ್ಮಿಕರಿಂದಲೆ ಭತ್ತ ಕೊಯ್ಲು ಮಾಡಲು ಮುಂದಾಗಿದ್ದಾರೆ.ನಂತರವೂ ಹುಲ್ಲು ಭತ್ತವನ್ನು ಬೇರ್ಪಡಿಸಲು ಯಂತ್ರ ಬೇಕೇ ಬೇಕು ಕಂಬೈನ್ಡ್‌ ಹಾರ್ವೆಸ್ಟರ್‌ ಯಂತ್ರ 2000-2600 ರೂ ಗಂಟೆಗೆ ಬಾಡಿಗೆ ಇದೆ ಎನ್ನಲಾಗಿದೆ. ಯಂತ್ರದ ಮಾಲಿಕರಿಂದ ಕಡಿಮೆ ಬಾಡಿಗೆ ಪಡೆದು ರೈತರಿಂದ ಹೆಚ್ಚಿನ ಹಣ ಪಡೆದು ಕಟಾವು ನಡೆಸಲು ಮದ್ಯವರ್ತಿಗಳ ಹಾವಳಿಯು ಇದೆ ಎಂದು ರೈತರು ದೂರುತ್ತಾರೆ.

------------

ವಾಣಿಜ್ಯ ಬೆಳೆ ಅಡಕೆ,ಕಾಫಿ,ಕಾಳು ಮೆಣಸು ಬೆಳೆ ಸಂಪೂರ್ಣ ಕುಸಿತವಾಗಿದೆ.ತಾಲೂಕಿನಲ್ಲಿ ಮಳೆ ಹೆಚ್ಚಾಗಿದ್ದು ವಿಪರೀತ ಸುರುಳಿ ಹುಳಗಳ ಕಾಟದಿಂದ ಭತ್ತದ ಫಸಲು ಕಡಿಮೆಯಾಗುವ ಸಂಭವವಿದೆ. ಬೆಳೆದ ಅಲ್ಪಸ್ವಲ್ಪ ಫಸಲನ್ನು ಮನೆಗೆ ತರಲು ಹರಸಾಹಸ ಪಡಬೇಕಾಗಿದೆ ಒಂದೆಡೆ ಮಳೆಯ ಭೀತಿ ಮತ್ತೊಂದೆಡೆ ಕಾರ್ಮಿಕರ ಅಭಾವದಿಂದ ತೊಂದರೆ ಉಂಟಾಗಿದೆ.

-ರಾಜೇಶ್‌,ಹೆಬ್ಬಿಗೆ,ಶೃಂಗೇರಿ.


---------------

ತಾಲೂಕಿನಲ್ಲಿ ಗಣನೀಯ ಪ್ರಮಾಣದಲ್ಲಿ ಭತ್ತದ ಕೃಷಿ ಮಾಡುವಲ್ಲಿ ರೈತರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಸರಕಾರ ರೈತರಿಗೆ ಸಾಕಷ್ಟು ಸಹಾಯ ಭತ್ತ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ.ಸಾವಯವ ಪದ್ಧತಿಯಲ್ಲಿ ಬೆಳೆಯುವ ರೈತರಿಗೆ ಕೃಷಿ ಇಲಾಖೆ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ನಾಟಿ ಮಾಡಲು ಯಂತ್ರಗಳು ಈಗ ಲಭ್ಯವಿದ್ದು ನಾಟಿ ಮಾಡಿದ ನಂತರವೂ ಕಟಾವು ಯಂತ್ರಗಳು ದೊರಕುತ್ತಿದೆ. ಇದರಿಂದ ಸಾಕಷ್ಟು ಕಾರ್ಮಿಕರ ಸಮಸ್ಯೆಯನ್ನು ನೀಗಿಸಿದೆ. ಭತ್ತ ಬೆಳೆಯಲು ರೈತರು ಹಿಂದೇಟು ಹಾಕಬಾರದು.

-ಜಯಣ್ಣ,ಕ್ಷೇತ್ರಾಧಿಕಾರಿ,ಸಾವಯವ ಕೃಷಿಕರ ಬಳಗ,ಶೃಂಗೇರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ