ಆ್ಯಪ್ನಗರ

ಅಹೋರಾತ್ರಿ ಧರಣಿ ಮುಕ್ತಾಯ

ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬೇಡಿಕೆಗಾಗಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಶನಿವಾರ ಮುಕ್ತಾಯಗೊಂಡಿತು.

Vijaya Karnataka 7 Jul 2019, 5:00 am
ಅಜ್ಜಂಪುರ: ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬೇಡಿಕೆಗಾಗಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಶನಿವಾರ ಮುಕ್ತಾಯಗೊಂಡಿತು.
Vijaya Karnataka Web CKM-06AJP03


ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ನಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮ್ಜದ್‌ ಮಾತನಾಡಿ, ಸರಕಾರಿ ಕನ್ನಡ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವುದು ಸ್ವಾಗತಾರ್ಹ. ಆದರೆ ಅಲ್ಲಿಗೆ ಹೋಗುವ ಮಕ್ಕಳು 3ರಿಂದ 6 ವರ್ಷದ ಮಕ್ಕಳು. ಆದರೆ ಅದೇ ವಯೋಮಿತಿಯ ಮಕ್ಕಳು ಕೂಡ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪೂರ್ವ ಚಟುವಟಿಕೆಗೆ ದಾಖಲಾಗುವ ಮಕ್ಕಳು ಆಗಿರುತ್ತವೆ. ಈ ಮಕ್ಕಳು ಶಾಲೆಗೆ ದಾಖಲಾದರೆ ಅಂಗನವಾಡಿ ಮುಚ್ಚಬೇಕು. ಹೀಗಾದರೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಬೀದಿ ಪಾಲಾಗುತ್ತಾರೆ. ಎಲ್‌ಕೆಜಿ, ಯುಕೆಜಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಉತ್ತಮ ತರಬೇತಿ ಕೊಟ್ಟು ಸೇವೆಯಲ್ಲಿ ಮುಂದುವರೆಸಬೇಕೆಂದರು.

ಮಾಜಿ ಶಾಸಕ ಜಿ.ಎಚ್‌. ಶ್ರೀ ನಿವಾಸ ಮಾತನಾಡಿ, ಮಕ್ಕಳ ಪ್ರಾಥಮಿಕ ಹಂತದಲ್ಲಿ ಅಂಗನವಾಡಿ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಜಯಮಾಲ ಅವರೊಂದಿಗೆ ಬೇಡಿಕೆಗಳನ್ನು ತಿಳಿಸಿ, ಪರಿಹರಿಸಲು ಯತ್ನಿಸುತ್ತೇನೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಸುಧಾ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ. ನರೇಂದ್ರ, ಕಾಂಗ್ರೆಸ್‌ ಮುಖಂಡ ಬಿ. ಗುರುಮೂರ್ತಿ ಸ್ಥಳಕ್ಕೆ ಆಗಮಿಸಿ, ಬೆಂಬಲ ವ್ಯಕ್ತಪಡಿಸಿದರು.

ಧರಣಿಯಲ್ಲಿ ಕೆ.ಸಿ. ವಿಜಯಕುಮಾರಿ, ಮಧುಮಾಲತಿ, ಕೆ.ಆರ್‌. ಜಯಂತಿ, ಕೆ.ಟಿ. ಗಾಯಿತ್ರಿ, ಆರ್‌. ಅನುಸೂಯ, ಎನ್‌. ಸರೋಜಮ್ಮ, ಜಿ. ಸುಂದರಮ್ಮ, ಮೀನಾಕ್ಷಿ, ಡಿ.ಆರ್‌. ಗಿರಿಜಮ್ಮ , ಕಾರ್ಯಕರ್ತೆಯರು ಭಾಗವಹಿಸಿದ್ದರು.

ಮಾನವೀಯತೆ ಮೆರೆದ ಪೊಲೀಸರು: ಶೆಟ್ರು ಸಿದ್ದಪ್ಪ ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ 200 ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ರಫೀಕ್‌ ಧರಣಿ ನಿರತರಿಗೆ ರಾತ್ರಿ ಊಟ, ನೀರು, ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರದ ದಾದಿಯರನ್ನು ಕರೆಸಿ ಎಲ್ಲರಿಗೂ ಪೂರ್ವಬಾವಿಯಾಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ