ಆ್ಯಪ್ನಗರ

ಮಳೆಗಾಗಿ ಮೈತ್ರಿ ಸರಕಾರದಿಂದ ವಿಶೇಷ ಪೂಜೆ, ಹೋಮ

ರಾಜ್ಯದಲ್ಲಿ ಮಳೆಗಾಗಿ ಮೈತ್ರಿ ಸರಕಾರ ವಿಶೇಷ ಪೂಜೆ, ಹೋಮದ ಮೊರೆ ಹೋಗಿದೆ. ಬೆಳಿಗ್ಗೆ 5.30 ರಿಂದ ಪರ್ಜನ್ಯ ಹೋಮ​ ಆರಂಭವಾಗಿದ್ದು, ಕಳೆದ ರಾತ್ರಿಯೇ ಡಿ.ಕೆ.ಶಿ, ಪಿ.ಟಿ ಪರಮೇಶ್ವರ್ ನಾಯ್ಕ ಶೃಂಗೇರಿಯಲ್ಲಿ‌ ವಾಸ್ತವ್ಯ ಹೂಡಿದ್ದರು ಎಂದು ತಿಳಿದುಬಂದಿದೆ.

TNN & Agencies 6 Jun 2019, 11:49 am
ಚಿಕ್ಕಮಗಳೂರು: ರಾಜ್ಯದಲ್ಲಿ ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಮೈತ್ರಿ ಸರಕಾರ ವಿಶೇಷ ಪೂಜೆ, ಹೋಮದ ಮೊರೆ ಹೋಗಿದೆ. ಸಚಿವ ಡಿ.ಕೆ‌ ಶಿವಕುಮಾರ್, ಪಿ.ಟಿ ಪರಮೇಶ್ವರ್ ನಾಯ್ಕ್ ರಿಂದ ಮಳೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Vijaya Karnataka Web dk shivakumar rain god


ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿರುವ ಕಿಗ್ಗಾ ಋಷ್ಯಶೃಂಗ ದೇವಾಲಯದಲ್ಲಿ ಮಳೆಗಾಗಿ ಪರ್ಜನ್ಯ ಹೋಮ, ಜಪ ಮಾಡಿದ್ದಾರೆ. ಮಳೆ‌ ದೇವರೆಂದೇ ಖ್ಯಾತಿಯಾಗಿರೋ ಋಷ್ಯಶೃಂಗನಿಗೆ ಡಿ.ಕೆ.ಶಿವಕುಮಾರ್, ಪಿ.ಟಿ‌ ಪರಮೇಶ್ವರ್ ನಾಯ್ಕ್ ನೇತೃತ್ವದಲ್ಲಿ ಹೋಮ ಮಾಡಲಾಗಿದೆ.

ಬೆಳಿಗ್ಗೆ 5.30 ರಿಂದ ಪರ್ಜನ್ಯ ಹೋಮ ಆರಂಭವಾಗಿದ್ದು, ಕಳೆದ ರಾತ್ರಿಯೇ ಡಿ.ಕೆ.ಶಿ, ಪಿ.ಟಿ ಪರಮೇಶ್ವರ್ ನಾಯ್ಕ ಶೃಂಗೇರಿಯಲ್ಲಿ‌ ವಾಸ್ತವ್ಯ ಹೂಡಿದ್ದರು ಎಂದು ತಿಳಿದುಬಂದಿದೆ.

ಋಷ್ಯಶೃಂಗ ದೇವರು ಸಚಿವ ಡಿ.ಕೆ.ಶಿವಕುಮಾರ್ ಇಷ್ಟದೈವವಾಗಿದ್ದು, ಈ ಹಿಂದೆ ಕೂಡ ಮಳೆಗಾಗಿ ಡಿಕೆಶಿ ಇಲ್ಲಿ ಬೇಡಿಕೊಂಡಿದ್ರು. ಆ ವೇಳೆ ನಾಡಿನಲ್ಲಿ ಸಮೃದ್ಧ ಮಳೆಯಾಗಿತ್ತು. ಮಳೆಯಾದ ಮೇಲೆ ಡಿಕೆಶಿ ಹರಕೆ ತೀರಿಸಿದ್ದರು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿರುವ ಕಿಗ್ಗಾ ಋಷ್ಯಶೃಂಗ ದೇವಾಲಯಕ್ಕೆ ತೆರಳಿ ಹರಕೆ ತೀರಿಸಿದ್ದರು.

21 ಅರ್ಚಕರು ರಾಜ್ಯದಲ್ಲಿ ಮಳೆಗಾಗಿ ಪರ್ಜನ್ಯ ಜಪ ನಡೆಸಿದ್ದು, ಪ್ರತಿಯೋರ್ವರಿಂದಲೂ 1008 ಪರ್ಜನ್ಯ ಜಪ ನಡೆದಿದೆ. ರಾಜ್ಯದಲ್ಲಿ ಸಮೃದ್ಧ ಮಳೆಗಾಗಿ ಋಷ್ಯಶೃಂಗನಿಗೆ ರುದ್ರಾಭಿಷೇಕವನ್ನು ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ