ಆ್ಯಪ್ನಗರ

ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ : ಎಡಿಸಿ

ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಗಂಭೀರವಾಗಿ ಪರಿಗಣಿಸುವ ಜತೆಗೆ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು ಎಂದು ಎಡಿಸಿ ಡಾ.ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 15 Mar 2019, 8:42 pm
ಚಿಕ್ಕಮಗಳೂರು : ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಗಂಭೀರವಾಗಿ ಪರಿಗಣಿಸುವ ಜತೆಗೆ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು ಎಂದು ಎಡಿಸಿ ಡಾ.ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web code of conduct violates action adc
ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ : ಎಡಿಸಿ


ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ಕರ್ತವ್ಯಕ್ಕೆ ನೇಮಕವಾಗಿರುವ ಸೆಕ್ಟರ್‌ ಅಧಿಕಾರಿಗಳು, ಪ್ಲೆಯಿಂಗ್‌ ಸ್ಕ್ವಾಡ್‌ ಹಾಗೂ ಚೆಕ್‌ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸಲುಚುನಾವಣಾಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಮ್ಮಕರ್ತವ್ಯದ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸುವ ಮೂಲಕ ಶಾಂತಿಯುತ ಹಾಗೂ ಸುಗಮವಾಗಿ ಚುನಾವಣೆ ನಡೆಸಲು ಕ್ರಮ ವಹಿಸುವಂತೆ ತಿಳಿಸಿದರು.

ಜಿಲ್ಲಾದ್ಯಂತ ಒಟ್ಟು 23 ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಶೃಂಗೇರಿ ವಿಧಾನಸಭಾಕ್ಷೇತ್ರ ಎಸ್‌.ಕೆ.ಬಾರ್ಡರ್‌ (ದಕ್ಷಿಣಕನ್ನಡಜಿÇ æ್ಲಗಡಿ), ಬೇಗಾರು (ಉಡುಪಿ ಜಿಲ್ಲೆಗಡಿ), ಗಡಿಕಲ್ಲು, ಕೊರಳಕೊಪ್ಪ (ಶಿವಮೊಗ್ಗ ಜಿಲ್ಲೆಗಡಿ).

ಮೂಡಿಗೆರೆ-ಕುದುರೆಮುಖ, ಕೊಟ್ಟಿಗೆಹಾರ (ದಕ್ಷಿಣಕನ್ನಡಜಿಲ್ಲೆಗಡಿ), ಕಿರುಗುಂದ, ಕಸ್ಕೆ ಬೈಲು, ಬಸ್ಕಲ್‌, ಮಾಗಡಿ, ಕೈಮರ (ಹಾಸನ ಜಿಲ್ಲೆ ಗಡಿಗಳು), ಚಿಕ್ಕಮಗಳೂರು- ಕೆ.ಬಿ ಹಾಳ್‌, ದೇವನೂರು (ಹಾಸನ ಜಿಲ್ಲೆ ಗಡಿಗಳು)

ತರೀಕೆರೆ- ಎಂ.ಸಿ.ಹಳ್ಳಿ ಎಂ.ಎನ್‌.ಕ್ಯಾಂಪ್‌, ಲಕ್ಕವಳ್ಳಿ (ಶಿವಮೊಗ್ಗ ಜಿಲ್ಲೆ ಗಡಿಗಳು) ನಾಗಭುವನಹಳ್ಳಿ (ದಾವಣಗೆರೆ ಜಿಲ್ಲೆ ಗಡಿ), ಭಕ್ತನಕಟ್ಟೆ (ಚಿತ್ರದುರ್ಗಜಿಲ್ಲೆಗಡಿ), ಕಡೂರು- ಬಸವನಹಳ್ಳಿ ದಿಬ್ಬ (ಹಾಸನ ಜಿಲ್ಲೆಗಡಿ), ಪಂಚನಹಳ್ಳಿ (ಹಾಸನ ಮತ್ತು ಚಿತ್ರದುರ್ಗಜಿಲ್ಲಾಗಡಿ), ಅಹಮದ್‌ ನಗರ, ದೇವರಹಳ್ಳಿ, ಮರವಂಜಿ, ಚೌಳಹಿರಿಯೂರು (ಚಿತ್ರದುರ್ಗಜಿಲ್ಲಾ ಗಡಿಗಳು), ಪ್ರತಿ ವಿಧಾನ ಸಭಾಕ್ಷೇತ್ರವಾರು 6 ರಂತೆ 30 ಫ್ಲೆಯಿಂಗ್‌ ಸ್ಕ್ವಾಡ್‌ಗಳನ್ನು ನೇಮಿಸಲಾಗಿದೆ. ಇಲ್ಲಿಒಬ್ಬರುಅಬಕಾರಿ, ಒಬ್ಬರು ಪೊಲೀಸ್‌ಇಲಾಖೆ ಅಧಿಕಾರಿ ನೇಮಿಸಲಾಗಿದೆ ಎಂದರು.

ಪ್ರಚಾರಕ್ಕೆ ಬಳಸುವ ಬ್ಯಾನರ್‌, ಪ್ಲೆಕ್ಸ್‌ ,ಬಂಟಿಂಗ್ಸ್‌, ಕರಪತ್ರ, ಕಾರ್ಯಕ್ರಮ ವೇದಿಕೆ ಹಾಗೂ ವೇದಿಕೆ ಅಲಂಕಾರ ಪ್ರತಿಯೊಂದಕ್ಕೂಅನುಮತಿ ಪಡೆಯಬೇಕು.ಅನುಮತಿ ಪಡೆಯದ ಸಂದರ್ಭದಲ್ಲಿಅಂತವರ ಮೇಲೆ ಕ್ರಮಕೈಗೊಳ್ಳಬೇಕು. 50 ಸಾವಿರ ಕ್ಕಿಂತ ಹೆಚ್ಚು ಹಣಕೊಂಡೊಯ್ಯುವಂತಿಲ್ಲ. ಇದಕ್ಕೆದಾಖಲೆ ಇರಬೇಕು. ಇಲ್ಲದಿದ್ದರೆ ಮುಟ್ಟುಗೋಲು ಹಾಕಿಕೊಳ್ಳಬೇಕು. ಮುಟ್ಟುಗೋಲು ಹಣವನ್ನುಖಜಾನೆಯಲ್ಲಿಟ್ಟು ರಸೀದಿ ಪಡೆಯಬೇಕು. 10 ಲಕ್ಷ ಕ್ಕಿಂತ ಹೆಚ್ಚು ಹಣ ಸಿಕ್ಕರೆ ಅದನ್ನು ಆಧಾಯ ತೆರಿಗೆಇಲಾಖೆಯ ಗಮನಕ್ಕೆ ತರಬೇಕುಎಂದರು.

ಸಭೆಗೆ ಗೈರಾದವರಿಗೆ ನೋಟಿಸ್‌ : ಸೆಕ್ಟರ್‌, ಫ್ಲೆಯಿಂಗ್‌, ಸ್ಕ್ವಾಡ್‌ ಹಾಗೂ ತನಿಖಾಠಾಣೆಗಳಲ್ಲಿ ಕಾರ್ಯನಿರ್ವಹಿಸಲು ನೇಮಕವಾಗಿರುವ ಅಧಿಕಾರಿಗಳಿಗೆ ಕರೆದಿದ್ದ ಸಭೆಯಲ್ಲಿ ಬಹುತೇಕರು ಗೈರಾಗಿದ್ದರು. ಅಂತಹ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್‌ ನೀಡುವಂತೆಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಸೂಚಿಸಿದರಲ್ಲದೆ,ಗೈರು ಹಾಜರಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಜರುಗಿಸಲಾಗುವುದು ಎಂದರು. ಕೃಷಿ ಇಲಾಖೆ ಜಂಟಿನಿರ್ದೇಶಕ ಹಾಗೂ ಎಂಸಿಸಿ ನೋಡೆಲ್‌ಅಧಿಕಾರಿ ಸೋಮಸುಂದರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ