ಆ್ಯಪ್ನಗರ

ಕಾಫಿ ಗುಣಮಟ್ಟ, ಇಳುವರಿಗೆ ಆದ್ಯತೆ

ಕಾಫಿ ಇಳುವರಿ ಜತೆಗೆ ಗುಣಮಟ್ಟ ಹೆಚ್ಚಿಸಲು ಬೆಳೆಗಾರರಿಗೆ ಸಾಧ್ಯವಾಗುವಂತಹ ಸುಸ್ಥಿರ ಪರಿಹಾರವನ್ನು ಯರಾ ಇಂಡಿಯಾ ಒದಗಿಸಲಿದೆ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಂಜೀವ್‌ ಕನ್ವರ್‌ ಹೇಳಿದರು.

Vijaya Karnataka 24 May 2018, 5:00 am
ಚಿಕ್ಕಮಗಳೂರು :ಕಾಫಿ ಇಳುವರಿ ಜತೆಗೆ ಗುಣಮಟ್ಟ ಹೆಚ್ಚಿಸಲು ಬೆಳೆಗಾರರಿಗೆ ಸಾಧ್ಯವಾಗುವಂತಹ ಸುಸ್ಥಿರ ಪರಿಹಾರವನ್ನು ಯರಾ ಇಂಡಿಯಾ ಒದಗಿಸಲಿದೆ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಂಜೀವ್‌ ಕನ್ವರ್‌ ಹೇಳಿದರು.
Vijaya Karnataka Web coffee quality and yields prefer
ಕಾಫಿ ಗುಣಮಟ್ಟ, ಇಳುವರಿಗೆ ಆದ್ಯತೆ


ನಗರ ಹೊರವಲಯದ ಸೆರಾಯ್‌ ರೆಸಾರ್ಟ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಉತ್ತಮ ಗುಣಮಟ್ಟ ಹಾಗೂ ಇಳುವರಿ ಕಾಪಾಡಿಕೊಂಡು ಬಂದ ಕಾಫಿ ಬೆಳೆಗಾರರಿಗೆ ಯರಾ ಕಪ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಕಾಫಿ ಜನಿಸಿದ ನಾಡು ಚಿಕ್ಕಮಗಳೂರು ಆಗಿದೆ. ರಾಜ್ಯದಲ್ಲಿ ಅತ್ಯುತ್ತಮವಾದ ಕಾಫಿ ತಳಿಗಳಿದ್ದು, ಕಾಫಿ ಬೆಳೆಯುವುದರಲ್ಲಿ ಈ ಜಿಲ್ಲೆ ಪುರಾತನವಾಗಿದೆ. ಬೆಳೆಗಾರರು ಬೆಲೆ ಕುಸಿತ, ಬೆಳೆ ಕುಂಠಿತ, ಕೀಟಬಾಧೆ, ಹವಾಮಾನ ವೈಪರೀತ್ಯದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂದರ್ಭ ಬೆಳೆಗಾರರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಅವರ ಕೃಷಿ ಅಗತ್ಯತೆ ಪೂರೈಸಲು ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.

ದೊಡ್ಡನಗುಡ್ಡೆ ಎಸ್ಟೇಟಿನ ವ್ಯವಸ್ಥಾಪಕ ನಿರ್ದೇಶಕ ಎರೋಲ್‌ ರೆಬೆಲ್ಲೋ ಮಾತನಾಡಿ, ಕಾಫಿಯ ರುಚಿ, ಗುಣಮಟ್ಟ ಮತ್ತಿತರೆ ಹಲವಾರು ಅಂಶದ ಮೇಲೆ ಯರಾ ಇಂಡಿಯಾ ಸೂಪರ್‌ ಕೆಫೆ ಪೋಷಕಾಂಶ ಪರಿಣಾಮ ಬೀರಲಿದೆ. ಯರಾ ಚಾಂಪಿಯನ್‌ ಕಾರ್ಯಕ್ರಮದಿಂದ ಸಮತೋಲಿತ ಪೋಷಕಾಂಶದ ಬಗ್ಗೆ ಬೆಳೆಗಾರರು ಪರಿಣಾಮಕಾರಿಯಾಗಿ ಅರಿತುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಸೇಲ್ಸ್‌ ಮತ್ತು ಆಗ್ರೋನಮಿಯ ಡಿಜಿಎಂ ಬಿನಯ್‌ಕುಮಾರ್‌, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್‌.ಬೋಜೇಗೌಡ ಮತ್ತಿತರರು ಹಾಜರಿದ್ದರು.

ಯರಾ ಇಂಡಿಯಾ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಒಟ್ಟು 41 ಕಾಫಿ ಬೆಳೆಗಾರರು ಭಾಗವಹಿಸಿದ್ದು, ಅದರಲ್ಲಿ 6 ಮಂದಿ ಬೆಳೆಗಾರರನ್ನು ಯರಾ ಕಪ್‌ಗೆ ಆಯ್ಕೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ