ಆ್ಯಪ್ನಗರ

ಜಿಲ್ಲಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಭದ್ರಾ ರಿವರ್‌ ರಾರ‍ಯಫ್ಟಿಂಗ್‌ ಟೆಂಡರ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

Vijaya Karnataka 7 Jul 2019, 5:00 am
ಚಿಕ್ಕಮಗಳೂರು : ಭದ್ರಾ ರಿವರ್‌ ರಾರ‍ಯಫ್ಟಿಂಗ್‌ ಟೆಂಡರ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
Vijaya Karnataka Web complaint to lokayukta against district collector
ಜಿಲ್ಲಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು


ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವಿರುದ್ಧ ಬೆಂಗಳೂರಿನ ಎಂ.ರಾಮಯ್ಯ ಎಂಬುವರು ಚಿಕ್ಕಮಗಳೂರು ಲೋಕಾಯುಕ್ತದಲ್ಲಿ ಜು.1ರಂದು ದೂರು ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜು.9ರಂದು ವಿಚಾರಣೆ ನಡೆಯಲಿದೆ.

ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಭದ್ರಾ ನದಿಯಲ್ಲಿ ರಾರ‍ಯಫ್ಟಿಂಗ್‌ ಚಟುವಟಿಕೆ ನಡೆಸಲು ಟೆಂಡರ್‌ ಆಹ್ವಾನಿಸಿದ್ದು, 3 ಸಂಸ್ಥೆಗಳು ಟೆಂಡರ್‌ ಹಾಕಿದ್ದವು. ಅತಿಹೆಚ್ಚು ಮೊತ್ತಕ್ಕೆ ಬಿಡ್‌ ಮಾಡಿದ್ದ ಏಸ್‌ ಪೆಡ್ಡರ್ಸ್‌ ಸಂಸ್ಥೆಗೆ ಟೆಂಡರ್‌ ನೀಡಲಾಗಿತ್ತು.

ಆದರೆ, ಏಸ್‌ ಪೆಡ್ಡರ್ಸ್‌ ಸಂಸ್ಥೆ ಅಸ್ತಿತ್ವದಲ್ಲೇ ಇಲ್ಲ. ಇದು ಸ್ಟ್ರೈಕ್‌ ಆಫ್‌ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಗೆ ಟೆಂಡರ್‌ ನೀಡಲಾಗಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ಕಾನೂನು ಬಾಹಿರ ಸಂಸ್ಥೆಗೆ ಟೆಂಡರ್‌ ನೀಡಲಾಗಿದೆ. ಇದರಿಂದ ಸರಕಾರಿ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಏಸ್‌ ಪೆಡ್ಡರ್ಸ್‌ ಸಂಸ್ಥೆ ವಿರುದ್ಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು, ಸಂಸ್ಥೆ ನೋಂದಣಿಯಾದ ನಂತರ ಪ್ರತಿವರ್ಷ ಪಾವತಿಸಬೇಕಾದ ವಾರ್ಷಿಕ ಆದಾಯ ತೆರಿಗೆ ಪಾವತಿ ಮಾಡದೆ ವಂಚಿಸಿರುವುದು, ಕಂಪನಿ ಕಾಯಿದೆ ಪ್ರಕಾರ ನಡೆದುಕೊಂಡಿಲ್ಲದ ಕಾರಣ ಮಿನಿಸ್ಟ್ರಿ ಆಫ್‌ ಕಾರ್ಪೋರೇಟ್‌ ಅಪೈರ್ಸ್‌ ಇಲಾಖೆಯು ಈ ಕಂಪನಿಯನ್ನು ಸ್ಟ್ರೈಕ್‌ ಆಫ್‌ ಎಂದು ಘೋಷಿಸಿರುವುದು, ನೀಡಿರುವ ವಿಳಾಸದಲ್ಲಿ ಕಂಪನಿ ಇಲ್ಲದಿರುವುದು ಸೇರಿದಂತೆ ಹಲವು ದಾಖಲೆಗಳನ್ನು ದೂರುದಾರರು ಲಗತ್ತಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ