ಆ್ಯಪ್ನಗರ

ಕಾಂಗ್ರೆಸ್‌ ಆರೋಪ ಬಾಲಿಶತನದ್ದು : ಸಿ.ಟಿ.ರವಿ

ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಕಾಂಗ್ರೆಸ್‌ ಆರೋಪ ಬಾಲಿಶತನದಿಂದಕೂಡಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

Vijaya Karnataka 2 Jan 2020, 5:00 am
ಚಿಕ್ಕಮಗಳೂರು: ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಕಾಂಗ್ರೆಸ್‌ ಆರೋಪ ಬಾಲಿಶತನದಿಂದಕೂಡಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
Vijaya Karnataka Web congress alleges child molestation ct ravi
ಕಾಂಗ್ರೆಸ್‌ ಆರೋಪ ಬಾಲಿಶತನದ್ದು : ಸಿ.ಟಿ.ರವಿ


ಜಿಲ್ಲೆಯ ಸಮಸ್ಯೆಗಳಿಗೆ ಸಚಿವರು ಸ್ಪಂದಿಸುತ್ತಿಲ್ಲಎಂಬ ಕಾಂಗ್ರೆಸ್‌ ಅಧ್ಯಕ್ಷ ಡಾ.ಅಂಶುಮಂತ್‌ ಅವರ ಆರೋಪಕ್ಕೆ ಬುಧವಾರ ಪ್ರತಿಕ್ರಿಯಿಸಿದ ಅವರು, ಅತಿವೃಷ್ಟಿ ಸಂದರ್ಭ ಹಾನಿಯಾದ ರಸ್ತೆ ಅಭಿವೃದ್ಧಿಗೆ 96 ಕೋಟಿ ರೂ. ಬಿಡುಗಡೆಯಾಗಿದೆ. ಮನೆ ಕಳೆದುಕೊಂಡವರಿಗೆ ಭೂಮಿ ಗುರುತಿಸಿದ್ದು ಜಮೀನು ಕಳೆದುಕೊಂಡವರಿಗೆ ಪರಾರ‍ಯಯ ಭೂಮಿ ಗುರುತಿಸುವ ಕೆಲಸ ನಡೆಯುತ್ತಿದೆ. ಫಸಲ್‌ ಬಿಮಾ ದಿಂದ ಬೆಳೆನಷ್ಟಕ್ಕೆ ಪರಿಹಾರ ಕೊಡಿಸಿದ್ದೇವೆ. ಇಷ್ಟೆಲ್ಲಾಮಾಡಿರುವುದು ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದನೆ ಅಲ್ಲವೇ ಎಂದು ಪ್ರಶ್ನಿಸಿದ ಅವರು, ತಾನು ಕಾಂಗ್ರೆಸ್‌ ಅಧ್ಯಕ್ಷ ನಾಗಿದ್ದೇನೆ ಎಂಬ ಅಸ್ತಿತ್ವಕ್ಕಾಗಿ ಡಾ.ಅಂಶುಮಂತ್‌ ಅವರು ಆರೋಪ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಅವರದ್ದೇ ಪಕ್ಷದ ಶಾಸಕರಾದ ಟಿ.ಡಿ.ರಜೇಗೌಡ ಅವರ ಕ್ಷೇತ್ರದ ಸಿರಿಮನೆ ಫಾಲ್ಸ್‌ ಅಭಿವೃದ್ಧಿಗೆ 1 ಕೋಟಿ, ಕಿಗ್ಗಾ ಋುಷ್ಯಶೃಂಗ ದೇವಾಲಯ ಅಭಿವೃದ್ಧಿಗೆ 50 ಲಕ್ಷ ರೂ., ಖಾಂಡ್ಯ ದೇವಸ್ಥಾನ ಹಾಗೂ ರಂಭಾಪುರಿ ಪೀಠದ ಅಭಿವೃದ್ಧಿಗೆ ತಲಾ 1 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಶಾಸಕ ಟಿ.ಡಿ.ರಾಜೇಗೌಡ ಅವರು ನನ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚಿಸಿದ್ದೇನೆ. ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಕಳಸ ಇನಾಂ ಭೂಮಿಗೆ ಪರಾರ‍ಯಯ ಭೂಮಿ ನೀಡಬೇಕು ಎಂದು ಸಂಪುಟದಲ್ಲಿನಿರ್ಧರಿಸಿದ್ದೇವೆ. ಇಷ್ಟೆಲ್ಲಾಮಾಡಿಯೂ ಕಣ್ಣಿದ್ದು, ಕಿವಿಯಿದ್ದು ಇಲ್ಲದವರಂತೆ ವರ್ತಿಸುವರಿಗೆ ಜಗತ್ತಿನಲ್ಲಿಔಷಧವಿಲ್ಲ. ಕಾಂಗ್ರೆಸ್‌ ರಚನಾತ್ಮಕವಾದ ಕೆಲಸ ಮಾಡುತ್ತಿಲ್ಲ. ಅಲ್ಪಸಂಖ್ಯಾತರನ್ನು ತಪ್ಪುದಾರಿಗೆ ಎಳೆದಿದ್ದಾಯ್ತು. ಹೇಳಿಕೆಯನ್ನು ತಿರುಚಿ ಹೇಳುವುದು ಕಾಂಗ್ರೆಸ್‌ ಸ್ವಭಾವ. ಹಾಗಾಗಿ ಕಾಂಗ್ರೆಸ್‌ ಅಧ್ಯಕ್ಷರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ