ಆ್ಯಪ್ನಗರ

ಕಲುಷಿತ ನೀರು: ಕರಕುಚ್ಚಿ ತಾಂಡ್ಯದಲ್ಲಿ ವಾಂತಿ ಭೇದಿ

ತರೀಕೆರೆ ತಾಲೂಕು ಲಕ್ಕವಳ್ಳಿ ಹೋಬಳಿ ಕರಕುಚ್ಚಿ ತಾಂಡ್ಯದಲ್ಲಿ ಕಲುಷಿತ ನೀರು ಕುಡಿದ ಸುಮಾರು 25ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಒಂದು ವಾರದಿಂದ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಶಿವಮೊಗ್ಗ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Vijaya Karnataka 19 Jun 2018, 5:00 am
ಲಿಂಗದಹಳ್ಳಿ: ತರೀಕೆರೆ ತಾಲೂಕು ಲಕ್ಕವಳ್ಳಿ ಹೋಬಳಿ ಕರಕುಚ್ಚಿ ತಾಂಡ್ಯದಲ್ಲಿ ಕಲುಷಿತ ನೀರು ಕುಡಿದ ಸುಮಾರು 25ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಒಂದು ವಾರದಿಂದ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಶಿವಮೊಗ್ಗ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
Vijaya Karnataka Web contaminated water vomiting
ಕಲುಷಿತ ನೀರು: ಕರಕುಚ್ಚಿ ತಾಂಡ್ಯದಲ್ಲಿ ವಾಂತಿ ಭೇದಿ


ಜೂನ್‌ 12ರಂದು ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣ ಕಾಣಿಸಿಕೊಂಡಿದ್ದು, ತರೀಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ರಂಗೇನಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಮಾರು 25 ಜನರು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು, ಹಲವರು ಗುಣಮುಖರಾಗಿದ್ದಾರೆ.

ಕರಕುಚ್ಚಿ ತಾಂಡ್ಯದಲ್ಲಿ ಕುಡಿಯುವ ನೀರಿನ ಪೈಪ್‌ನಲ್ಲಿ ಸಂಗ್ರಹವಾಗಿದ್ದ ಕಲುಷಿತ ನೀರನ್ನು ಉಪಯೋಗಿಸಿರುವ ಜನರಿಗೆ ವಾಂತಿ ಭೇದಿಯಾಗಿದೆ. ಕರಕುಚ್ಚಿ ಪ್ರಾಥಮಿಕ ಅರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಮತ್ತು ತಾಲೂಕಿನ ಆರೋಗ್ಯ ಇಲಾಖೆಯ ತಂಡ ಗ್ರಾಮದ ಮನೆಮನೆಗೆ ತೆರಳಿ ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಜಾಗೃತಿ ಮೂಡಿಸಿದೆ. ಪರಿಸ್ಥಿತಿ ಹತೋಟಿಗೆ ಇಲಾಖೆಯಿಂದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಂಕಪ್ಪ ತಿಳಿಸಿದ್ದಾರೆ.

ಪ್ರಕರಣದ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನೀರಿನ ಪೈಲ್‌ಲೈನ್‌ ಮತ್ತು ವಾಲ್ವ್‌ಗಳನ್ನು ಸರಿಪಡಿಸಲು ತಿಳಿಸಲಾಗಿದೆ ಎಂದು ಟಿಎಚ್‌ಒ ತಿಳಿಸಿದ್ದಾರೆ.

ಕಳೆದ ವಾರದಲ್ಲಿ ಸತತ ಮೂರ್ನಾಲ್ಕು ದಿನ ಸುರಿದ ಮಳೆ ವೇಳೆ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದ ಕಾರಣ ಕಲುಷಿತ ನೀರು ಸೇರಿಕೊಂಡಿದೆ. ಜನರ ಅನಾರೋಗ್ಯದ ಮಾಹಿತಿ ದೊರೆತ ಕೂಡಲೇ ಪೈಪ್‌ಲೈನ್‌ ಮುಖಾಂತರ ನೀಡುತ್ತಿದ್ದ ನೀರಿನ ಸರಬರಾಜನ್ನು ನಿಲ್ಲಿಸಲಾಗಿದೆ. ಶುದ್ಧ ಗಂಗಾ ಕುಡಿಯುವ ನೀರಿನ ಘಟಕದಿಂದ ಉಚಿತವಾಗಿ ನೀರನ್ನು ಕೊಡಲಾಗುತ್ತಿದೆ. ಮತ್ತೊಂದು ಘಟಕದ ಕಾಮಗಾರಿ ಪೂರ್ಣಗೊಂಡಿದ್ದು ಜನತೆಗೆ ನೀರು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎಸ್‌.ಎಲ್‌.ಗಂಗಾಧರಮೂರ್ತಿ 'ಪತ್ರಿಕೆ'ಗೆ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ