ಆ್ಯಪ್ನಗರ

ಜಿಲ್ಲೆಯಲ್ಲಿಮುಂದುವರಿದ ಮಳೆ

ಜಿಲ್ಲೆಯ ಮಲೆನಾಡು ಭಾಗದಲ್ಲಿಮಳೆ ಮುಂದುವರಿದಿದೆ. ಮತ್ತೆ ಭೂಕುಸಿತ ಅಲ್ಲಲ್ಲಿಕಂಡುಬರುತ್ತಿದ್ದು ಜನ ಭಯಭೀತರಾಗಿದ್ದಾರೆ.

Vijaya Karnataka 9 Sep 2019, 5:00 am
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿಮಳೆ ಮುಂದುವರಿದಿದೆ. ಮತ್ತೆ ಭೂಕುಸಿತ ಅಲ್ಲಲ್ಲಿಕಂಡುಬರುತ್ತಿದ್ದು ಜನ ಭಯಭೀತರಾಗಿದ್ದಾರೆ.
Vijaya Karnataka Web 06KTG10JPG_35


ಮೂಡಿಗೆರೆ ,ಶೃಂಗೇರಿ, ಮೂಡಿಗೆರೆ, ಕೊಪ್ಪ, ನ.ರಾ.ಪುರ , ಚಿಕ್ಕಮಗಳೂರಿನ ಕೆಲವು ಭಾಗದಲ್ಲಿಮಳೆಯಾಗುತ್ತಿದ್ದು ಮಳೆಯಿಂದ ಜನ ರೋಸಿಹೋಗಿದ್ದಾರೆ.

ಮೂಡಿಗೆರೆ ಸಮೀಪದ ಹಂಡುಗುಳಿಯಲ್ಲಿಗುಡ್ಡ ಕುಸಿತದಿಂದ 2 ಎಕರೆ ಕಾಫಿ ತೋಟ ಸಂಪೂರ್ಣ ನಾಶವಾಗಿದೆ.ಶೃಂಗೇರಿ ಹಾಗೂ ಕೊಪ್ಪ ತಾಲೂಕಿನಲ್ಲಿಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು ದಿನದಲ್ಲಿ ಕನಿಷ್ಠ 1 ರಿಂದ 3 ಇಂಚು ಮಳೆ ಬೀಳುತ್ತಿದೆ. ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿಈ ಪ್ರಮಾಣ ಹೆಚ್ಚಿದೆ. ಎಲ್ಲೂನೆರೆ ಹಾವಳಿ ಬಗ್ಗೆ ವರದಿಯಾಗಿಲ್ಲ.

ಮಳೆ ನಿರಂತರವಾಗಿ ಬಾರದಿದ್ದರೂ ಆಗಾಗ್ಗೆ ರಭಸದ ಗಾಳಿ ಬೀಸುವ ಜತೆಗೆ ದಟ್ಟ ಮೋಡ ಕವಿಯುತ್ತಿದ್ದು ಜೋರಾಗಿ ಮಳೆ ಸುರಿದು ಮತ್ತೆ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಶೃಂಗೇರಿ ಭಾಗದಲ್ಲಿತುಂಗಾ ನದಿ ತುಂಬಿ ಹರಿಯುತ್ತಿದೆ. ಭದ್ರಾ ಕೂಡ ಮಳೆಯಿಂದ ಮೈದುಂಬಿ ಹರಿಯುತ್ತಿದೆ. ಮೂಡಿಗೆರೆ ತಾಲೂಕಿನಲ್ಲಿಮಳೆ ಹೆಚ್ಚು ಆಗುತ್ತಿರುವ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರಿನ ಕೆಲ ಭಾಗದಲ್ಲಿಸೋನೆ ಮಳೆಯಾಗುತ್ತಿದ್ದು ರಸ್ತೆಯಲ್ಲಕೆಸರುಮಯವಾಗಿದ್ದು ವಾತಾವರಣದಲ್ಲಿಥಂಡಿ ಆವರಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ