ಆ್ಯಪ್ನಗರ

ನೀಲಗಿರಿ ಪ್ಲಾಂಟೇಷನ್‌ನಲ್ಲಿ ಮುಂದುವರಿದ ಕಾಳ್ಗಿಚ್ಚು

ತಾಲೂಕಿನ ಸಂಕ್ಸೆ ಗ್ರಾಮದಲ್ಲಿ ಕೆಎಫ್‌ಡಿಸಿಗೆ ಸೇರಿದ 50 ಹೆಕ್ಟೇರ್‌ ಪ್ರದೇಶದ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಶನಿವಾರವೂ ಮುಂದುವರಿದೆ. ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕಿಗೆ ಸೇರಿದ 2 ಅಗ್ನಿಶಾಮಕದಳ ವಾಹನಗಳು ಬೆಂಕಿ ನಂದಿಸುವಲ್ಲಿ ಶ್ರಮಿಸುತ್ತಿದ್ದಾರೆ.

Vijaya Karnataka 24 Feb 2019, 5:00 am
ನರಸಿಂಹರಾಜಪುರ: ತಾಲೂಕಿನ ಸಂಕ್ಸೆ ಗ್ರಾಮದಲ್ಲಿ ಕೆಎಫ್‌ಡಿಸಿಗೆ ಸೇರಿದ 50 ಹೆಕ್ಟೇರ್‌ ಪ್ರದೇಶದ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಶನಿವಾರವೂ ಮುಂದುವರಿದೆ. ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕಿಗೆ ಸೇರಿದ 2 ಅಗ್ನಿಶಾಮಕದಳ ವಾಹನಗಳು ಬೆಂಕಿ ನಂದಿಸುವಲ್ಲಿ ಶ್ರಮಿಸುತ್ತಿದ್ದಾರೆ.
Vijaya Karnataka Web CKM-23nrp2


ಶುಕ್ರವಾರ ಮಧ್ಯಾಹ್ನ ಸುತ್ತ- ನೇತಗಲ್‌ ಸಮೀಪ ಪ್ಲಾಂಟೇಶನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಮಾಹಿತಿ ನೀಡುವಂತೆ ಅರಣ್ಯ ರಕ್ಷ ಕ ಮಂಜುನಾಥ್‌ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದರು. ಪ್ಲಾಂಟೇಶನ್‌ನಲ್ಲಿ ಬೈಕ್‌ ನಿಲ್ಲಿಸುತ್ತಿದ್ದಂತೆ ಗಾಳಿಯಿಂದಾಗಿ ಸುತ್ತಲೂ ಬೆಂಕಿ ಹತ್ತಿಕೊಂಡಿದೆ. ತಕ್ಷ ಣ ಬೈಕ್‌ ಬಿಟ್ಟು ಮಂಜುನಾಥ್‌ ಓಡಿಹೋಗಿದ್ದು, ಬೈಕ್‌ ಸಂಪೂರ್ಣ ಸುಟ್ಟುಹೋಗಿದೆ. ಅರಣ್ಯ ರಕ್ಷ ಕ ಮಂಜುನಾಥ್‌ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು,ಚಿಕಿತ್ಸೆ ಪಡೆದಿದ್ದಾರೆ.

ಕಾಡಿನ ಬೆಂಕಿಯಿಂದಾಗಿ ಚಿಟ್ಟಿಕೊಡಿಗೆಯ ಸಾಜು ಎಂಬುವರ ಕೊಟ್ಟಿಗೆ ಸಂಪೂರ್ಣ ಸುಟ್ಟುಹೋಗಿದೆ. ಕೊಟ್ಟಿಗೆಯಲ್ಲಿದ್ದ ಪ್ಲಾಸ್ಟಿಕ್‌ ಡ್ರಂ, ಟಾರ್ಪೆಲ್‌, ಸೈಕಲ್‌, ಬಟ್ಟೆ, ಟಾರ್ಪೆಲ್‌ ಹಾಗೂ ಕೊಟ್ಟಿಗೆಯಲ್ಲಿದ್ದ ಎಂ.ಇ.ಜೋಸೆಫ್‌ ಅವರಿಗೆ ಸೇರಿದ ಒಣ ಹುಲ್ಲು ಸಂಪೂರ್ಣ ಸುಟ್ಟುಹೋಗಿದೆ. ಡೆನ್ನಿ, ಜೋಸೆಫ್‌, ನೇತಗಲ್‌ನ ಮಾತು ಕುರಿಯಾಕೋಸ್‌, ವರ್ಗೀಸ್‌, ಎಲಿಯಾಸ್‌, ಯಾಕೂಬ್‌ ಅವರಿಗೆ ಸೇರಿದ 4 ಎಕರೆ ರಬ್ಬರ್‌ ತೋಟ ಸುಟ್ಟುಹೋಗಿದೆ.

ಮುಂದುವರಿದ ಬೆಂಕಿ : ಶನಿವಾರವೂ ಕಾಳ್ಗಿಚ್ಚು ಹಬ್ಬುತ್ತಿದ್ದು, ಗಾಳಿ ಹಾಗೂ ಬಿಸಿಲಿನ ಪ್ರಕರತೆಯಿಂದಾಗಿ ಮತ್ತೆ ಪ್ಲಾಂಟೇಶನ್‌ನಲ್ಲಿ ಅಲ್ಲಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡ ಜಾಗದಲ್ಲಿ ಅಗ್ನಿಶಾಮಕದಳದವರು ಬೆಂಕಿ ನಂದಿಸುತ್ತಿದ್ದಾರೆ. ಸ್ಥಳಕ್ಕೆ ಎಸಿಎಫ್‌ ಕೆ.ಟಿ.ಬೋರಯ್ಯ, ವಲಯ ಅರಣ್ಯಾಧಿಕಾರಿ ರಂಗನಾಥ್‌, ಶೆಟ್ಟಿಕೊಪ್ಪ ಉಪ ವಲಯ ಅರಣ್ಯಾಧಿಕಾರಿ ರಘು, ರೆವಿನ್ಯೂ ಇನ್ಸ್‌ಪೆಕ್ಟರ್‌ ನಾಗೇಂದ್ರಪ್ಪ, ಗ್ರಾಮ ಲೆಕ್ಕಾಧಿಕಾರಿ ಕುಮಾರಸ್ವಾಮಿ, ಕಾನೂರು ಗ್ರಾ.ಪಂ. ಸದಸ್ಯ ಮನೋಹರ್‌ ಭೇಟಿ ನೀಡಿದ್ದರು.

ಭೀತಿಯಲ್ಲಿ ಸ್ಥಳೀಯರು :
ಪ್ಲಾಂಟೇಷನ್‌ ಬೆಂಕಿ ಹಾಗೂ ಹೊಗೆಯಿಂದಾಗಿ ಸಮೀಪದ ಸುತ್ತ, ನೇತ್ಕಲ್‌, ಚಿಟ್ಟಿಕೊಡಿಗೆಯ ಸ್ಥಳೀಯರು ಭಯ ಭೀತರಾಗಿದ್ದಾರೆ. ಸಮೀಪದಲ್ಲೇ ಮನೆ ಕಟ್ಟಿಕೊಂಡು ವಾಸವಾಗಿರುವ ರೈತರು, ಬೆಂಕಿ ನಂದಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಜತೆ ಕೈಜೋಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ