ಆ್ಯಪ್ನಗರ

ಕೊರೊನಾ ಮರೆತು ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು..! ಮಾಸ್ಕ್‌, ಸಾಮಾಜಿಕ ಅಂತರ ಮರೆತ ಜನ

ಕೊರೊನಾ ವೈರಸ್‌ ಪ್ರಕರಣಗಳ ಏರಿಕೆಯ ನಡುವೆಯೂ ಪ್ರವಾಸಿಗರ ದಂಡು ಮುಳ್ಳಯ್ಯನಗಿರಿಗೆ ಹರಿದುಬರುತ್ತಿದೆ. ಭಾನುವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗಿರಿ ಸಾಲನ್ನು ವೀಕ್ಷಿಸಲು ಬಂದಿದ್ದರು. ಆದರೆ, ಮೋಜು-ಮಸ್ತಿಯ ನಡುವೆ, ಮಾಸ್ಕ್‌ ಧರಿಸುವುದು ಹಾಗೂ ಸಾಮಾಜಿಕ ಅಂತರ ಮರೆತಿರುವುದು ಕಂಡುಬಂತು

Vijaya Karnataka Web 28 Jun 2020, 7:40 pm
ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆಯೂ ಭಾನುವಾರ ಜಿಲ್ಲೆಯ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು ಹರಿದುಬಂದಿತ್ತು. ಕೊರೊನಾ ಮರೆತು ಪ್ರವಾಸಿಗರು ಪ್ರವಾಸಿ ತಾಣಗಳಲ್ಲಿ ನಿರಂತರ ಮೋಜು-ಮಸ್ತಿಗೆ ಮುಂದಾಗಿದ್ದು, ಜನ ಮಾಸ್ಕ್‌ ಧರಿಸದೇ ಇರುವುದು ಹಾಗೂ ಸಾಮಾಜಿಕ ಅಂತರವಿಲ್ಲದೇ ಓಡಾಡುತ್ತಿರುವುದು ಕಂಡುಬಂತು.
Vijaya Karnataka Web coronavirus outbreak tourists visit mullayanagiri hill without mask and social distance
ಕೊರೊನಾ ಮರೆತು ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು..! ಮಾಸ್ಕ್‌, ಸಾಮಾಜಿಕ ಅಂತರ ಮರೆತ ಜನ


ರಾಜ್ಯದಲ್ಲಿಯೇ ಅತೀ ಎತ್ತರದ ಪ್ರದೇಶವಾದ ಮುಳ್ಳಯ್ಯನ ಗಿರಿಗೆ ರಾಜ್ಯ, ಹೊರರಾಜ್ಯದಿಂದ ಸಹಸ್ರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸುತ್ತಿದೆ. ಹೊರ ಜಿಲ್ಲೆ, ಹೊರ ರಾಜ್ಯದಿಂದ ಬರುತ್ತಿರುವ ಪ್ರವಾಸಿಗರಿಂದ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಎಂಬ ಭಯ ಜಿಲ್ಲೆಯಲ್ಲಿ ಶುರುವಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮಳೆ ಆಗಿದೆ. ಈ ಹಿನ್ನೆಲೆ ಮುಳ್ಳಯ್ಯನಗಿರಿಯಲ್ಲಿ ಸದಾ ಮಂಜು ಕವಿದ ವಿಶಿಷ್ಟ ವಾತಾವರಣ ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈಗಾಗಲೇ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲು ಕೂಡ ಜಿಲ್ಲೆಯಲ್ಲಿ ಸಚಿವರು ಸೂಚಿಸಿರುವುದು, ಪ್ರವಾಸಿಗರ ಹೆಚ್ಚಳಕ್ಕೆ ಕಾರಣವಾಗಿದೆ.

ಮಿನಿ ಬಸ್‌, ಟಿಟಿ, ಕಾರು ಮತ್ತಿತರೆ ಖಾಸಗಿ ವಾಹನಗಳಲ್ಲಿ ಪ್ರವಾಸಿಗರು ವಾರಾಂತ್ಯದ ನೆಪದಲ್ಲಿ ಮುಳ್ಳಯ್ಯನಗಿರಿಗೆ ಆಗಮಿಸುತ್ತಿದ್ದಾರೆ. ಬೆಂಗಳೂರು ಸೇರಿ ತಮಿಳುನಾಡು, ಕೇರಳ ಮತ್ತಿತರೆ ರಾಜ್ಯದ ವಾಹನಗಳು ಇಲ್ಲಿಗೆ ಬರುತ್ತಿವೆ. ಚೆಕ್‌ಪೋಸ್ಟ್‌ನಲ್ಲಿ ಪ್ರವಾಸಿಗರ ವಾಹನ ತಪಾಸಣೆ ಮಾಡಿ ಬಿಡಲಾಗುತ್ತಿದ್ದರೂ ಸ್ಕ್ರೀನಿಂಗ್‌, ಸ್ಯಾನಿಟೈಜೇಸನ್‌ ಆಗುತ್ತಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ