ಆ್ಯಪ್ನಗರ

ಭ್ರಷ್ಟಾಚಾರದ ಆರೋಪ : ಡಿಎಚ್‌ಒ ಕಚೇರಿ ಮುಂದೆ ಪ್ರತಿಭಟನೆ

ಡಿಎಚ್‌ಒ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

Vijaya Karnataka 31 Jan 2019, 5:00 am
ಚಿಕ್ಕಮಗಳೂರು: ಡಿಎಚ್‌ಒ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
Vijaya Karnataka Web CKM-30rudrap1


ನಗರದ ಡಿಎಚ್‌ಒ ಕಚೇರಿ ಮುಂದೆ ಬುಧವಾರ ಧರಣಿ ನಡೆಸಿದ ಹಲವಾರು ಕಾರ್ಯಕರ್ತರು ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಿಸಬೇಕು ಹಾಗೂ ಆಶಾ ಕಾರ್ಯಕರ್ತರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ದಲಿತ ಸಂಘಟನೆಯ ಮುಖಂಡ ಕೆ.ಜೆ.ಮಂಜುನಾಥ ಮಾತನಾಡಿ, ವಸ್ತರೆ ಪಿಎಚ್‌ಸಿ ವ್ಯಾಪ್ತಿಯ ಎಲ್ಲ ಅಶಾ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಕೂದುವಳ್ಳಿ ಆರೋಗ್ಯ ಉಪಕೇಂದ್ರದ ನರ್ಸ್‌ ಒಬ್ಬರು ಸ್ಥಳದಲ್ಲಿದ್ದು ಕೆಲಸ ಮಾಡದೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಚುಚ್ಚುಮದ್ದು ನೀಡುವ ಸಂದರ್ಭ ಮಹಿಳೆಯರಿಂದ ಹಣಕ್ಕಾಗಿ ಪೀಡಿಸುತ್ತಾರೆ ಎಂಬ ದೂರಿದೆ ಎಂದು ಆರೋಪಿಸಿದರು.

ಆಯುಷ್ಮಾನ್‌ ಭಾರತ್‌ ಯೋಜನೆ ಅನುಷ್ಠಾನ ಮಾಡಲು ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಬಿಕಾಂ ಮತ್ತು ಎಂಬಿಎ ಓದಿರುವ ಪ್ರತಿಭಾವಂತರನ್ನು ಕಾರ್ಯನಿರ್ವಾಹಕ ಹುದ್ದೆ ನೇಮಿಸಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ, ಡಿಎಚ್‌ಒ ಕಚೇರಿಯಲ್ಲಿ ಒಳ ಒಪ್ಪಂದ ಮಾಡಿಕೊಂಡು ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ದೂರಿದರು. ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್‌, ಅಂಗಡಿಚಂದ್ರು, ಲೋಕೇಶ್‌, ಪೂರ್ಣೇಶ್‌ ಮತ್ತಿತರರು ಹಾಜರಿದ್ದರು. ಜಿ.ಪಂ.ಸಿಇ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ