ಆ್ಯಪ್ನಗರ

ಕಳಸ ಸುತ್ತಮುತ್ತ ಗುಡ್ಡ ಕುಸಿತ: ಸಂಚಾರ ಅಸ್ತವ್ಯಸ್ಥ

ಕಳಸ ತಾಲೂಕಿನಾದ್ಯಂತ ವರುಣನ ಆರ್ಭಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಭದ್ರಾ ನದಿ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ.

Vijaya Karnataka 9 Jul 2019, 5:00 am
ಕಳಸ : ಕಳಸ ತಾಲೂಕಿನಾದ್ಯಂತ ವರುಣನ ಆರ್ಭಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಭದ್ರಾ ನದಿ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ.
Vijaya Karnataka Web BNG-CKM-8KLS7


ಶನಿವಾರದಿಂದ ಬಿರುಸುಗೊಂಡಿದ್ದ ಮಳೆ ಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿತ್ತು. ಆದರೆ ಸೋಮವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ತುಂಬಿ ಹರಿಯುತ್ತಿದ್ದ ನದಿಗಳ ನೀರಿನ ಮಟ್ಟ ಕಡಿಮೆಯಾಗಿ ಅಲ್ಲಲ್ಲಿ ಭೂಕುಸಿತಗಳು ಪ್ರಾರಂಭವಾಗಿದೆ.

ಕಳಸ-ಕುದುರೆಮುಖ ರಾಜ್ಯ ಹೆದ್ದಾರಿಯ ಕಾರಗದ್ದೆ ಸಮೀಪ ಹಾಗೂ ಕುದುರೆಮುಖ ಸಮೀಪ ಗುಡ್ಡ ಜರಿದು ಗುಡ್ಡ ಜರಿದು ವಾಹನ ಸವಾರರಿಗೆ ಅಡಚಣೆ ಉಂಟಾಗಿದೆ. ಜರಿದು ಬಿದ್ದ ಮಣ್ಣು ಗಜಗಾತ್ರದ ಕಲ್ಲುಗಳು ರಸ್ತೆಯನ್ನು ಆವರಿಸಿದೆ.

ಕಳಸ-ಮಂಗಳೂರು ರಸ್ತೆಯುದ್ದಕ್ಕೂ ಅಲ್ಲಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಸಂಸೆ ಗ್ರಾ.ಪಂ. ವ್ಯಾಪ್ತಿಯ ಗುಳ್ಯ ಗ್ರಾಮದಲ್ಲಿ ಹರಿಯುವ ನದಿಗೆ ಸೇತುವೆ ಸಂಪರ್ಕವಿಲ್ಲದೆ ಗ್ರಾಮಸ್ಥರೇ ಬಿದಿರು ಬಳ್ಳಿಯಿಂದ ನಿರ್ಮಿಸಿದ ತೂಗು ಸೇತುವೆಯ ಮೇಲೆ ಸಂಚಾರ ಮಾಡುವ ಅನಿವಾರ್ಯತೆ ಎದುರಾಗಿದೆ. ಕಳಸ ಗ್ರಾ.ಪಂ. ವ್ಯಾಪ್ತಿಯ ಕಾರ್ಲೆ ಗ್ರಾಮದಲ್ಲಿ ಶಿಥಿಲಗೊಂಡ ಸೇತುವೆಯಲ್ಲಿ ಪ್ರಾಣ ಭಯದಿಂದ ಹೋಗುವಂತಾಗಿದೆ. ಅದೇ ಗ್ರಾಮದಲ್ಲಿ ಹಳ್ಳವೊಂದರಲ್ಲಿ ನೀರು ತುಂಬಿ ಹರಿಯುತ್ತಿದ್ದು, ಸೇತುವೆ ಇಲ್ಲದ ಪರಿಣಾಮ ಗ್ರಾಮದ ಹತ್ತಾರು ಮನೆಗಳ ಸಂಪರ್ಕ ಕಡಿತಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ