ಆ್ಯಪ್ನಗರ

ಸ್ವಾಮೀಜಿಗಳಿಗೆ ಸಿ.ಟಿ.ರವಿ ದಂಪತಿ ಪಾದಪೂಜೆ

ರಾಜ್ಯದ ನಾನಾ ಗುರುಪೀಠಗಳ ಎಂಟು ಸ್ವಾಮೀಜಿಗಳಿಗೆ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ದಂಪತಿ ಶನಿವಾರ ತಮ್ಮ ನಿವಾಸದಲ್ಲಿ ಪಾದಪೂಜೆ ನೆರವೇರಿಸಿ, ಗುರುಕಾಣಿಕೆ ಸಲ್ಲಿಸಿದರು.

Vijaya Karnataka 25 Mar 2018, 5:00 am
ಚಿಕ್ಕಮಗಳೂರು : ರಾಜ್ಯದ ನಾನಾ ಗುರುಪೀಠಗಳ ಎಂಟು ಸ್ವಾಮೀಜಿಗಳಿಗೆ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ದಂಪತಿ ಶನಿವಾರ ತಮ್ಮ ನಿವಾಸದಲ್ಲಿ ಪಾದಪೂಜೆ ನೆರವೇರಿಸಿ, ಗುರುಕಾಣಿಕೆ ಸಲ್ಲಿಸಿದರು.
Vijaya Karnataka Web ct ravis husband is a pediatrician to swamiji
ಸ್ವಾಮೀಜಿಗಳಿಗೆ ಸಿ.ಟಿ.ರವಿ ದಂಪತಿ ಪಾದಪೂಜೆ


ಹೊಸದುರ್ಗ ಭಗೀರಥ ಪೀಠದ ಶ್ರೀಪುರುಷೋತ್ತಮಾನಂದ ಸ್ವಾಮೀಜಿ, ಹರಿಹರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನ ವಾಲ್ಮೀಕಿ ಸ್ವಾಮೀಜಿ, ಚಿತ್ರದುರ್ಗ ಮಾದಾರ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಯಾದವ ಗುರುಪೀಠದ ಶ್ರೀದಯಾನಂದ ಸ್ವಾಮೀಜಿ, ಹುಂಚದ ನಾರಾಯಣ ಮಹಾ ಸಂಸ್ಥಾನದ ಶ್ರೀರೇಣುಕಾನಂದ ಸ್ವಾಮೀಜಿ, ಚಿತ್ರದುರ್ಗ ಲಂಬಾಣಿ ಗುರುಪೀಠದ ಶ್ರೀಸದ್ದರ್ಮ ಸೇವಾಲಾಲ್‌ ಸ್ವಾಮೀಜಿ, ಗುಲ್ಬರ್ಗ ವಾಡಿಯ ಸವಿತಾ ಗುರುಪೀಠದ ಶ್ರೀಧರ ಸ್ವಾಮೀಜಿ, ಚಿತ್ರದುರ್ಗ ಮಡಿವಾಳ ಗುರುಪೀಠದ ಶ್ರೀಬಸವ ಮಾಚಿದೇವ ಸ್ವಾಮೀಜಿ ಪಾಲ್ಗೊಂಡಿದ್ದರು.

ನಿವಾಸಕ್ಕೆ ಆಗಮಿಸಿದ ಎಲ್ಲ ಸ್ವಾಮೀಜಿಗಳ ಪಾದ ತೊಳೆದು ಗಂಧ, ವಿಭೂತಿ ಹಚ್ಚಿ, ಅಕ್ಷತೆ ಹಾಕಿ ಕರ್ಪೂರದಾರತಿ ಮಾಡಿ ಸಿ.ಟಿ.ರವಿ ಹಾಗೂ ಪಲ್ಲವಿ ಆಶೀರ್ವಾದ ಪಡೆದರು. ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡಿದ್ದರು.

ಭಗೀರಥ ಪೀಠದ ಶ್ರೀಪುರುಷೋತ್ತಮಾನಂದ ಸ್ವಾಮೀಜಿ ಮಾತನಾಡಿ, ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸಂತರು, ಮಹಾತ್ಮರು, ದಾರ್ಶನಿಕರಿಗೆ ವಿಶೇಷ ಗೌರವ ನೀಡಲಾಗುತ್ತದೆ. ಪ್ರತಿಯೊಬ್ಬರೂ ಸಮಾಜದಲ್ಲಿ ಸಾತ್ವಿಕ ಸಜ್ಜನರಾಗಬೇಕು. ಸದ್ಗುಣ ಸಂಪನ್ನರಾಗಿ ಸುಸಂಸ್ಕೃತ ಸಮಾಜ ನಿರ್ಮಾಣ ಆಗಬೇಕು ಎಂದು ಆಶಿಸಿದರು.

ಸಚ್ಚಿಂತನೆಗೆ ಪ್ರೇರಣೆಯಾಗಲಿ

'ಪ್ರತಿ ಬಾರಿ ಗುರುಗಳ ಕ್ಷೇತ್ರಕ್ಕೆ ತೆರಳಿ ಆಶೀರ್ವಾದ ಪಡೆದು ಬರುತ್ತಿದ್ದೆ. ಈ ಬಾರಿ ಗುರುಗಳೇ ಇಲ್ಲಿಗೆ ಬರುವ ಇಂಗಿತ ವ್ಯಕ್ತಪಡಿಸಿ ಆಗಮಿಸಿದ್ದಾರೆ. ಸದಾ ಕಾಲ ಕರ್ತವ್ಯಮುಖಿಯಾಗಿ, ಉತ್ತಮ ಚಿಂತನೆಯ ಕಾರ‍್ಯಗಳಿಗೆ ಇದು ಪ್ರೇರಣೆಯಾಗಲಿ ಎಂದು ಗುರುಗಳಲ್ಲಿ ಪ್ರಾರ್ಥಿಸುತ್ತೇನೆ'

-ಸಿ.ಟಿ.ರವಿ, ಶಾಸಕ

ಸಿ.ಟಿ.ರವಿ ಸಂಸ್ಕಾರವಂತ

'ಶಾಸಕ ಸಿ.ಟಿ.ರವಿ ಧರ್ಮ ಮತ್ತು ಮೌಲ್ಯಗಳನ್ನು ಒಟ್ಟಿಗೆ ಕೊಂಡೊಯ್ಯುತ್ತಿದ್ದಾರೆ. ಜಾತಿ, ವ್ಯಕ್ತಿ, ಧರ್ಮ ರಾಜಕಾರಣ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಮೌಲ್ಯಾಧಾರಿತ ರಾಜಕಾರಣ ಮಾಡುವುದು ಕಷ್ಟ. ಆದರೆ, ಸಿ.ಟಿ.ರವಿ ಧರ್ಮದ ಜತೆಗೆ ಮೌಲ್ಯ, ಭಾವೈಕ್ಯತೆ ಮೂಡಿಸುವ ರಾಜಕಾರಣ ಮಾಡಿ ಮಾದರಿಯಾಗಿದ್ದಾರೆ. ಸಿ.ಟಿ.ರವಿ ಸಂಸ್ಕಾರವಂತ. ರಾಜಕೀಯ, ಸಮಾಜ ಸೇವೆಯಲ್ಲಿ ಸಾತ್ವಿಕರಾಗಿ ಸರಳತೆಯಿಂದ ಗಮನ ಸೆಳೆದಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ ಈ ಕಾರ‍್ಯಕ್ರಮವನ್ನು ಅನ್ಯ ಅರ್ಥದಲ್ಲಿ ಕಲ್ಪಿಸುವ ಅಗತ್ಯವಿಲ್ಲ'

-ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಗುರುಪೀಠ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ