ಆ್ಯಪ್ನಗರ

ಕಾಡಾನೆ ದಾಳಿಗೆ ಬೆಳೆ, ಪಂಪ್‌ ಸೆಟ್‌ ನಾಶ

ಕೊಡೆಬೈಲ್‌ ಗ್ರಾಮದಲ್ಲಿ ಕಾಡಾನೆಗಳ ಹಾವಳಿಗೆ ರೈತ ಲಕ್ಷ ್ಮಣಗೌಡ ಅವರ ಕಾಫಿಗಿಡ , ಅಡಕೆ ಮರಗಳು ನಜ್ಜುಗುಜ್ಜಾಗಿದ್ದು, ಪಂಪ್‌ ಸೆಟ್‌ಗಳಿಗೆ ಹಾನಿಯಾಗಿದೆ.

Vijaya Karnataka 25 Sep 2018, 5:00 am
ಬಣಕಲ್‌ : ಕೊಡೆಬೈಲ್‌ ಗ್ರಾಮದಲ್ಲಿ ಕಾಡಾನೆಗಳ ಹಾವಳಿಗೆ ರೈತ ಲಕ್ಷ ್ಮಣಗೌಡ ಅವರ ಕಾಫಿಗಿಡ , ಅಡಕೆ ಮರಗಳು ನಜ್ಜುಗುಜ್ಜಾಗಿದ್ದು, ಪಂಪ್‌ ಸೆಟ್‌ಗಳಿಗೆ ಹಾನಿಯಾಗಿದೆ.
Vijaya Karnataka Web CKM-24ktg1


ಕಾಡಾನೆಗಳ ಹಾವಳಿಗೆ 20ರಿಂದ 30 ವರ್ಷದ ಹಳೆಯ ಹತ್ತಾರು ರೊಬಾಸ್ಟಾ ಕಾಫಿಗಿಡಗಳು ನಾಶವಾಗಿವೆ. ಮುಗಿಲೆತ್ತರಕ್ಕೆ ಬೆಳೆದು ನಿಂತ ಸಾವಿರಾರು ಅಡಕೆ ಮರಗಳು ನೆಲಕುರುಳಿವೆ. ಬೆಳೆಗಳಿಗೆ ನೀರು ಹಾಯಿಸಲು ತೋಟದಲ್ಲಿ ಇಟ್ಟಿದ್ದ ಪಂಪ್‌ಸೆಟ್‌ನ್ನು ತುಳಿದು ಹಾನಿಗೊಳಿಸಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಈ ಬಗ್ಗೆ ಮಾತನಾಡಿದ ರೈತ ಲಕ್ಷ ್ಮಣಗೌಡ, ಕಾಡಾನೆಗಳ ಉಪಟಳದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು, ಕಾರ್ಮಿಕರ ಕೊರತೆ, ಕಡಿಮೆ ಇಳುವರಿ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಮಲೆನಾಡು ಭಾಗದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇವೆಲ್ಲದರ ನಡುವೆಯೂ ಕೆಲ ರೈತರು ಕೃಷಿ ಮಾಡಲು ಮನಸ್ಸು ಮಾಡಿದರೂ ವನ್ಯಜೀವಿಗಳಿಂದ ಹಾಳಾಗುತ್ತಿದೆ. ಸರಕಾರ ಕೂಡಲೇ ಇದಕ್ಕೊಂದು ಶಾಶ್ವತ ಪರಿಹಾರ ಹುಡುಕಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ