ಆ್ಯಪ್ನಗರ

ದೇವರ ಉತ್ಸವದಲ್ಲಿಕುಣಿದು ಮಣೇವು ಅರ್ಪಿಸಿದ ದತ್ತ

ತಾಲೂಕಿನ ಯಗಟಿ ಗ್ರಾಮದಲ್ಲಿನಡೆದ ಶ್ರೀ ಅರೇಕಲ್ಲಮ್ಮ ದೇವಾಲಯದ ಕಳಸಾರೋಹಣ ಕಾರ್ಯಕ್ರಮದಲ್ಲಿಮಾಜಿ ಶಾಸಕ ವೈ.ಎಸ್‌.ವಿ.ದತ್ತ ಅವರು ಮಣೇವು ಕುಣಿತ ನಡೆಸಿದ ವಿಡಿಯೊ ಈಗ ವೈರಲ್‌ ಆಗಿದೆ.

Vijaya Karnataka 9 Dec 2019, 5:00 am
ಕಡೂರು: ತಾಲೂಕಿನ ಯಗಟಿ ಗ್ರಾಮದಲ್ಲಿನಡೆದ ಶ್ರೀ ಅರೇಕಲ್ಲಮ್ಮ ದೇವಾಲಯದ ಕಳಸಾರೋಹಣ ಕಾರ್ಯಕ್ರಮದಲ್ಲಿಮಾಜಿ ಶಾಸಕ ವೈ.ಎಸ್‌.ವಿ.ದತ್ತ ಅವರು ಮಣೇವು ಕುಣಿತ ನಡೆಸಿದ ವಿಡಿಯೊ ಈಗ ವೈರಲ್‌ ಆಗಿದೆ.
Vijaya Karnataka Web 8KDR2_35


ಶುಕ್ರವಾರ ನಡೆದ ಕಳಸ ಪ್ರತಿಷ್ಠಾಪನ ಕಾರ್ಯಕ್ರಮದ ಸಂದರ್ಭ ಉತ್ಸವ ಮೂರ್ತಿಯನ್ನು ಗಂಗಾಪೂಜೆ ಮತ್ತು 12 ಪರಿವಾರ ದೇವರುಗಳೊಂದಿಗೆ ಮೂಲಸ್ಥಾನದಿಂದ ಯಗಟಿ ಗ್ರಾಮಕ್ಕೆ ತರಲಾಯಿತು. 101 ಮಹಿಳೆಯರ ಪೂರ್ಣಕುಂಭವೂ ಮೆರವಣಿಗೆಗೆ ಇಂಬು ನೀಡಿತ್ತು.

ದೇವರ ಮೆರವಣಿಗೆಯಲ್ಲಿಯುವಕರೊಂದಿಗೆ ಹೆಜ್ಜೆ ಹಾಕುತ್ತಾ ಸಾಗಿದ ದತ್ತ ಅವರು ಅರೇಕಲ್ಲಮ್ಮ ದೇವಾಲಯದ ಮುಂದೆ ಹಣ್ಣಿನ ರಸಾಯನ ಇಟ್ಟು ಮಣೇವು ಮಾಡುವ ಸಂದರ್ಭ ಯುವಕರೊಂದಿಗೆ ಕುಣಿದು ಕುಪ್ಪಳಿಸಿದರು. ತಮ್ಮ ಕೈಯಲ್ಲಿದ್ದ ಟವಲ್‌ ಹಿಡಿದುಕೊಂಡು ಹೂಂಕರಿಸುತ್ತಾ ಹೆಜ್ಜೆ ಹಾಕಿದರು. ಇದನ್ನು ಕಂಡು ನೋಡುತ್ತಿದ್ದ ನೂರಾರು ಜನರು ಶಿಳ್ಳೆ ಹಾಕುತ್ತಾ ಇನ್ನಷ್ಟು ಪ್ರೋತ್ಸಾಹ ನೀಡಿದರು. ತಮಟೆ ವಾದ್ಯಗಾರರು ಚೇತೋಹಾರಿಯಾಗಿ ತಮಟೆಯನ್ನು ನುಡಿಸಿದರು.

ಈ ನೃತ್ಯದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ವಾಟ್ಸಪ್‌ನಲ್ಲಿವೈರಲ್‌ ಆಗಿದ್ದು, ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆ ದತ್ತ ಅವರು ತಮ್ಮ ಪತ್ನಿಯೊಂದಿಗೆ ರೈಲು ನಿಲ್ದಾಣದಲ್ಲಿರೈಲಿಗಾಗಿ ಕಾಯುತ್ತಿದ್ದ ದೃಶ್ಯವೊಂದು ಇದೇ ರೀತಿ ವೈರಲ್‌ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ