ಆ್ಯಪ್ನಗರ

ಚಿಕ್ಕಮಗಳೂರು: ತೆಪ್ಪದಲ್ಲಿ ಮೃತದೇಹ ಸಾಗಣೆ

ರಾಜ್ಯದ ಇನ್ನೂ ಹಲವು ಗ್ರಾಮಗಳಿಗೆ ಮೂಲ ಸೌಕರ್ಯವೇ ಇಲ್ಲ. ಕನಿಷ್ಠ ರಸ್ತೆ ಸಂಪರ್ಕವೂ ಇಲ್ಲ. ಗ್ರಾಮಗಳಿಗೆ ಇಂದಿಗೂ ನಡಿಗೆ ಮೂಲಕ ಅಥವಾ ತೆಪ್ಪದ ಮೂಲಕ ಹೋಗಲಾಗುತ್ತಿದೆ. ಮೃತದೇಹವನ್ನು ತೆಪ್ಪದ ಮೂಲಕವೇ ಕೊಂಡೊಯ್ಯಲಾಗಿದೆ.

Vijaya Karnataka Web 28 Aug 2019, 8:32 pm
ಚಿಕ್ಕಮಗಳೂರು: ಇದೊಂದು ಹೃದಯ ವಿದ್ರಾವಕ ಘಟನೆ. ಅಗತ್ಯ ಮೂಲ ಸೌಕರ್ಯ, ರಸ್ತೆ ಇಲ್ಲದ ಕಾರಣ ಮೃತ ದೇಹವನ್ನು ತೆಪ್ಪದಲ್ಲಿ ಕೊಂಡೊಯ್ಯಲಾಗಿದೆ.
Vijaya Karnataka Web ತೆಪ್ಪ
ತೆಪ್ಪ


ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಲವು ದಶಕಗಳಿಂದ ಈ ಗ್ರಾಮಕ್ಕೆ ರಸ್ತೆ ಸಂಪರ್ಕವೇ ಇಲ್ಲ.

ಗ್ರಾಮದ ರಾಘವೇಂದ್ರ (29) ಇತ್ತೀಚೆಗೆ ಜಾಂಡೀಸ್‌ ಕಾಯಿಲೆಗೆ ತುತ್ತಾಗಿದ್ದರು. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕರೆತರಲಾಯಿತು. ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ತೆಪ್ಪದ ಮೂಲಕವೇ ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ಯಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ