ಆ್ಯಪ್ನಗರ

ಮಂಗಗಳ ಸಾವು, ಜನರಲ್ಲಿ ಆತಂಕ

ಪಟ್ಟಣದಲ್ಲಿ ಎರಡು ಮಂಗಗಳ ಕಳೇಬರ ಗೋಚರಿಸಿದ್ದು, ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

Vijaya Karnataka 8 Feb 2019, 5:00 am
ಕಳಸ : ಪಟ್ಟಣದಲ್ಲಿ ಎರಡು ಮಂಗಗಳ ಕಳೇಬರ ಗೋಚರಿಸಿದ್ದು, ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
Vijaya Karnataka Web CKM-7KLS1


ಕಳಸ ದೇವಸ್ಥಾನ ಸಮೀಪವೇ ಗುರುವಾರ ಒಂದು ಮಂಗ ಸತ್ತಿದ್ದು, ಮಾಹಿತಿ ತಿಳಿದ ಅರಣ್ಯ, ಆರೋಗ್ಯ ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶು ವೈದ್ಯರು ಮಂಗಗಳ ಕಳೇಬರದ ಪರೀಕ್ಷೆ ನಡೆಸಿದ್ದು, ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಳಿಕ ಸುತ್ತಲ ಸ್ಥಳದಲ್ಲಿ ಔಷಧ ಸಿಂಪಡಿಸಿ, ಕಳೇಬರಗಳನ್ನು ದಹಿಸಲಾಯಿತು. ಪಟ್ಟಣದ ಹೃದಯಬಾಗದಲ್ಲಿರುವ ದನಲಕ್ಷ್ಮೀ ನಿಲಯ ಹಿಂಭಾಗದ ಅನಂತ ಕಾಮತ್‌ ಅವರ ತೊಟದಲ್ಲಿ ಬುಧವಾರ ಎರಡು ಮಂಗಗಳು ಸತ್ತಿರುವುದು ಗೋಚರಿಸಿತ್ತು. ಮಂಗಗಳು ಯಾವ ಕಾರಣದಿಂದ ಸತ್ತಿವೆ ಎನ್ನುವುದು ಪ್ರಯೋಗಾಲಯದಿಂದ ವರದಿ ಬಂದ ನಂತರವೇ ತಿಳಿಯಬೇಕಾಗಿದೆ.

ಗ್ರಾಮಸ್ಥರಲ್ಲಿ ಮೂಡಿದ ಆತಂಕ.


ಮಂಗನ ಕಾಯಿಲೆಯ ಸೋಂಕು ತಗುಲಿ ಮಲೆನಾಡಿನಲ್ಲಿ ಈಗಾಗಲೇ ಹಲವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಪಟ್ಟಣದಲ್ಲಿ ಮಂಗಗಳು ಸತ್ತಿರುವುದು ಹೋಬಳಿಗೂ ಮಂಗನ ಕಾಯಿಲೆ ಕಾಲಿಟ್ಟಿದೆಯಾ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಶುರುವಾಗಿದೆ.

ಮಂಗಗಳ ಸರಣಿ ಸಾವು ವೈರಾಣುವಿನಿಂದ ಆಗಿದೆಯೋ ಅಥವಾ ಯಾರಾದರೂ ವಿಷವಿಕ್ಕಿರುವರೇ ಎಂಬ ಅನುಮಾನ ವ್ಯಕ್ತಗೊಳ್ಳುವಂತೆ ಮಾಡಿದೆ. ಪ್ರಯೋಗಾಲಯದ ವರದಿಯನ್ನು ತ್ವರಿತವಾಗಿ ತರಿಸಿಕೊಳ್ಳಬೇಕು. ಮಂಗಗಳ ಸಾವಿಗೆ ನಿಖರ ಕಾರಣ ತಿಳಿದು ಗ್ರಾಮದಲ್ಲಿ ಔಷಧ ಸಿಂಪಡಿಸಬೇಕು. ಅಗತ್ಯವಿರುವಷ್ಟು ಚುಚ್ಚುಮದ್ದುಗಳನ್ನು ಆಸ್ಪತ್ರೆಯಲ್ಲಿ ಸಂಗ್ರಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಕಳಸದಲ್ಲಿ ಈಗಾಗಲೇ ಮೂರು ಮಂಗಗಳು ಸತ್ತಿರುವುದು ಕಂಡುಬಂದಿದೆ. ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ರಕ್ತದ ಮಾದರಿಯನ್ನು ಪ್ರಯೋಗಲಾಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ವರದಿ ಬಂದ ಮೇಲೆ ನಿಖರ ಕಾರಣ ತಿಳಿಯಬೇಕಿದೆ.

- ರವಿ ಕುಮಾರ್‌, ಆರ್‌ಎಫ್‌ಒ, ಕಳಸ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ