ಆ್ಯಪ್ನಗರ

ಅಪಾಯಕಾರಿ ಮರ ಕಡಿತಲೆಗೆ ಆಗ್ರಹ

ತಾಲೂಕಿನ ಹರಿಹರಪುರ ಸಮೀಪದ ದೇವರಮನೆ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿರುವ ಅಪಾಯಕಾರಿ ಮರ ಕಡಿತಲೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Vijaya Karnataka 9 Jun 2019, 5:00 am
ಕೊಪ್ಪ: ತಾಲೂಕಿನ ಹರಿಹರಪುರ ಸಮೀಪದ ದೇವರಮನೆ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿರುವ ಅಪಾಯಕಾರಿ ಮರ ಕಡಿತಲೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Vijaya Karnataka Web CKM-5KPH3


ಸಾಲು ಬೋಗಿ ಎಂಬ ಕಾಡು ಜಾತಿ ಮರ ಬೃಹದಾಕಾರವಾಗಿ ಬೆಳೆದಿದೆ. ಆದರೆ ಅದರ ರೆಂಬೆ ಕೊಂಬೆ ಟೊಳ್ಳಾಗಿದ್ದು, ಯಾವುದೆ ಸಂದರ್ಭದಲ್ಲಿ ಗಾಳಿ, ಮಳೆ ಹೊರತಾಗಿಯೂ ಉರುಳಿ ಬೀಳಬಹುದು.

ಈಗಾಗಲೆ ಮರದ ಎರಡು ದಿಕ್ಕಿನಲ್ಲಿ ಕೊಂಬೆ ಮುರಿದು ಬಿದ್ದಿದೆ. ಒಮ್ಮೆ ರಾಷ್ಟ್ರೀಯ ಹೆದ್ದಾರಿ ಮೇಲೆ ಕೊಂಬೆ ಉರುಳಿ ಸಂಚಾರಕ್ಕೆ ಅಡ್ಡಿಯಾಗಿತ್ತು.

ಹೆದ್ದಾರಿಯಲ್ಲಿ ಪ್ರತಿನಿತ್ಯ ಧಾರ್ಮಿಕ ಕೇಂದ್ರ ಶೃಂಗೇರಿ, ಶಿವಮೊಗ್ಗ, ಕಾರ್ಕಳ, ಮಂಗಳೂರಿಗೆ ತೆರಳುವ ನೂರಾರು ವಾಹನ ಸಂಚಾರವಿರುತ್ತದೆ. ಇನ್ನು ಕೆಲವೆ ದಿನದಲ್ಲಿ ಮಳೆಗಾಲ ಆರಂಭವಾಗುವ ಸೂಚನೆಯಿದೆ. ಗಾಳಿ ಮಳೆಗೆ ಮರ ಉರುಳಿ ಜೀವಕ್ಕೆ ಅಪಾಯ ಸಂಭವಿಸುವ ಮೊದಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಮರ ಕಡಿತಲೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ