ಆ್ಯಪ್ನಗರ

ಹದಗೆಟ್ಟ ರಸ್ತೆ, ಚರಂಡಿಗಳಲ್ಲಿ ನಿಂತ ನೀರು

ಹದಗೆಟ್ಟ ರಸ್ತೆ, ಚರಂಡಿಗಳಲ್ಲಿ ನಿಂತು ಗಬ್ಬು ವಾಸನೆ ಬೀರುತ್ತಿರುವ ಕೊಳಚೆ ನೀರು... ಇದು ನಗರದ 27ನೇ ವಾರ್ಡ್‌ನ ಗೋಕುಲ ರಸ್ತೆ ನಿವಾಸಿಗಳ ಗೋಳು.

Vijaya Karnataka 16 May 2019, 5:00 am
ಚಿಕ್ಕಮಗಳೂರು: ಹದಗೆಟ್ಟ ರಸ್ತೆ, ಚರಂಡಿಗಳಲ್ಲಿ ನಿಂತು ಗಬ್ಬು ವಾಸನೆ ಬೀರುತ್ತಿರುವ ಕೊಳಚೆ ನೀರು... ಇದು ನಗರದ 27ನೇ ವಾರ್ಡ್‌ನ ಗೋಕುಲ ರಸ್ತೆ ನಿವಾಸಿಗಳ ಗೋಳು.
Vijaya Karnataka Web deteriorated road standing water in drains
ಹದಗೆಟ್ಟ ರಸ್ತೆ, ಚರಂಡಿಗಳಲ್ಲಿ ನಿಂತ ನೀರು


ಗೋಕುಲ ರಸ್ತೆಯಲ್ಲಿ ಈ ಹಿಂದೆ ಇದ್ದ ಕಾಂಕ್ರಿಟ್‌ ರಸ್ತೆಯನ್ನು ದುರಸ್ತಿಪಡಿಸುವ ಕಾಮಗಾರಿ ನಡೆಯುತ್ತಿದೆ. ಆದರೆ, ಒಂದು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ.

ಕಾಂಕ್ರಿಟ್‌ ರಸ್ತೆಯನ್ನು ಬಗೆದುಹಾಕಿದ ಪರಿಣಾಮ ದೊಡ್ಡ ಗುಂಡಿಗಳು ಬಿದ್ದಿದ್ದು ವಾಹನಗಳು ಸಂಚರಿಸದಂತಾಗಿದೆ. ವೃದ್ಧರು, ಮಕ್ಕಳು ಈ ಗುಂಡಿಗಳಲ್ಲಿ ಬಿದ್ದು ಗಾಯಗೊಂಡಿದ್ದಾರೆ. ವಾರದ ಹಿಂದಷ್ಟೇ ಮಳೆ ಬಂದಿದ್ದು ರಸ್ತೆ ಕೆಸರುಮಯವಾಗಿದೆ. ಜೋರಾಗಿ ಮಳೆಬಂದರೆ ರಸ್ತೆ ಕೆಸರುಗದ್ದೆಯಾಗಲಿದ್ದು, ಜನ ಕೂಡ ಓಡಾಡದ ಸ್ಥಿತಿ ನಿರ್ಮಾಣವಾಗುತ್ತದೆ.

ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ತೀವ್ರವಾಗಿದೆ. ನಿವಾಸಿಗಳ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತಿದೆ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಓಡಾಡಲು ಅಸಾಧ್ಯವಾಗಿದೆ. ನಗರಸಭೆ ಆಯುಕ್ತರು ತಕ್ಷಣ ಈ ರಸ್ತೆಯನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ನಿವಾಸಿಗಳ ಒತ್ತಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ