ಆ್ಯಪ್ನಗರ

ಸೆ.2, 3ರಂದು ಕನ್ಯಾಡಿಯಲ್ಲಿ ಧರ್ಮಸಂಸತ್‌

ಧರ್ಮಸ್ಥಳ ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವ ಅಂಗವಾಗಿ ಸೆ.2 ಮತ್ತು 3ರಂದು ರಾಷ್ಟ್ರೀಯ ಧರ್ಮ ಸಂಸತ್‌ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ಅಶೋಕ್‌ ಸಾಲ್ಯಾನ್‌ ಹೇಳಿದರು.

Vijaya Karnataka 1 Sep 2018, 5:00 am
ಚಿಕ್ಕಮಗಳೂರು : ಧರ್ಮಸ್ಥಳ ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವ ಅಂಗವಾಗಿ ಸೆ.2 ಮತ್ತು 3ರಂದು ರಾಷ್ಟ್ರೀಯ ಧರ್ಮ ಸಂಸತ್‌ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ಅಶೋಕ್‌ ಸಾಲ್ಯಾನ್‌ ಹೇಳಿದರು.
Vijaya Karnataka Web dharmashastra in kanyakumari
ಸೆ.2, 3ರಂದು ಕನ್ಯಾಡಿಯಲ್ಲಿ ಧರ್ಮಸಂಸತ್‌


ದೇಶದ ವಿವಿಧ ರಾಜ್ಯಗಳಿಂದ ಸುಮಾರು 3 ಸಾವಿರ ಸಾಧು ಸಂತರು ಆಗಮಿಸಲಿದ್ದಾರೆ. ವಿವಿಧ ಪಂಥದ ಮಠಾಧಿಪತಿಗಳು, ವಿಶೇಷವಾಗಿ ಅಯೋಧ್ಯೆಯಿಂದ 400 ಮಂದಿ ಸಾಧು ಸಂತರು ಆಗಮಿಸಲಿದ್ದು ಕೇರಳ ಶಿವಗಿರಿ ಪೀಠದ ಶ್ರೀ ಸಾಂಧ್ರಾನಂದ ಸ್ವಾಮೀಜಿ, ಮರುತ ಮಲೈನ ಶ್ರೀ ಆರೂಪನಂದ ಸ್ವಾಮೀಜಿ, ಮಧುರೈ ನಾರಾಯಣಗುರು ಆಶ್ರಮದ ಶ್ರೀ ವೆಂಕಟೇಶ್ವರ ಸ್ವಾಮೀಜಿ, ಶ್ರೀ ನಿತ್ಯಸ್ವರೂಪನಂದ ಸ್ವಾಮೀಜಿ, ಶ್ರೀ ಧರ್ಮಚೈತನ್ಯ ಸ್ವಾಮೀಜಿ ಸೇರಿ ಶ್ರೀ ನಾರಾಯಣ ಗುರುಪರಂಪರೆಯ 48 ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.

ಧರ್ಮ ಸಂಸದ್‌ ಉದ್ಘಾಟನೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೆರವೇರಿಲಿದ್ದಾರೆ. ಡಾ.ಶ್ರೀ ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವರಾದ ಪ್ರಕಾಶ್‌ ಜಾವೆಡ್‌ಕರ್‌, ಡಿ.ವಿ.ಸದಾನಂದ ಗೌಡ, ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌, ಸಂಸದರಾದ ನಳೀನ್‌ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಡಾ.ಎಸ್‌.ಸಿ.ಶರ್ಮ ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾ ಆರ್ಯ ಈಡಿಗ ಸಂಘ, ಬಿಲ್ಲವರ ಸಂಘ, ಜಿಲ್ಲಾ ನಾರಾಯಣ ಗುರು ಸಂಘ, ಜಿಲ್ಲಾ ಶ್ರೀರಾಮಕ್ಷೇತ್ರ ಸೇವಾ ಸಮಿತಿಯ ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಪ್ರಮುಖರು ಧರ್ಮ ಸಂಸದ್‌ ಸಭೆಗೆ ದೇಣಿಗೆ ನೀಡಲಿದ್ದಾರೆ. ಜಿಲ್ಲೆಯಿಂದ 5 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳೀದರು. ವಿವಿಧ ಸಂಘಟನೆಗಳ ಮುಖಂಡರಾದ ತಂಬನ್‌, ಕೃಷ್ಣಪ್ಪ, ವಿಠಲ್‌, ರಾಮಕೃಷ್ಣ, ಪ್ರವೀಣ್‌, ಬಿ.ಎಸ್‌.ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ