ಆ್ಯಪ್ನಗರ

ಹಾನಿ ದುರಸ್ತಿಗಾಗಿ ಅಂದಾಜು ಪಟ್ಟಿಗೆ ನಿರ್ದೇಶನ

ಮಲೆನಾಡಿಗೆ ಮಾರಕವಾಗಿ ಬಂದ ಮಳೆ ತಾಲೂಕಿನಾದ್ಯಾಂತ ಸಾಕಷ್ಟು ಹಾನಿ ಉಂಟು ಮಾಡಿದ್ದು, ಅತಿವೃಷ್ಠಿಯಲ್ಲಿ ನೊಂದಿರುವ ಜನರಿಗೆ ಸ್ಪಂದಿಸಬೇಕಾಗಿರುವುದು ಎಲ್ಲರ ಕರ್ತವ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

Vijaya Karnataka 14 Aug 2019, 5:00 am
ಶೃಂಗೇರಿ : ಮಲೆನಾಡಿಗೆ ಮಾರಕವಾಗಿ ಬಂದ ಮಳೆ ತಾಲೂಕಿನಾದ್ಯಾಂತ ಸಾಕಷ್ಟು ಹಾನಿ ಉಂಟು ಮಾಡಿದ್ದು, ಅತಿವೃಷ್ಠಿಯಲ್ಲಿ ನೊಂದಿರುವ ಜನರಿಗೆ ಸ್ಪಂದಿಸಬೇಕಾಗಿರುವುದು ಎಲ್ಲರ ಕರ್ತವ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
Vijaya Karnataka Web CKM-13SRI2


ಮೆಣಸೆ ಗ್ರಾಪಂಯ ಮೆಣಸೆಯ ರಾಜೀವಿ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿರುವುದನ್ನು ಸೋಮವಾರ ವೀಕ್ಷಿಸಿ ಮಾತನಾಡಿದರು. ಸತತ 6 ದಿನಗಳಿಂದ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ಪ್ರಾಥಮಿಕ ಸಮೀಕ್ಷೆಯಂತೆ ಮಳೆಯಿಂದಾಗಿ ಆಸ್ತಿ ಹಾನಿ ಆಗಿರುವುದು, ಮೆಸ್ಕಾಂ ಇಲಾಖೆಯ ಟ್ರಾನ್ಸ್‌ಫಾರಂ, ಕಂಬ ಮತ್ತು ತಂತಿ ಮೇಲೆ ಮರ ಬಿದ್ದು ನಷ್ಟವಾದೆ. ರೈತರ ತೋಟ, ಗದ್ದೆ, ಕಾಫಿತೋಟ, ರಸ್ತೆಗಳು, ಕಾಲುಸಂಕಗಳಿಗೂ ಹಾನಿಯಾಗಿದೆ. ಇವುಗಳ ದುರುಸ್ತಿಗೆ ಆದ್ಯತೆ ಮೇರೆಗೆ ಅಂದಾಜು ಪಟ್ಟಿ ತಯಾರಿಸಲು ನಿರ್ದೇಶನ ನೀಡಿದ್ದೇನೆ. ಕುಂಬದ್ರೋಣ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಜನ ಜೀವನವು ಇದೀಗ ಎಲ್ಲೆಡೆ ಮಳೆ ಕಡಿಮೆಯಾಗಿ ಪೂರ್ವಸ್ಥಿತಿಗೆ ಮರಳಿದೆ. ನೊಂದವರಿಗೆ ಸರಕಾರ, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನೆರವು ನೀಡಬೇಕಿದೆ ಎಂದರು.

ಈ ಸಂದರ್ಭ ತಾಪಂ ಕಾರ್ಯನಿರ್ವಹಣಾಧಿಕಾರಿ ಸುಧೀಪ್‌, ತಾಪಂ ಸದಸ್ಯ ಕುರದಮನೆ ವೆಂಕಟೇಶ್‌, ಡಿಸಿಸಿ ಬ್ಯಾಂಕ್‌ ಉಪಧ್ಯಾಕ್ಷ ದಿನೇಶ್‌ ಹೆಗ್ಡೆæ, ನೆಮ್ಮಾರ್‌ ಗ್ರಾಪಂ ಅಧ್ಯಕ್ಷೆ ಲೀಲಾವತಿ, ಸದಸ್ಯ ರತ್ನಕರ್‌, ಪಿಡಿಒ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌, ಪುಟ್ಟಪ್ಪ ಹೆಗ್ಡೆæ, ಮೆಣಸೆ ಗ್ರಾಪಂ ಸದಸ್ಯ ಚಂದ್ರಹಾಸ, ತಿಮ್ಮಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ