ಆ್ಯಪ್ನಗರ

ಆಸೆಯ ಸುಳಿಗೆ ಸಿಲುಕಿ ಪರಿಸರ ನಾಶ

ಆಸೆಯ ಸುಳಿಗೆ ಸಿಲುಕಿ ಪ್ರಕೃತಿಯನ್ನು ಮರೆತಿರುವುದರಿಂದ ಬದುಕು ದುಸ್ತರವಾಗುತ್ತಿದೆ. ನಿಸರ್ಗದತ್ತ ಮುಖ ಮಾಡುವುದೇ ಇದಕ್ಕೆ ಪರಿಹಾರ ಎಂದು ಪ್ರಗತಿಪರ ಕೃಷಿಕ ಚಂದ್ರಶೇಖರನಾರಣಾಪುರ ಅಭಿಪ್ರಾಯಿಸಿದರು.

Vijaya Karnataka 10 Jun 2019, 5:00 am
ಚಿಕ್ಕಮಗಳೂರು: ಆಸೆಯ ಸುಳಿಗೆ ಸಿಲುಕಿ ಪ್ರಕೃತಿಯನ್ನು ಮರೆತಿರುವುದರಿಂದ ಬದುಕು ದುಸ್ತರವಾಗುತ್ತಿದೆ. ನಿಸರ್ಗದತ್ತ ಮುಖ ಮಾಡುವುದೇ ಇದಕ್ಕೆ ಪರಿಹಾರ ಎಂದು ಪ್ರಗತಿಪರ ಕೃಷಿಕ ಚಂದ್ರಶೇಖರನಾರಣಾಪುರ ಅಭಿಪ್ರಾಯಿಸಿದರು.
Vijaya Karnataka Web disaster erupted and destroyed the environment
ಆಸೆಯ ಸುಳಿಗೆ ಸಿಲುಕಿ ಪರಿಸರ ನಾಶ


ಜಿಲ್ಲಾ ಸಹೋದರತ್ವ ಸಮಿತಿ 31ನೆಯ ಮಾಸಿಕ ಸಭೆಯ ಅಂಗವಾಗಿ ಹೇಮಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 'ಪರಿಸರ ದಿನ'ವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಭಾರತ ಕೃಷಿ ಪ್ರಧಾನ ದೇಶ. 46 ಸಾವಿರ ಸಸ್ಯ ಪ್ರಬೇಧ, 4,70 ಲಕ್ಷ ಚಿಟ್ಟೆ ಪ್ರಬೇಧ, 900 ನೊಣದ ಪ್ರಬೇಧಗಳು ಸೇರಿದಂತೆ 86,000ಕೋಟಿ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಆಸೆ, ದುರಾಸೆ ಇರುವುದು. ಶೇಖರಣಾ ಪ್ರವೃತ್ತಿಯಿಂದ ಎಲ್ಲವೂ ತನಗೆ ಬೇಕೆಂಬ ಹಪಹಪಿ ಇದು. ಮಣ್ಣು, ನೀರು, ವಾಯು ಸೇರಿದಂತೆ ಪಂಚಭೂತಗಳೆಲ್ಲವನ್ನೂ ಕಲುಷಿತಗೊಳಿಸಿದ್ದೇವೆ. ಪ್ರಕೃತಿಯಿಂದ ವಿಮುಖವಾದ ನಡೆ ನಮ್ಮದಾಗಿದೆ ಎಂದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಕುಟುಂಬಕ್ಕೆ ಒಂದುಮರ, ಒಂದುಮಗು ಕಡ್ಡಾಯವಾಗಬೇಕು. ಜನಸಂಖ್ಯೆ ನಿಯಂತ್ರಿಸದಿದ್ದರೆ ಪರಿಸರ ನಾಶ ತಪ್ಪಿಸಲಾಗದು. ಸಾಲುಮರದ ತಿಮ್ಮಕ್ಕನ ಆದರ್ಶ ನಮ್ಮದಾಗಬೇಕು. ಸಮಿತಿಯಿಂದ ಸಾವಿರ ಸಸಿಗಳನ್ನು ಈ ತಿಂಗಳಿನಲ್ಲಿ ನೆಡಲಾಗುವುದು ಎಂದರು.

ಜಿಲ್ಲಾ ಸಹೋದರತ್ವ ಸಮಿತಿ ಕಾರ‍್ಯದರ್ಶಿ ಸವಿತಾಬ್ಯಾಪಿಸ್ಟಾ ಮಾತನಾಡಿ, ವನಸಂವರ್ಧನೆ ನಾಮಕಾವಸ್ಥೆಯ ಯೋಜನೆಯಾಗುತ್ತಿದೆ. ಜಪಾನ್‌ ಸರಕಾರ ಅರಣ್ಯ ಬೆಳೆಸಲು ಭಾರತಕ್ಕೆ 125ಕೋಟಿರೂ. ನೆರವು ನೀಡಿದ್ದು ಅದು ಎಲ್ಲಿ ಬಳಕೆಯಾಗುತ್ತಿದೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ ಎಂದರು.

ಹುಣಸೆಮಕ್ಕಿ ಲಕ್ಷ ್ಮಣ ಮಾತನಾಡಿ, ನಿಜವಾದ ಪರಿಸರ ಕಾಳಜಿ ಕಡಿಮೆಯಾಗುತ್ತಿದೆ. ಡೊಂಗಿ ಪರಿಸರವಾದಿಗಳ ಹಾವಳಿ ಅಧಿಕವಾಗಿದೆ. ಅರಣ್ಯ ಇಲಾಖೆ ಪ್ರಾಮಾಣಿಕವಾಗಿ ಕಾರ‍್ಯನಿರ್ವಹಿಸಿದರೆ ಅರಣ್ಯದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ ಎಂದರು. ಜಿಲ್ಲಾ ಸಹೋದರತ್ವ ಸಮಿತಿ ಕೆ.ಬಿ.ಸುಧಾ ಪ್ರಾಸ್ತಾವಿಸಿ ಪ್ರಕೃತಿ ಮತ್ತು ಪರಿಸರ ಮನುಷ್ಯನಿಗೆ ಅನಿವಾರ‍್ಯ. ಮಣ್ಣು, ನೀರು, ಗಾಳಿ, ಗಿಡ, ಮರದಿಂದ ಮಾತ್ರ ಮಾನವ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಎಂದರು. ಬಿಎಸ್‌ಪಿ ಉಪಾಧ್ಯಕ್ಷೆ ರೇಖಾ ಪರಿಸರ ಗೀತೆ ಹಾಡಿದರು. ಮಂಜುಳಾ ಸ್ವಾಗತಿಸಿ, ನಿರೂಪಿಸಿದ್ದು, ವಸಂತಕುಮಾರ್‌ ವಂದಿಸಿದರು. ಮುಖಂಡರಾದ ಸಿದ್ದಯ್ಯ ಅಧ್ಯಕ್ಷ ತೆ ವಹಿಸಿದ್ದರು. ಪಿ.ವಿ.ತಂಬನ್‌, ಲತಾ, ವಾಯ್‌ಜಾನ್‌, ಕಲಾವತಿ, ಅಸ್ಮಾಪರ್ವೀನ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ