ಆ್ಯಪ್ನಗರ

ವಿಕಲಚೇತನರಿಗೆ ಸಲಕರಣೆ ವಿತರಣೆ

ಯೋಜನೆಯ ವತಿಯಿಂದ ಈಗಾಗಲೆ 1 ನೂರು ಮಂದಿಗೆ ಸಲಕರಣೆ ವಿತರಿಸುವ ಪ್ರಸ್ತಾವನೆಯನ್ನು ನೀಡಲಾಗಿದೆ. ಎಂದು ಯೋಜನಾಧಿಕಾರಿ ಡಿ.ದಿನೇಶ್‌ ಹೇಳಿದರು.

Vijaya Karnataka 19 Jun 2019, 5:00 am
ಕೊಪ್ಪ : ಯೋಜನೆಯ ವತಿಯಿಂದ ಈಗಾಗಲೆ 1 ನೂರು ಮಂದಿಗೆ ಸಲಕರಣೆ ವಿತರಿಸುವ ಪ್ರಸ್ತಾವನೆಯನ್ನು ನೀಡಲಾಗಿದೆ. ಎಂದು ಯೋಜನಾಧಿಕಾರಿ ಡಿ.ದಿನೇಶ್‌ ಹೇಳಿದರು.
Vijaya Karnataka Web CKM-18kph3


ಪಟ್ಟಣದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ 88 ಸಾವಿರ ರೂ. ಮೌಲ್ಯದ ಸಲಕರಣೆಯನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.

ಮೊದಲ ಹಂತವಾಗಿ 36 ಮಂದಿ ಫಲಾನುಭವಿಗೆ ಉಚಿತವಾಗಿ ಸಲಕರಣೆ ನೀಡಲಾಗುವುದು. ವೀಲ್‌ ಚೇರ್‌(15), ವಿಲ್‌ ಚೇರ್‌ ಕಮೋಡ್‌(1), ವಾಟರ್‌ ಬೆಡ್‌(12), ಎಲ್ಬೊ ಕ್ರಚಸ್‌(2), ಯು.ಆಕೃತಿ ವಾಕರ್‌(3), 3 ಕಾಲಿನ ವಾಕಿಂಗ್‌ ಕೋಲು(2) ಮತ್ತು ಇತರೆ ಕ್ರಚಸ್‌(1)ನ್ನು ವಿತರಿಸಲಾಗುವುದು. ಇದನ್ನು ಕಡುಬಡವರಿಗೆ, ನಿರ್ಗತಿಕರಿಗೆ, ರೋಗಿಗೆ ನೀಡಲಾಗುವುದು. ಕೇವಲ ಯೋಜನೆಯ ಸದಸ್ಯರಿಗೆ ಮೀಸಲಿರಿಸದೆ, ಸಮುದಾಯದ ಎಲ್ಲ ಬಗೆಯ ಫಲಾನುಭವಿಗೆ ಜಾತಿ, ಧರ್ಮ ಬೇಧವಿಲ್ಲದೆ ವಿತರಿಸಲಾಗುವುದು. ಭವಿಷ್ಯದಲ್ಲಿ ಸಲಕರಣೆ ಬೇಡವಾದಾಗ ಅದನ್ನು ಯೋಜನಾಧಿಕಾರಿಗೆ ವಾಪಾಸು ನೀಡಬೇಕು. ಬಾಹುಬಲಿಯ ಮಸ್ತಕಾಭಿಷೇಕದ ಅಂಗವಾಗಿ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಇಂತಹ ಯೋಜನೆ ಘೋಷಿಸಿದ್ದಾರೆ ಎಂದರು.

ಜಿಲ್ಲಾ ನಿರ್ದೇಶಕ ಪ್ರಕಾಶ್‌ ರಾವ್‌, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅರವಿಂದ ಸೋಮಯಾಜಿ, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್‌, ಬಾಲಕೃಷ್ಣ, ರಾಘವೇಂದ್ರ ಭಟ್‌, ಎಲ್‌.ಎಂ.ಪ್ರಕಾಶ್‌, ಜಿ.ಆರ್‌.ವಿಶ್ವನಾಥ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ