ಆ್ಯಪ್ನಗರ

ನೆರೆ ಪರಿಹಾರ ಮತ್ತೆ ಬರುವ ನಿರೀಕ್ಷೆ ಇಲ್ಲ

​ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರ 1200 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಇನ್ನೂ ಹೆಚ್ಚಿನ ನೆರವು ಸಿಗುತ್ತದೆ ಎನ್ನುವ ನಿರೀಕ್ಷೆ ಇಲ್ಲಎಂದು ಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Vijaya Karnataka 7 Oct 2019, 5:00 am
ಕಳಸ:
Vijaya Karnataka Web dont expect flood relief to come back
ನೆರೆ ಪರಿಹಾರ ಮತ್ತೆ ಬರುವ ನಿರೀಕ್ಷೆ ಇಲ್ಲ

ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರ 1200 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಇನ್ನೂ ಹೆಚ್ಚಿನ ನೆರವು ಸಿಗುತ್ತದೆ ಎನ್ನುವ ನಿರೀಕ್ಷೆ ಇಲ್ಲಎಂದು ಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನೆರೆಯಿಂದ ಹಾನಿಯಾಗಿ ಪರಿಹಾರ ಸಿಗದೆ ನೊಂದು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಭಾನುವಾರ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯ ಸರಕಾರದಲ್ಲಿಹೊಂದಾಣಿಕೆ ಇಲ್ಲ, ಜನರ ಕಷ್ಟಗಳಿಗೆ ಸ್ಪಂದಿಸಬೇಕೆಂಬ ವಿವೋಚನೆಯೂ ಇಲ್ಲ. ಈ ಸರಕಾರ ಹೆಚ್ಚು ದಿನ ಇರುವ ನೀರೀಕ್ಷೆಯೂ ಇಲ್ಲಎಂದರು.

ರೈತರಿಗೆ ನೀಡುವ ನೆರೆ ಪರಿಹಾರದಲ್ಲಿಹುಡುಗಾಟ ಆಡದೆ ಸಚಿವರು ಸ್ಥಳಗಳಿಗೆ ಹೋಗಿ ಕೂತು ಅಧಿಕಾರಿಗಳಿಂದ ಪ್ರೀತಿಯಿಂದ ಕೆಲಸ ಮಾಡಿಸಿಕೊಂಡು ತೊಂದರೆಗೆ ಒಳಗಾದ ರೈತರಿಗೆ ನ್ಯಾಯಯುತವಾತ ಪರಿಹಾರ ನೀಡಬೇಕು. ಇದ್ರಲ್ಲಿದುಡ್ಡು ಹೊಡೆಯುವ ಕೆಲಸ ಮಾಡಬೇಡಿ. ಈಗಾಗಲೇ ಈ ಭಾಗದಲ್ಲಿಕೊಟ್ಟಿರುವ 10 ಸಾವಿರ ರೂ. ಚೆಕ್‌ ಕೆಲ ಬಿಜೆಪಿ ಕಾರ್ಯಕರ್ತರ ಪಾಲಾಗಿದೆ ಮತ್ತು ಅದರಲ್ಲೂಕಮಿಷನ್‌ ತೆಗೆದುಕೊಂಡಿರುವ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಸರಕಾರದ ಮೇಲಿರುವ ಸವಾಲನ್ನು ಸ್ವೀಕರಿಸಿ ರೈತರ ಸಂಕಷ್ಟಕ್ಕೆ ಕೂಡಲೇ ನೆರವಾಗಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ