ಆ್ಯಪ್ನಗರ

ಅಡಕೆ ಮರಕ್ಕೆ ಔಷಧಿ ಸಿಂಪಡಣೆ ಸವಾಲಿನ ಕೆಲಸ

ಅಡಕೆ ಮರಕ್ಕೆ ಹತ್ತಿ ಔಷಧಿ ಸಿಂಪಡಣೆ ಮಾಡುವುದು ಸವಾಲಾಗಿದೆ. ಇದಕ್ಕಾಗಿ ಹೊಸ ಸಂಶೋಧನೆ ನಡೆಯುತ್ತಿದ್ದು,ಅದರಲ್ಲಿ ದೋಟಿ ಮೂಲಕ ಔಷಧಿ ಸಿಂಪಡಣೆ ತಂತ್ರಜ್ಞಾನ ಪರಿಣಾಮಕಾರಿಯಾಗಿದೆ ಎಂದು ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಮಾಜದ ಅಧ್ಯಕ್ಷ ಗುಡ್ಡೆತೋಟ ಗೋಪಾಲಕೃಷ್ಣ ಹೇಳಿದರು.

Vijaya Karnataka 15 Jul 2019, 5:00 am
ಶೃಂಗೇರಿ : ಅಡಕೆ ಮರಕ್ಕೆ ಹತ್ತಿ ಔಷಧಿ ಸಿಂಪಡಣೆ ಮಾಡುವುದು ಸವಾಲಾಗಿದೆ. ಇದಕ್ಕಾಗಿ ಹೊಸ ಸಂಶೋಧನೆ ನಡೆಯುತ್ತಿದ್ದು,ಅದರಲ್ಲಿ ದೋಟಿ ಮೂಲಕ ಔಷಧಿ ಸಿಂಪಡಣೆ ತಂತ್ರಜ್ಞಾನ ಪರಿಣಾಮಕಾರಿಯಾಗಿದೆ ಎಂದು ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಮಾಜದ ಅಧ್ಯಕ್ಷ ಗುಡ್ಡೆತೋಟ ಗೋಪಾಲಕೃಷ್ಣ ಹೇಳಿದರು.
Vijaya Karnataka Web CKM-14SRI1


ಮೆಣಸೆ ಗ್ರಾಪಂ ಯ ಕೆರೆಮನೆ ಭಾಸ್ಕರರಾವ್‌ ಮನೆಯಲ್ಲಿ ಆದರ್ಶ ರೈತ ಮಿತ್ರ ಕೂಟ ಮತ್ತು ಯುವ ಹೆಬ್ಬಾರ ಬ್ರಾಹ್ಮಣ ಘಟಕ ಜಂಟಿಯಾಗಿ ಭಾನುವಾರ ಏರ್ಪಡಿಸಿದ್ದ ಹೈಟೆಕ್‌ ದೋಟಿ ಮೂಲಕ ಔಷಧಿ ಸಿಂಪಡಣೆ ಪಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಡಕೆ ಹಳದಿ ಎಲೆ ರೋಗ ಬಂದ ನಂತರವೂ ತೋಟಕ್ಕೆ ಬೋರ್ಡೋ ಸಿಂಪಡಣೆ ಪ್ರಮಾಣ ಕುಸಿತವಾಗದೇ ಇದ್ದರೂ,ರೈತರಿಗೆ ದೊರಕುವ ಇಳುವರಿ ಮಾತ್ರ ಕಡಿಮೆಯಾಗಿದೆ.ಕೂಲಿಯಾಳು ಸಂಬಳ,ಬೊರ್ಡೋ ದ್ರಾವಣದ ವಸ್ತುಗಳು ದುಬಾರಿಯಾಗುತ್ತಿದೆ.ನೂತನ ಯಂತ್ರದ ಮೂಲಕ ಸಿಂಪಡಣೆ ಮಾಡಿದಾಗ ದ್ರಾವಣದ ಖರ್ಚು ಕಡಿಮೆಯಾಗುತ್ತದೆ.ಸರಳ ತಂತ್ರಜ್ಞಾನ ಹೊಂದಿರುವ ದೋಟಿಯ ದರ ಅಧಿಕವೆನಿಸಿದರೂ,ಔಷಧಿಯಲ್ಲಿ ಮಿತ ವ್ಯಯ,ಕೊಳೆ ರೋಗದಿಂದ ದೂರವಾಗುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದರು.

ಪ್ರಗತಿಪರ ರೈತ ತಲವಾನೆ ಪ್ರಕಾಶ್‌ ಮಾತನಾಡಿ,ಅಡಕೆ ಮರಕ್ಕೆ ಔಷಧಿ ಹೊಡೆಯುವ ತಂತ್ರಜ್ಞಾನ ಇಂದಿನ ಅಗತ್ಯವಾಗಿದೆ. ದೋಟಿ ಮೂಲಕ ಎತ್ತರದ ಮರಗಳಿಗೂ ಔಷಧಿ ಸಿಂಪಡಣೆ ಇದರಲ್ಲಿ ಸಾಧ್ಯವಿದೆ.ಮಲೆನಾಡಿನ ಬಹುತೇಕ ತೋಟಗಳು ರೋಗಕ್ಕೆ ತುತ್ತಾಗಿದ್ದು,ಮರವೇರುವುದು ಅಪಾಯಕಾರಿಯಾಗಿದೆ.ಈ ಹಂತದಲ್ಲಿ ಹೊಸ ತಂತ್ರಜ್ಞಾನ ಉಪಯುಕ್ತವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ತೀರ್ಥಹಳ್ಳಿಯ ಕೌಶಿಕ್‌ ಮಾತನಾಡಿ,ಮರವೆನ್ನರದೇ ದೋಟಿಯ ಮೂಲಕ ಔಷಧಿ ಸಿಂಪಡಣೆ ಮಾಡಬಹುದಾಗಿದೆ.ದೋಟಿಯ ಮೂಲಕ ಅಡಕೆ ಕೊನೆ ತೆಗೆಯಬಹುದಾಗಿದ್ದು,ಎತ್ತರದ ಇನ್ನಿತರ ಮರಗಳಾದ ಹಲಸು,ತೆಂಗಿನಕಾಯಿಯನ್ನು ತೆಗೆಯಬಹುದಾಗಿದೆ.ದೋಟಿ ಉಪಯೋಗಿಸಲು ಇಂಧನ ಖರ್ಚು ಇಲ್ಲವಾಗಿದ್ದು,ಎಂಜಿನ್‌ ಅಥವಾ ಬ್ಯಾಟರಿಯ ಅಗತ್ಯವಿಲ್ಲ ಎಂದರು. ಆದರ್ಶ ರೈತ ಮಿತ್ರಕೂಟದ ಪ್ರತಿನಿಧಿ ಎಸ್‌.ಆರ್‌.ಗೋಪಾಲಕೃಷ್ಣರಾವ್‌ ಅಧ್ಯಕ್ಷ ತೆ ವಹಿಸಿದ್ದರು.ಯುವ ಹೆಬ್ಬಾರ ಬ್ರಾಹ್ಮಣ ಘಟಕದ ಅಧ್ಯಕ್ಷ ಭರತ್‌ರಾಜ್‌,ಪ್ರವೀಣ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ