ಆ್ಯಪ್ನಗರ

ಚಿಕ್ಕಂದಿನಿಂದಲೇ ಮಕ್ಕಳಿಗೆ ಪರಿಸರ ಅರಿವು ಮೂಡಿಸಿ

ಮಕ್ಕಳಿಗೆ ಚಿಕ್ಕಂದಿನಿಂದಲೇ ಪರಿಸರ ಬೆಳೆಸುವ ಬಗ್ಗೆ ಅರಿವು ಮೂಡಿಸಬೇಕು ಎಂದು ಕೊಪ್ಪ ಅರಣ್ಯ ಇಲಾಖೆಯ ಪರಶುರಾಮ್‌ ಹೇಳಿದರು.

Vijaya Karnataka 3 Jul 2019, 5:00 am
ಬಾಳೆಹೊನ್ನೂರು : ಮಕ್ಕಳಿಗೆ ಚಿಕ್ಕಂದಿನಿಂದಲೇ ಪರಿಸರ ಬೆಳೆಸುವ ಬಗ್ಗೆ ಅರಿವು ಮೂಡಿಸಬೇಕು ಎಂದು ಕೊಪ್ಪ ಅರಣ್ಯ ಇಲಾಖೆಯ ಪರಶುರಾಮ್‌ ಹೇಳಿದರು.
Vijaya Karnataka Web CKM-2BHR1


ಅವರು ಸಮೀಪದ ಜವಾಹರ್‌ ನಮೋದಯ ವಿದ್ಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಹಾಗೂ ಸೀಗೋಡು ಜವಾಹರ್‌ ನವೋದಯದ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬೀಜದುಂಡೆ 'ಸೀಡ್‌ ಬಾಲ್‌' ತಯಾರಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ ತನ್ನ ದುರಾಸೆಗಾಗಿ ನಿರಂತರವಾಗಿ ಅರಣ್ಯನಾಶ ಮಾಡಿರುವಕಾರಣಕ್ಕಾಗಿ ಇಂದು ಜಾಗತಿಕ ತಾಪಮಾನ ಏರುತ್ತಿದ್ದು ಪರಿಸರದ ಮೇಲೆ ದುಷ್ಪ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ರಕ್ಷಿಸುವ ಜವಾಬ್ಧಾರಿ ಪ್ರತಿಯೊಬ್ಬರ ಮೇಲಿದೆ. ಅಲ್ಲದೆ ಇಂದಿನ ಬೀಜದುಂಡೆ ಅಭಿಯಾನದಲ್ಲಿ ಶಿವನಿ, ಬಿದಿರು, ನಾಗಸಂಪಿಗೆ, ಸಾಗುವಾನಿ, ಮತ್ತಿ, ಹಲಸು, ನೇರಳೆ, ಬಸವನಪಾದ, ಬಿಲವಾರ, ಬಾಗೆ, ಮೇ ಪ್ಲವರ್‌ ಸೇರಿದಂತೆ ಸುಮಾರು 20ಸಾವಿರಕ್ಕೂ ಅಧಿಕ ಬೀಜದುಂಡೆ ತಯಾರಿಸುವ ಯೋಜನೆ ಹೊಂದಿದೆ ಎಂದರು. ಸೀಗೋಡು ಜವಾಹರ್‌ ನವೋದಯ ವಿದ್ಯಾಲಯದ ಪ್ರಾಂಶುಪಾಲ ಬೆನ್ನಿ ಜೋಸೆಫ್‌ ಮಾತನಾಡಿದರು. ಅರಣ್ಯ ಇಲಾಖೆಯ ಧನರೇಶ್‌ ಹಾಗೂ ಸಿಬ್ಬಂದಿ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ