ಆ್ಯಪ್ನಗರ

ಹಿರಿಯರ ಆಹಾರ ಪದ್ಧತಿ ಅನುಕರಣೀಯ

ವಿಜ್ಞಾನ ಎಷ್ಟೇ ಮುಂದುವರಿದ್ದರೂ ಪ್ರಾಚೀನ ಕಾಲದಲ್ಲಿ ಹಿರಿಯರು ಅನುರಿಸುತ್ತಿದ್ದ ಆಹಾರ ಪದ್ಧತಿ ಅತ್ಯಂತ ಸುರಕ್ಷಿತವಾಗಿದ್ದು, ಅದನ್ನೇ ಪುನಶ್ಚೇತನಗೊಳಿಸಬೇಕಾಗಿದೆ ಎಂದು ಪುತ್ತೂರಿನ ಕ್ಯಾಂಪ್ಕೊ ಚಾಕೊಲೇಟ್‌ ಕಂಪನಿ ನಿವೃತ್ತ ಜನರಲ್‌ ಮ್ಯಾನೇಜರ್‌ ಕೃಷ್ಣಕುಮಾರ್‌ ಹೇಳಿದರು.

Vijaya Karnataka 23 Jul 2018, 5:00 am
ನರಸಿಂಹರಾಜಪುರ :ವಿಜ್ಞಾನ ಎಷ್ಟೇ ಮುಂದುವರಿದ್ದರೂ ಪ್ರಾಚೀನ ಕಾಲದಲ್ಲಿ ಹಿರಿಯರು ಅನುರಿಸುತ್ತಿದ್ದ ಆಹಾರ ಪದ್ಧತಿ ಅತ್ಯಂತ ಸುರಕ್ಷಿತವಾಗಿದ್ದು, ಅದನ್ನೇ ಪುನಶ್ಚೇತನಗೊಳಿಸಬೇಕಾಗಿದೆ ಎಂದು ಪುತ್ತೂರಿನ ಕ್ಯಾಂಪ್ಕೊ ಚಾಕೊಲೇಟ್‌ ಕಂಪನಿ ನಿವೃತ್ತ ಜನರಲ್‌ ಮ್ಯಾನೇಜರ್‌ ಕೃಷ್ಣಕುಮಾರ್‌ ಹೇಳಿದರು.
Vijaya Karnataka Web CKM-21nrp1


ಸೀತೂರಿನಲ್ಲಿ ಯುವ ಹೆಬ್ಬಾರ ಬಳಗದವರ ಆಶ್ರಯದಲ್ಲಿ ಭಾನುವಾರ ನಡೆದ ಮನೆಯಲ್ಲೇ ಚಾಕೊಲೇಟ್‌ ತಯಾರಿಕೆ ಹಾಗೂ ಆಹಾರ ಸುರಕ್ಷತೆ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾತನಾಡಿದರು. ಆಧುನಿಕ ಕಾಲದಲ್ಲಿರುವ ಆಹಾರ ಪದ್ದತಿ ಬದಲಾಗಬೇಕಾಗಿದೆ. ಮನೆಯಲ್ಲಿ ಆಹಾರ ತಯಾರಿಸುವಾಗ ಅತಿ ಹೆಚ್ಚಿನ ಗಮನ ನೀಡಬೇಕು. ಮುಂದಿನ ಪೀಳಿಗೆಯವರಿಗೆ ಆಹಾರ ಪದ್ಧತಿಯ ಸಂಸ್ಕಾರ ನೀಡಬೇಕಾಗಿದೆ. ಹಿರಿಯರು ತಮ್ಮ ಅನುಭವದಿಂದಲೇ ಆಹಾರ ಸುರಕ್ಷತೆ ಮಾಡುತ್ತಿದ್ದರು. ಆಹಾರ ಪದ್ಧತಿಯಲ್ಲಿ ನಿಯಮಗಳನ್ನು ಪಾಲಿಸಿದರೆ ಫುಡ್‌ ಪಾಯಿಷನ್‌ ಆಗುವುದಿಲ್ಲ. ವೈಯಕ್ತಿಕ ಸ್ವಚ್ಛತೆಯೂ ಬಹಳ ಮುಖ್ಯ ಎಂದರು.

ಮಾಮ್ಕೋಸ್‌ ಉಪಾಧ್ಯಕ್ಷ ವೈ.ಎಸ್‌.ಸುಬ್ರಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಆಹಾರದಲ್ಲಿ ಕಲಬೆರಕೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲೇ ಆಹಾರ ಪದಾರ್ಥಗಳ ತಯಾರಿಕೆ ಬಗ್ಗೆ ಗಮನ ನೀಡಬೇಕಾಗಿದೆ. ಮನೆಯಲ್ಲೇ ಚಾಕೊಲೇಟ್‌ ತಯಾರಿಸಿ ಮಾರುಕಟ್ಟೆ ಮಾಡಿದರೆ ಆರ್ಥಿಕವಾಗಿ ಲಾಭಗಳಿಸಬಹುದಾಗಿದೆ. ಗುಣಮಟ್ಟದ ಆಹಾರ ಹಾಗೂ ಆಹಾರ ಸುರಕ್ಷತೆ ಬಗ್ಗೆ ಹೆಬ್ಬಾರ ಯುವ ಬಳಗದ ನೇತ್ರತ್ವದಲ್ಲಿ ತರಬೇತಿ ಏರ್ಪಡಿಸಿದ್ದೇವೆ ಎಂದರು.

ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ತಾಲೂಕು ಅಧ್ಯಕ್ಷ ವೈ.ಎಸ್‌.ಕೃಷ್ಣಮೂರ್ತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಲೆನಾಡು ಹೆಬ್ಬಾರ ಮಹಾ ಸಭಾದಿಂದ ಈ ವರ್ಷ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸ್ವಾವಲಂಬನೆಯಿಂದ ಬದುಕಲು ಸ್ವಂತ ಉದ್ಯಮಗಳು ಸಹಕಾರಿಯಾಗಲಿವೆ ಎಂದು ಚಿಂತಿಸಿ ಮನೆಯಲ್ಲೇ ಚಾಕೊಲೇಟ್‌ ತಯಾರಿಸುವ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ತರಬೇತಿ ಪಡೆದವರು ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗಬಹುದು ಎಂದರು.

ಸಭೆ ಅಧ್ಯಕ್ಷತೆಯನ್ನು ಮಲೆನಾಡು ಯುವ ಹೆಬ್ಬಾರ ಬಳಗದ ಅಧ್ಯಕ್ಷ ವೈ.ಎಸ್‌.ಚರಣ ವಹಿಸಿದ್ದರು. ನಂತರ ಸಂಪನ್ಮೂಲ ವ್ಯಕ್ತಿ ಕೃಷ್ಣಕುಮಾರ್‌ ಅವರು ಚಾಕೊಲೇಟ್‌ ತಯಾರಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಪ್ರೊಜೆಕ್ಟರ್‌ ಮೂಲಕ ವಿವರಿಸಿದರು. ಇದೇ ಕಡೇಗದ್ದೆಯ ಆಯುರ್ವೇದ ವೈದ್ಯೆ ಡಾ.ಪ್ರತೀಕ್ಷಾ ಮನೆಯಲ್ಲಿ ಆಹಾರ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು. ಸುಲೋಚನಾ ಭಟ್‌ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಶಮಾ ಪ್ರಾರ್ಥಿಸಿ, ನಿಶಾಂತ್‌ ಭಟ್‌ ಸ್ವಾಗತಿಸಿದರು. ಯಡಗೆರೆ ಮಂಜುನಾಥ್‌ ನಿರೂಪಿಸಿದರು. ಮಮತಾ ರಾಜಣ್ಣ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ