ಆ್ಯಪ್ನಗರ

ಮೊಬೈಲ್‌ ಬಿಡಿ ಶಿಕ್ಷ ಣಕ್ಕೆ ಮಹತ್ವ ನೀಡಿ

ವಿದ್ಯಾರ್ಥಿಗಳು ಮೊಬೈಲ್‌ ಬಳಕೆಯಿಂದ ದೂರವಿದ್ದು ಶಿಕ್ಷ ಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಜಿ.ಪಂ. ಸದಸ್ಯೆ ಚಂದ್ರಮ್ಮ ಹೇಳಿದರು.

Vijaya Karnataka 20 Jan 2019, 5:00 am
ಬಾಳೆಹೊನ್ನೂರು : ವಿದ್ಯಾರ್ಥಿಗಳು ಮೊಬೈಲ್‌ ಬಳಕೆಯಿಂದ ದೂರವಿದ್ದು ಶಿಕ್ಷ ಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಜಿ.ಪಂ. ಸದಸ್ಯೆ ಚಂದ್ರಮ್ಮ ಹೇಳಿದರು.
Vijaya Karnataka Web CKM-19bhr2


ಅವರು ಪಟ್ಟಣದ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಕಾಲೇಜು ವಾರ್ಷಿಕೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷ ಣದ ಸ್ಥಾನ ತುಂಬಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಉತ್ತಮ ಶಿಕ್ಷ ಣ ಪಡೆದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದರು.

ನಿವೃತ್ತ ಶಿಕ್ಷ ಕ ಟಿ.ಆರ್‌.ನಾಗಪ್ಪಗೌಡ ಮಾತನಾಡಿ, ವಿದ್ಯೆಯನ್ನು ಯಾರಿಂದಲೂ ಕದಿಯಲಾಗದು. ಒಮ್ಮೆ ಶಿಕ್ಷ ಣ ಸಂಪಾದಿಸಿದರೆ ಅದು ನಮ್ಮನ್ನು ಶಾಶ್ವತವಾಗಿ ಕಾಪಾಡುತ್ತದೆ. ಪ್ರಮುಖವಾಗಿ ಸರಕಾರಿ ಶಾಲæ ಎಂಬ ಕೀಳರಿಮೆ ಬಿಟ್ಟು ಚೆನ್ನಾಗಿ ಓದಿ, ಹೆತ್ತವರಿಗೆ ಒಳ್ಳೆಯ ಹೆಸರು ತರಬೇಕು ಎಂದು ಕಿವಿಮಾತು ಹೇಳಿದರು.

ತಾ.ಪಂ. ಸದಸ್ಯ ಟಿ.ಎಂ.ನಾಗೇಶ್‌ ಮಾತನಾಡಿ, ಮಕ್ಕಳ ಶಿಕ್ಷ ಣಕ್ಕಾಗಿ ಸರಕಾರ ನೀಡುತ್ತಿರುವ ಸೌಲಭ್ಯ ಬಳಸಿಕೊಳ್ಳುವಂತೆ ತಿಳಿಸಿದರೆ.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಎಸ್‌.ಜಯಪ್ರಕಾಶ್‌ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷ ಣದ ಜತೆಗೆ ಜತೆಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.

ಬಿ.ಕಣಬೂರು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್‌ ಹನೀಫ್‌, ಕಾಲೇಜು ಅಭಿವೃದ್ಧಿ ಸಮಿತಿಯ ಜಿ.ಎಂ.ಶಬ್ಬೀರ್‌, ರಿಚರ್ಡ್‌ ಮಥಾಯಸ್‌, ಬಿ.ಎಸ್‌.ಅರುಣ್‌, ಬಿ.ಎಂ.ಜಯರಾಮ್‌, ಹಿರಿಯಣ್ಣಭಂಡಾರಿ, ಮಹಮ್ಮದ್‌ ಜುಹೇಬ್‌, ಎನ್‌.ಎಸ್‌.ನಿಶ್ಮಿತಾ, ಕೋಕೀಲಾ ಲಿಂಗಪ್ಪಗೌಡ, ಕಾಲೇಜಿನ ಪ್ರಾಂಶುಪಾಲ ಸೆಲಾಸ್ಟಿಯನ್‌ ಬಾಬು, ಹಿರಿಯ ಉಪನ್ಯಾಸಕಿ ಎ.ಪಿ.ಮಮತಾ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಕ್ರೀಡಾಕೂಟ ಹಾಗೂ ಸಂಸ್ಕೃತಿ ಕಾರ್ಯಕ್ರಮಗಳ ಸ್ಪರ್ಧೆ ವಿಜೇತರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಿರು ಕಾಣಿಕೆಯೊಂದಿಗೆ ಅಭಿನಂದಿಸಲಾಯಿತು. ಸಮಾರಂಭದ ನಂತರ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. ಪಲ್ಲವಿ ಪ್ರಾರ್ಥಿಸಿ, ಮೋನಿಕಾ ಮತ್ತು ಕೃಪಾ ನಿರೂಪಿಸಿದರು. ವಿಜಯಲಕ್ಷ್ಮಿ ಸ್ವಾಗತಿಸಿ, ವೈತ್ರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ