ಆ್ಯಪ್ನಗರ

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ

ಮಕ್ಕಳಿಗೆ ಪರಿಸರದ ಜ್ಞಾನ ಮೂಡಿಸಬೇಕು ಎಂದು ಅರಣ್ಯ ರಕ್ಷ ಕ ಎಚ್‌.ಎಸ್‌.ವೆಂಕಟೇಶ್‌ ಹೇಳಿದರು.

Vijaya Karnataka 12 Jun 2019, 5:00 am
ನರಸಿಂಹರಾಜಪುರ: ಮಕ್ಕಳಿಗೆ ಪರಿಸರದ ಜ್ಞಾನ ಮೂಡಿಸಬೇಕು ಎಂದು ಅರಣ್ಯ ರಕ್ಷ ಕ ಎಚ್‌.ಎಸ್‌.ವೆಂಕಟೇಶ್‌ ಹೇಳಿದರು.
Vijaya Karnataka Web CKM-10NRP2


ತಾಲೂಕಿನ ಶೆಟ್ಟಿಕೊಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಪರಿಸರ ಸಂರಕ್ಷ ಣೆ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಠ್ಯ ಚಟುವಟಿಕೆಗಳೊಂದಿಗೆ, ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಮುಂಚೂಣಿಯಲ್ಲಿರಬೇಕು. ಜತೆಗೆ ತಾವು ಓದುತ್ತಿರುವ ಶಾಲೆ, ಕಾಲೇಜು, ಮನೆ ಸುತ್ತಮುತ್ತಲಿನಲ್ಲಿ ಗಿಡಗಳನ್ನು ನೆಡುವ ಸಂಕಲ್ಪ ಮಾಡಬೇಕು. ಕೇವಲ ಗಿಡಗಳನ್ನು ನೆಟ್ಟರೆ ಸಾಲದು ಅವುಗಳನ್ನು ಪೋಷಿಸಿ, ಸಂರಕ್ಷಿಸಬೇಕು. ಇಂದು ಆಧುನೀಕರಣದ ಭರಾಟೆಯಲ್ಲಿ ಪರಿಸರ ನಾಶವಾಗುತ್ತಿದೆ. ಈ ಬಗ್ಗೆ ಕೇವಲ ಪಟ್ಟಣ, ನಗರ ಪ್ರದೇಶಗಳಲ್ಲಿ ಅಲ್ಲದೆ, ಗ್ರಾಮೀಣ ಭಾಗದಲ್ಲೂ ಕೂಡ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ. ಇಂದು ಪರಿಸರದ ನಾಶವಾಗುತ್ತಿರುವುದರಿಂದ ಕಾಲ ಕಾಲಕ್ಕೆ ಮಳೆಯಾಗದೆ, ಬರಗಾಲ ಎದುರಿಸುವ ಪರಿಸ್ಥಿತಿ ಮಲೆನಾಡಿಗೂ ಬಂದೊದಗಿರುವುದು ನಿಜಕ್ಕೂ ಆತಂಕದ ವಿಷಯವಾಗಿದೆ. ಪರಿಸರ ನಾಶವಾದರೆ ಮನುಕುಲದ ವಿನಾಶವಾಗುತ್ತದೆ ಎಂದರು.

ಶೆಟ್ಟಿಕೊಪ್ಪದ ಸರಕಾರಿ ಶಾಲೆ ಆವರಣದಲ್ಲಿ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಶರಣಬಸಪ್ಪ ಮಾರ್ಗದರ್ಶನದಲ್ಲಿ ನೆಲ್ಲಿ, ನೇರ್ಲೆ, ನುಗ್ಗೆ, ಗೇರು, ಸೀತಾಫಲ, ಪನ್ನೇರಲು ಸೇರಿದಂತೆ ಹಲವಾರು ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ್‌.ಎಂ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಈ ಸಂದರ್ಭ ಪ್ರಭಾರ ವಲಯ ಅರಣ್ಯಾಧಿಕಾರಿ ಈಶ್ವರ್‌, ಶಾಲೆಯ ಮುಖ್ಯ ಶಿಕ್ಷ ಕಿ ಪುಟ್ಟಮ್ಮ, ಶಿಕ್ಷ ಕರುಗಳಾದ ನಾಗೇಶ್‌ರಾವ್‌, ಮಂಜುಶ್ರೀ, ದೈಹಿಕ ಶಿಕ್ಷ ಕಿ ಪಿ.ವಿ.ಶುಭ, ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಬಿ.ಎಲ್‌.ದೇವೆಂದ್ರ, ಶೇಖರ್‌ನಾಯ್ಕ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ