ಆ್ಯಪ್ನಗರ

ಭದ್ರಾ ನದಿಗೆ ಬಿದ್ದು ಯುವಕ ಸಾವು

ಪ್ರವಾಸಕ್ಕಾಗಿ ಬಂದಿದ್ದ ಮಂಗಳೂರಿನ ಎಂಜಿನಿಯರ್‌ ಭದ್ರ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

Vijaya Karnataka Web 26 Jul 2018, 7:04 pm
ಪ್ರವಾಸಕ್ಕೆಂದು ಬಂದ ಯುವಕ ಭದ್ರಾ ನದಿಯ ಅಂಬಾತೀರ್ಥದಲ್ಲಿ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಗುರುವಾರ ನಡೆದಿದೆ.
Vijaya Karnataka Web engineer from magalore died to bhadra river in kuderemukh region
ಭದ್ರಾ ನದಿಗೆ ಬಿದ್ದು ಯುವಕ ಸಾವು


ಮಂಗಳೂರಿನ ತುಂಬೆ ಎಂಬಲ್ಲಿನ ಕಿರಣ್‌ ಕೋಟ್ಯಾನ್‌ (26) ನದಿಯಲ್ಲಿ ಕೊಚ್ಚಿ ಹೋದವರು.

ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌ ಆಗಿ ಕಿರಣ್‌ ಕೆಲಸ ಮಾಡುತ್ತಿದ್ದರು. ಕಿರಣ್‌ ಸೇರಿದಂತೆ ಮಂಗಳೂರಿನ 12 ಸ್ನೇಹಿತರ ತಂಡ ಕುದುರೆಮುಖ, ಸಂಸೆ, ಕಳಸಕ್ಕೆ ಭೇಟಿ ನೀಡಿ, ನಂತರ ಅತ್ಯಂತ ಅಪಾಯಕಾರಿ ಪ್ರದೇಶ ಅಂಬಾತೀರ್ಥ ತಲುಪಿದ್ದರು. ದಡದ ಬಂಡೆ ಮೇಲೆ ನಿಂತಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎನ್ನಲಾಗುತ್ತಿದೆ.

ತುಂಬಿ ಹರಿಯುತ್ತಿರುವ ನದಿಯಲ್ಲಿ ಎಷ್ಟೇ ಹುಡುಕಾಡಿದರೂ ಅವರ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳ, ಸ್ಥಳಿಯರು, ಪೊಲೀಸರು ನದಿಯ ಹೆಬ್ಬಾಳೆ, ವಶಿಷ್ಠ ತೀರ್ಥ ಹಾಗೂ ನದಿ ಅಂಚಿನ ಉದ್ದಕ್ಕೂ ಹುಡುಕಾಡಿದರು.


ಸೆಲ್ಫಿಗೆ ಮುಳುಗಿತೇ ಜೀವ

ಕಳೆದ ಕೆಲ ತಿಂಗಳಿನಿಂದ ಇಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ನದಿ ದಂಡೆಯ ಬಂಡೆ ಕಲ್ಲುಗಳು ಪಾಚಿ ಕಟ್ಟಿವೆ. ತುಂಬಿ ಹರಿಯುವ ನೀರಿನ ಮಧ್ಯೆ ಕಾಣಿಸಿಕೊಳ್ಳುತ್ತಿದ್ದ ಅಪಾಯಕಾರಿ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ಕಿರಣ್‌, ಕಾಲುಜಾರಿ ನದಿಗೆ ಬಿದ್ದಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಅಂಬಾತೀರ್ಥ ಉಕ್ಕಿ ಹರಿಯುತ್ತಿರುವುದರಿಂದ ಅತ್ಯಂತ ಅಪಾಯಕಾರಿಯಾಗಿದೆ. ಸ್ಥಳಕ್ಕೆ ತೆರಳಲು ಇದು ಸೂಕ್ತ ಸಮಯವಲ್ಲ ಎಂದು ಸ್ಥಳಿಯರು ತಿಳಿಸಿದ್ದರು. ಆದರೂ ಯುವಕರು ಅವರ ಮಾತಿಗೆ ಬೆಲೆ ನೀಡದೆ ನದಿ ಕಡೆಗೆ ತೆರಳಿದ್ದರು ಎನ್ನಲಾಗಿದೆ. ಕಳಸ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ