ಆ್ಯಪ್ನಗರ

ಪರಿಸರ ಸಂರಕ್ಷ ಣೆ ಮಕ್ಕಳ ಕಲಿಕಾ ಧ್ಯೇಯವಾಗಲಿ

ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಕ್ಕಳು ತಮ್ಮ ಜ್ಞಾನಸಂಪಾದನೆ ಜತೆಗೆ ಪರಿಸರ ಸಂರಕ್ಷ ಣೆ ಕಾರ್ಯಕ್ರಮಗಳಿಗೂ ಉತ್ತೇಜನ ನೀಡಬೇಕೆಂದು ರೋಟರಿ ಅಧ್ಯಕ್ಷ ಬಿ.ಆರ್‌. ಹೊನ್ನಪ್ಪಶಾಸ್ತ್ರೀ ತಿಳಿಸಿದರು.

Vijaya Karnataka 26 Jun 2019, 5:00 am
ಬೀರೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಕ್ಕಳು ತಮ್ಮ ಜ್ಞಾನಸಂಪಾದನೆ ಜತೆಗೆ ಪರಿಸರ ಸಂರಕ್ಷ ಣೆ ಕಾರ್ಯಕ್ರಮಗಳಿಗೂ ಉತ್ತೇಜನ ನೀಡಬೇಕೆಂದು ರೋಟರಿ ಅಧ್ಯಕ್ಷ ಬಿ.ಆರ್‌. ಹೊನ್ನಪ್ಪಶಾಸ್ತ್ರೀ ತಿಳಿಸಿದರು.
Vijaya Karnataka Web CKM-25BRR2


ಪಟ್ಟಣದ ಎಸ್‌.ಜೆ.ಎಂ. ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ 'ವಿಕ ವಿದ್ಯಾರ್ಥಿ ಸಂಚಿಕೆ' ಬಿಡುಗಡೆ ಹಾಗೂ ಪರಿಸರ ಸಂರಕ್ಷ ಣೆಗಾಗಿ ಶಾಲಾ ಆವರಣದಲ್ಲಿ ರೋಟರಿ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ಜ್ಞಾನ ಸಂಪಾದನೆಯ ಹೆಚ್ಚಳಕ್ಕೆ ಮಹತ್ವನೀಡಬೇಕು. ವೈಯಕ್ತಿಕ ಸ್ವಚ್ಛತೆಯಷ್ಟೇ ಮಹತ್ವವನ್ನು ತಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಶಾಲಾ ಆವರಣದ ಸ್ವಚ್ಛತೆಗೂ ನೀಡಬೇಕೆಂದು ಹೇಳಿದರು.

ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ನಿಯೋಜಿತ ರೋಟರಿ ಅಧ್ಯಕ್ಷ ಎಂ.ಕೆ.ಗಂಗಾಧರ್‌, ಅತ್ಯಂತ ಉತ್ತಮ ವಿಷಯ ಹೊಂದಿ ವಿದ್ಯಾರ್ಥಿಗಳ ಅಂಕಗಳಿಕೆ ಹಾಗೂ ಮನೋವಿಕಾಸಕ್ಕೆ ನೆರವಾಗಿರುವ ಪತ್ರಿಕೆಯನ್ನು ಮಕ್ಕಳಿಗೆ ಹಂಚುವಲ್ಲಿ ತಮಗೆ ದೊರೆತ ಅವಕಾಶ ಸೇವಾಮೌಲ್ಯ ವೃದ್ಧಿಗೆ ಸಂದಗೌರವ ಎಂದು ಭಾವಿಸಿದ್ದೇನೆ. ರೋಟರಿ ವತಿಯಿಂದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ರೋಟರಿ ಹಿರಿಯ ಸದಸ್ಯ ಹಾಗೂ ದಾನಿ ಪತ್ರೆ ಎಸ್‌.ದೇವದತ್‌ ಮಾತನಾಡಿ, ಮಕ್ಕಳು ತಮಗೆ ದೊರಕಿರುವ ಉತ್ತಮ ಶೈಕ್ಷ ಣಿಕ ಪರಿಸರವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಪೋಷಕರು ಹಾಗೂ ಶಾಲೆಗೆ ಕೀರ್ತಿತರಬೇಕು. ವಿದ್ಯಾರ್ಥಿ ಸಂಚಿಕೆ ಉತ್ತಮ ಪತ್ರಿಕೆಯಾಗಿದ್ದು ವಿಷಯ ಸಂಗ್ರಹದ ಜತೆಗೆ ನಿತ್ಯದ ಪ್ರಾಪಂಚಿಕ ಆಗುಹೋಗುಗಳ ಬಗೆಗೂ ಅರಿವಿರಬೇಕು ಎಂಬುದನ್ನು ನೆನಪಿಸಿದರು.

ಮುಖ್ಯಶಿಕ್ಷಕ ಜಿ.ಆರ್‌.ಬಸವರಾಜ್‌ ಮಾತನಾಡಿ, ಸಾಧಕರೆಲ್ಲಾ ತಮ್ಮ ಬಡಕುಟುಂಬಗಳ ನಡುವೆಯೇ ಬೆಳೆದು ಬಂದವರು. ಸಾಧನೆಯ ಗುರಿ ಹಾಗೂ ಹಂಬಲ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯ ಬಲ್ಲದು. ವಿಚಾರ ವಿಸ್ತಾರ ಹಾಗೂ ವಿಷಯ ಜ್ಞಾನ ನಿಮ್ಮ ವ್ಯಕ್ತಿತ್ವನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಬಲ್ಲದು. ಪತ್ರಿಕೆಯ ಕಾಳಜಿಯನ್ನು ಅರಿತು ಮಕ್ಕಳು ಜ್ಞಾನಮೌಲ್ಯ ವೃದ್ದಿಗೆ ಮಹತ್ವ ನೀಡಬೇಕೆಂದು ತಿಳಿಸಿದರು. ದಾನಿಗಳ ಸಹಕಾರವನ್ನು ಸ್ಮರಿಸಿದರು.

ರೋಟರಿಯ ಡಾ.ಶ್ರೀನಿವಾಸಮೂರ್ತಿ, ಕೆ.ಎಚ್‌.ನಾರಾಯಣ್‌, ರವಿ ಆಚಾರ್‌, ಶ್ರೀನಿವಾಸ್‌, ಶಿಕ್ಷ ಕವೃಂದದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ