ಆ್ಯಪ್ನಗರ

ಚಿಕ್ಕಮಗಳೂರಿನಲ್ಲಿ ಮಲಗಿದ್ದ ವ್ಯಕ್ತಿಯ ಮೈ ಮೇಲೆ ಹರಿದಾಡಿದ ಕಾಳಿಂಗ ಸರ್ಪ!

ಮಲಗಿದ್ದ ವ್ಯಕತಿಯ ಮೇಲೆ ಕಾಳಿಂಗ ಸರ್ಪ ಹರಿದು ಹೋಗಿದ್ದು, ಅದ‍ಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಇದಾಗಿದ್ದು, ರಟ್ಟಿನ ಬಾಕ್ಸ್ ಒಳಗೆ ಸೇರಿಕೊಂಡಿದ್ದ ಸರ್ಪವನ್ನು ಶೃಂಗೇರಿಯ ಸ್ನೇಕ್ ಅರ್ಜುನ್ ರಕ್ಷಿಸಿದ್ದಾರೆ.

Vijaya Karnataka Web 10 Jan 2021, 12:59 pm
ಚಿಕ್ಕಮಗಳೂರು: ರಾತ್ರಿ ವೇಳೆಯಲ್ಲಿ ಮನೆಯೊಳಗೆ ಮಲಗಿದ್ದ ವ್ಯಕ್ತಿಯ ಮೈ ಮೇಲೆ ಕಾಳಿಂಗ ಸರ್ಪವೊಂದು ಹರಿದು ಹೋಗಿದ್ದು, ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಪ್ಪ ತಾಲೂಕಿನ ದಯಂಬಳ್ಳಿಯಲ್ಲಿ ನಡೆದಿದೆ.
Vijaya Karnataka Web ಕಾಳಿಂಗ ಸರ್ಪ


ಅಗಳಗಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಯಂಬಳ್ಳಿ ಗ್ರಾಮದ ಸಂತೋಷ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ಸಂತೋಷ್ ಅವರ ಮನೆಯ ಜಗಲಿಯಲ್ಲಿ ನಾಗ ಎಂಬ ವ್ಯಕ್ತಿ ರಾತ್ರಿ 9.30ರ ಸುಮಾರಿಗೆ ಮಲಗಿದ್ದ.

ಆಗ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪವೊಂದು ಇವರ ಮೈಮೇಲೆ ಹರಿದು ಹೋದ ಅನುಭವ ಆಗಿದೆ ಎಂದು ನಾಗ ಹೇಳಿದ್ದಾರೆ.
ಮನೆ ಛಾವಣಿಯಲ್ಲಿದ್ದ 6 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿದ ಪೊಲೀಸ್ : ವಿಡಿಯೋ ವೈರಲ್

ಮನೆಯವರು ಗಾಬರಿಯಿಂದ ಕತ್ತಲೆಯಲ್ಲಿ ಬ್ಯಾಟರಿ ಹಾಕಿ ಹುಡುಕಿದಾಗ ಮನೆಯ ಮೂಲೆಯಲ್ಲಿರುವ ರಟ್ಟಿನ ಬಾಕ್ಸ್ ಒಳಗೆ ಕಾಳಿಂಗ ಸರ್ಪ ಸೇರಿಕೊಂಡಿರುವುದು ಕಾಣಿಸಿದೆ.

ರಟ್ಟಿನ ಬಾಕ್ಸ್ ಒಳಗೆ ಸೇರಿಕೊಂಡಿದ್ದ ಸರ್ಪವನ್ನು ಶೃಂಗೇರಿಯ ಸ್ನೇಕ್ ಅರ್ಜುನ್ ಅವರು‌ ರಕ್ಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ