ಆ್ಯಪ್ನಗರ

ನಿತ್ಯ ಪರಿಸರ ದಿನಾಚರಣೆಯಾಗಲಿ

ಯಾವುದೇ ಸಂಘಸಂಸ್ಥೆಗಳು ಸಾರ್ವಜನಿಕ ಸ್ಥಳದಲ್ಲಿ ಗಿಡನೆಟ್ಟು ಬೆಳೆಸಲು ಆಸಕ್ತಿ ತೋರಿದಲ್ಲಿ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ವಲಯ ಅರಣ್ಯಾಧಿಕಾರಿ ಎಸ್‌.ಎಲ್‌.ಶಿಲ್ಪಾ ಹೇಳಿದರು.

Vijaya Karnataka 7 Jun 2019, 5:00 am
ಚಿಕ್ಕಮಗಳೂರು: ಯಾವುದೇ ಸಂಘಸಂಸ್ಥೆಗಳು ಸಾರ್ವಜನಿಕ ಸ್ಥಳದಲ್ಲಿ ಗಿಡನೆಟ್ಟು ಬೆಳೆಸಲು ಆಸಕ್ತಿ ತೋರಿದಲ್ಲಿ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ವಲಯ ಅರಣ್ಯಾಧಿಕಾರಿ ಎಸ್‌.ಎಲ್‌.ಶಿಲ್ಪಾ ಹೇಳಿದರು.
Vijaya Karnataka Web CKM-6RUDRAP4


ನಗರ ಹೊರವಲಯದ ಬಸವ ಮಂದಿರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಕ್ಕನ ಬಳಗ ಗುರುವಾರ ಏರ್ಪಡಿಸಿದ್ದ ವನಮಹೋತ್ಸವದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವರ್ಷದ 365ದಿನವೂ ಪರಿಸರ ದಿನಾಚರಣೆ ಮೂಲಕ ಗಿಡ ಮರಗಳನ್ನು ಸಂರಕ್ಷಿಸಿದಾಗ ಹಸಿರೀಕರಣವಾಗಲು ಸಾಧ್ಯ. ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವುದರಿಂದ ಮಳೆಕಡಿಮೆಯಾಗುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆಯ ಕೊರತೆಯಿದೆ ಎಂದು ಹೇಳಲಾಗಿದೆ ಎಂದರು.

ನೀರಿಗಾಗಿ ಪರದಾಟ ಶುರುವಾಗಿದೆ. ಸಾವಿರ ಅಡಿ ಬೋರ್‌ವೆಲ್‌ ಕೊರೆದರು ಫೊ್ಲೕರೈಡ್‌ಯುಕ್ತ ನೀರು ಸಿಗುತ್ತಿದೆ ವಿನಃ ಕುಡಿಯಲು ಯೋಗ್ಯವಾದ ನೀರಿಲ್ಲ. ಮಳೆ ಕೊರತೆಯಿಂದ ಅಂತರ್ಜಲ ಬತ್ತಿ ಕೆರೆಕಟ್ಟೆಗಳು ಬರಿದಾಗುತ್ತಿವೆ. ಮುಂದಿನ ದಿನದಲ್ಲಿ ನೀರಿನ ಸಂರಕ್ಷ ಣೆಯೆ ದೊಡ್ಡ ಸವಾಲಾಗಬಹುದು ಎಂಬ ಆತಂಕ ಮನೆಮಾಡಿದೆ ಎಂದರು.

ಸಂಘದ ಅಧ್ಯಕ್ಷೆ ಹೇಮಲತಾ ಮಾತನಾಡಿ, ಇತರೆ ಸಂಘ ಸಂಸ್ಥೆಗಳ ಜತೆ ಒಗ್ಗೂಡಿ ಕಳೆದ ಎರಡು ದಶಕದಿಂದಲೂ ಸಸಿ ನೆಡುವ ಕಾರ್ಯ ಮಾಡಲಾಗುತ್ತಿದೆ ಎಂದರು. ವೀಣಾಮಲ್ಲಿಕಾರ್ಜುನ್‌,ಭಾರತಿ ಶಿವರುದ್ರಪ್ಪ,ಆಶಾ ಹೇಮಂತ್‌,ನಾಗಮಣಿ ಕುಮಾರ್‌,ಹಿರಿಯರಾದ ಆನಂದಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ