ಆ್ಯಪ್ನಗರ

ನೋವಿನಲ್ಲೂ ಸಾರ್ಥಕತೆ: ಮೃತ ವಿದ್ಯಾರ್ಥಿನಿಯ ನೇತ್ರದಾನ

ದಿಯಾ ತಂದೆ ನಿವೃತ್ತ ಕರ್ನಲ್ ರಾಜೇಂದ್ರ ಸಿಂಗ್ ಶೇರಾವತ್ ಆಸ್ಪತ್ರೆಗೆ ಧಾವಿಸಿದ್ದು, ದಿಯಾಳ ಕಣ್ಣುಗಳನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ನೀಡಿದ್ದಾರೆ.

Vijaya Karnataka Web 10 Nov 2018, 12:05 pm
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯ ನೇತ್ರ ದಾನ ಮಾಡಿ ಆಕೆಯ ಪಾಲಕರು ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Vijaya Karnataka Web Eye donate


ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಶಾಲಾ ಬಸ್ ಪಲ್ಟಿಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳು ಶೃಂಗೇರಿಗೆ ಪ್ರವಾಸ ತೆರಳುತ್ತಿದ್ದ ಸಂದರ್ಭ ಬಸ್ ಅಪಘಾತ ಸಂಭವಿಸಿತ್ತು.

ಶಾಲಾ ಬಸ್ ಪಲ್ಟಿಯಾಗಿ ವಿದ್ಯಾರ್ಥಿನಿ ಸಾವು

ಅಪಘಾತದಲ್ಲಿ 10 ನೇ ತರಗತಿ ವಿದ್ಯಾರ್ಥಿನಿ ದಿಯಾ ಮೃತಪಟ್ಟಿದ್ದರು. ಮಗಳ ಸಾವಿನ ಸುದ್ದಿ ಕೇಳಿದ ದಿಯಾ ತಂದೆ ನಿವೃತ್ತ ಕರ್ನಲ್ ರಾಜೇಂದ್ರ ಸಿಂಗ್ ಶೇರಾವತ್ ಆಸ್ಪತ್ರೆಗೆ ಧಾವಿಸಿದ್ದು, ದಿಯಾಳ ಕಣ್ಣುಗಳನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ನೀಡಿದ್ದಾರೆ. ನೋವಿನಲ್ಲೂ ಮಾನವೀಯತೆ ಪ್ರದರ್ಶಿಸಿದ ದಿಯಾ ಪಾಲಕರ ನಡೆಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ