ಆ್ಯಪ್ನಗರ

ಸಂತೆ ಮೈದಾನ, ರೋಗಗಳಿಗೆ ಆಹ್ವಾನ

ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುವ ದನಗಳ ಸಂತೆ ಮೈದಾನದಲ್ಲಿ ಸ್ವಚ್ಛತೆ ಸಮಸ್ಯೆ ಎದುರಾಗಿದ್ದು, ಪಟ್ಟಣದ ಜನತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.

Vijaya Karnataka 23 May 2019, 5:00 am
ಅಜ್ಜಂಪುರ: ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುವ ದನಗಳ ಸಂತೆ ಮೈದಾನದಲ್ಲಿ ಸ್ವಚ್ಛತೆ ಸಮಸ್ಯೆ ಎದುರಾಗಿದ್ದು, ಪಟ್ಟಣದ ಜನತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.
Vijaya Karnataka Web fair ground inviting diseases
ಸಂತೆ ಮೈದಾನ, ರೋಗಗಳಿಗೆ ಆಹ್ವಾನ


ಪಟ್ಟಣದ ಹೃದಯ ಭಾಗದಲ್ಲಿ ಸುಮಾರು 8 ಎಕರೆ ಖಾಲಿ ಪ್ರದೇಶದಲ್ಲಿ ರೈತರು ದನಕರು, ಎತ್ತು, ಎಮ್ಮೆ, ಜಾನುವಾರುಗಳ ಕ್ರಯ, ವಿಕ್ರಯ ನಡೆಸುತ್ತಾರೆ. ಮುಖ್ಯ ರಸ್ತೆ ಹಾಗೂ ಆಜುಬಾಜಿನ ರಸ್ತೆಗಳಿಗೆ ಹೋಲಿಸಿದರೆ ಈ ಪ್ರದೇಶ ತಗ್ಗಿನಲ್ಲಿದೆ. ಮಳೆ ಬಂದ ಸಮಯದಲ್ಲಿ ನೀರು ಚರಂಡಿಗಳಲ್ಲಿ ಹರಿಯಲಾರದೆ ಎಲ್ಲೆಂದರಲ್ಲಿ ನಿಲ್ಲುತ್ತದೆ. ಈ ನೀರಿನಲ್ಲಿ ಸಗಣಿ, ಗಂಜಲ, ಹುಲ್ಲಿನ ಕಡ್ಡಿ, ಮೇವು ಬೆರೆತು ಕ್ರಮೇಣ ಕೊಳೆತು ದುರ್ಗಂಧಕ್ಕೀಡಾಗಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿ ಬದಲಾಗಿದೆ.

ಗ್ರಾ.ಪಂ.ಆಡಳಿತ ನಿರ್ಲಕ್ಷ ್ಯ: ಕೇವಲ ಅಭಿವೃದ್ಧಿಗಾಗಿ ಟೆಂಡರ್‌ ಕರೆದು ಕೈ ತೊಳೆದುಕೊಂಡರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳುವ ಜವಾಬ್ದಾರಿ ಯಾರದು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಇದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಉತ್ತರಿಸಬೇಕು. ಸ್ವಚ್ಛತೆ ಕಾಪಾಡಬೇಕಾದ ಗ್ರಾ.ಪಂ. ಈ ಬಗ್ಗೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಕಡೆ ಆರೋಗ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಸ್ವಚ್ಛತೆಗೆ ಕ್ರಮ ವಹಿಸಲು ಕಾರ್ಯತತ್ಪರರಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ