ಆ್ಯಪ್ನಗರ

ದೇವರ ನಂಬಿಕೆ ಶಾಶ್ವತ ನಂದಾದೀಪ: ರಂಭಾಪುರಿ ಶ್ರೀ

ದೇವರ ಮೇಲಿನ ನಂಬಿಕೆ ಶಾಶ್ವತ ನಂದಾದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Vijaya Karnataka 19 Jun 2019, 5:00 am
ಬಾಳೆಹೊನ್ನೂರು: ದೇವರ ಮೇಲಿನ ನಂಬಿಕೆ ಶಾಶ್ವತ ನಂದಾದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
Vijaya Karnataka Web CKM-18BHR1


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಪೌರ್ಣಿಮೆಯಂದು ಶ್ರೀ ಸೋಮೇಶ್ವರ ದೇವಾಲಯದ ನೈರುತ್ಯ ಭಾಗದಲ್ಲಿ ಶ್ರೀ ವೀರಾಂಜನೇಯ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.

ಮಹಾ ಜನರು ನಡೆದು ತೋರಿದ ದಾರಿಯೇ ನಿಜ ಧರ್ಮ. ಧರ್ಮದ ಚುಕ್ಕಾಣಿ ಜೀವನದ ಶ್ರೇಯಸ್ಸಿಗೆ ದಾರಿ. ವಿಶ್ವದಲ್ಲಿರುವ ಎಲ್ಲ ಮನೆಗಳಿಗೂ ಒಬ್ಬನೇ ಯಜಮಾನ. ಆತನೇ ದೇವರು. ದೇವನೊಬ್ಬ ನಾಮ, ರೂಪ ಹಲವು. ಆದರೆ, ಮೂಲ ಶಕ್ತಿ ಒಂದೇಯಾಗಿದೆ. ನಂಬಿ ನಡೆದರೆ ಏನೆಲ್ಲ ಪ್ರಾಪ್ತಿ. ನಂಬಿಕೆ ಕಳೆದುಕೊಂಡರೆ ಧರ್ಮ ದೇವರು ಕಾಣರು. ಶ್ರೀ ವೀರಾಂಜನೇಯ ಶಕ್ತಿ ಅದ್ಭುತ. ವೀರಭದ್ರಸ್ವಾಮಿಯಿಂದ ವೀರಾಂಜನೇಯನಿಗೆ ಲಿಂಗ ದೀಕ್ಷೆಯಾಗಿದೆ. ತಲೆ ಬಾಗಿ ಬಂದವರನ್ನು ಕಾಯುವ ಧರ್ಮ ರಕ್ಷ ಕ. ಅಂಥ ಮಂಗಲ ಮೂರ್ತಿ ಶ್ರೀ ಸೋಮೇಶ್ವರ ದೇವಾಲಯದ ನೈರುತ್ಯ ದಿಕ್ಕಿನಲ್ಲಿ ಪ್ರತಿಷ್ಠಾಪನೆಯಾಗಿದ್ದು ಕ್ಷೇತ್ರಕ್ಕೆ ಬಲ ಒದಗಿ ಬಂದಿದೆ ಎಂದರು.

ಈ ಸಂದರ್ಭ ಎಡೆಯೂರು ರೇಣುಕ ಶಿವಾಚಾರ್ಯರು, ಕೂಡ್ಲಿಗಿ ಪ್ರಶಾಂತ ಶಿವಾಚಾರ್ಯರು, ಹಣ್ಣಿಕೇರಿ ರೇವಣಸಿದ್ಧ ಶಿವಾಚಾರ್ಯರು, ಚಿಪ್ಪಲಕಟ್ಟಿ ಕಲ್ಲಯ್ಯಸ್ವಾಮಿ ಉಪಸ್ಥಿತರಿದ್ದರು. ವೇ.ದಾರುಕಾಚಾರ್ಯ ಶಾಸ್ತ್ರಿಗಳವರಿಂದ ಶಾಸ್ತ್ರೋಕ್ತ ಪ್ರತಿಷ್ಠಾಪನೆಯ ವೈದಿಕ ಕಾರ್ಯಗಳು ನೆರವೇರಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ