ಆ್ಯಪ್ನಗರ

ರೈತರಿಗೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಅಗತ್ಯ

ರೈತರು ಆಯಾಯ ರೈತ ಸಂಪರ್ಕ ಕೇಂದ್ರಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕೆಂದು ಜಿಲ್ಲಾ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಹೆಚ್‌. ಮಹೇಂದ್ರ ತಿಳಿಸಿದರು.

Vijaya Karnataka 3 Jul 2019, 5:00 am
ಅಜ್ಜಂಪುರ: ರೈತರು ಆಯಾಯ ರೈತ ಸಂಪರ್ಕ ಕೇಂದ್ರಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕೆಂದು ಜಿಲ್ಲಾ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಹೆಚ್‌. ಮಹೇಂದ್ರ ತಿಳಿಸಿದರು.
Vijaya Karnataka Web CKM-01AJP02


ಪಟ್ಟಣ ಸಮೀಪ ಬಗ್ಗವಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಅಜ್ಜಂಪುರ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನದಲ್ಲಿ ರೈತರಿಗೆ ಅನುಕೂಲವಾಗುವ ಕೃಷಿ ಇಲಾಖೆ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ಕೃಷಿ ಇಲಾಖೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಯೋಜನೆಯ ಅನುಕೂಲ ಪಡೆಯಬೇಕು. ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆ, ಗೊಬ್ಬರ ಪ್ರಮಾಣ, ಔಷಧಿ ಸಿಂಪಡಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ಇದಕ್ಕೆ ಕೃಷಿ ಸ್ಥಾಯಿ ಸಮಿತಿ ಕೂಡಾ ಸಹಕಾರ ನೀಡುತ್ತದೆ ಎಂದರು.

ಕುಡ್ಲೂರು ಜಿ.ಪಂ. ಸದಸ್ಯೆ ರಾಧಾ ಮಾತನಾಡಿ, ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಮಣ್ಣು ಪರೀಕ್ಷೆ ಅಗತ್ಯ. ಮಣ್ಣಿಗೆ ಹೊಂದುವಂತಹ ಬೆಳೆಗಳನ್ನು ಬೆಳೆದಾಗ ಮಾತ್ರ ಉತ್ತಮ ಫಸಲು ಸಿಗಲು ಸಾಧ್ಯ. ರೈತರು ವೈಜ್ಞಾನಿಕವಾಗಿ ಕೃಷಿ ಇಲಾಖೆ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ಬೆಳೆ ಬೆಳೆಯಬೇಕು ಎಂದರು.

ಸಮಾರಂಭವನ್ನು ಗ್ರಾ.ಪಂ. ಅಧ್ಯಕ್ಷೆ ಸುನೀತ ಉದ್ಘಾಟಿಸಿದರು. ಉಪ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ, ಗ್ರಾ.ಪಂ.ಉಪಾಧ್ಯಕ್ಷ ಸಿ.ಎಸ್‌.ಸಿದ್ದೇಗೌಡ

ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ.ಮಂಜುನಾಥ್‌ ಅಗತ್ಯ ಮಾಹಿತಿ ನೀಡಿದರು.

ತಾ.ಪಂ. ಸದಸ್ಯೆ ಪ್ರತಿಮಾ, ತಾ.ಪಂ. ಪ್ರಭಾರ ಇಒ ವಿಶಾಲಾಕ್ಷ ಮ್ಮ, ಅಜ್ಜಂಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರುಣಕುಮಾರ್‌, ಜ್ಞಾನಮೂರ್ತಿ, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಲಿಂಗರಾಜ್‌, ಪಶುಪಾಲನೆ ಇಲಾಖೆಯ ಶಿವಕುಮಾರ್‌, ಸಿ.ಎಚ್‌.ಆರ್‌. ಕೇಂದ್ರದ ವಸಂತಕುಮಾರ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ವಿಸ್ತರಣಾಧಿಕಾರಿ ಉಮೇಶ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ