ಆ್ಯಪ್ನಗರ

ಕಡೂರಿನಲ್ಲಿ ಮೊದಲ ಮಳೆ ಸಿಂಚನ

ಪಟ್ಟಣದಲ್ಲಿ ಶುಕ್ರವಾರ ಸಂಜೆ ಭಾರೀ ಗಾಳಿಯ ಸಹಿತ ಸುರಿದ ಆಲಿಕಲ್ಲು ಸಹಿತ ಜನ ಜೀವನ ಅಸ್ತವ್ಯಸ್ತಗೊಂಡಿತು.

Vijaya Karnataka 25 May 2019, 9:19 pm
ಕಡೂರು : ಪಟ್ಟಣದಲ್ಲಿ ಶುಕ್ರವಾರ ಸಂಜೆ ಭಾರೀ ಗಾಳಿಯ ಸಹಿತ ಸುರಿದ ಆಲಿಕಲ್ಲು ಸಹಿತ ಜನ ಜೀವನ ಅಸ್ತವ್ಯಸ್ತಗೊಂಡಿತು.
Vijaya Karnataka Web first rain rush in kadur
ಕಡೂರಿನಲ್ಲಿ ಮೊದಲ ಮಳೆ ಸಿಂಚನ


ಸಂಜೆ 6 ಗಂಟೆ ಸುಮಾರಿಗೆ ಭಾರಿಗಾಳಿ ಬೀಸ ತೊಡಗಿ ಮರದ ರಂಬೆಕೊಂಬೆಗಳು ಮುರಿದು ಬಿದ್ದಿದ್ದು, ಸಂಚಾರಕ್ಕೆ ತೊಡಕುಂಟಾಯಿತು. ಸಂಚರಿಸುತ್ತಿದ್ದ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಸವಾರರು ವಾಹನಗಳನ್ನು ರಸ್ತೆ ಬದಿಗೆ ಹಾಕಿ ಅಂಗಡಿಮುಗ್ಗಟ್ಟುಗಳ ಆಶ್ರಯ ಪಡೆದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮತಿಘಟ್ಟದಿಂದ ಬೀರೂರುವರೆಗೆ ಗಾಳಿ ಮಳೆ ವ್ಯಾಪಿಸಿದ್ದರಿಂದ ನೂರಾರು ಕಾರುಗಳು ರಸ್ತೆ ಬದಿಯಲ್ಲಿ ಮರದ ಆಶ್ರಯದಲ್ಲಿ ನಿಂತವು. ಬಾರಿ ಕಸಕಡ್ಡಿಯ ರಾಶಿ ಬಹುತೇಕ ರಸ್ತೆ ಬದಿಯಲ್ಲಿ ತುಂಬಿದ್ದು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಎದುರು ವಿಷ್ಣು ಟಿಫನಿಸ್‌ ಹೋಟೆಲ್‌ ಮೇಲೆ ನಿರ್ಮಿಸಿದ್ದ ಬೃಹತ್‌ ಗಾತ್ರದ ಜಾಹೀರಾತು ಫಲಕ ಗಾಳಿಗೆ ಬಿದ್ದಿದೆ. ಪಟ್ಟಣದ ಬಹುಪಾಲು ಪ್ರದೇಶದ ವಿದ್ಯುತ್‌ ಸಂಪರ್ಕ ಕಡಿತವಾಗಿದ್ದು ದೂರಾವಾಣಿ ಸಂಪರ್ಕವೂ ಸಮರ್ಪಕವಾಗಿ ಕೆಲಸ ಮಾಡುತ್ತಿರಲಿಲ್ಲ.ಒಟ್ಟಿನಲ್ಲಿ ಬಿರುಗಾಳಿ ಮಳೆಯನ್ನು ಇದೇ ಮೊದಲ ಬಾರಿಗೆ ಕಂಡ ಜನ ಹರ್ಷಚಿತ್ತರಾದರು.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ