ಆ್ಯಪ್ನಗರ

ಕವಿಗೋಷ್ಠಿ ತೆರೆದುಕೊಂಡ ಜ್ವಲಂತ ಸಮಸ್ಯೆಗಳು

ಹೆಣ್ಣಿನ ನೋವು, ನಲಿವು, ದುಃಖ ದುಮ್ಮಾನ, ಸಮಾನತೆಯೆಡೆಗಿನ ಕಾತುರ, ಸಮಾಜದಲ್ಲಿ ಕಾಣುವ ದೃಷ್ಟಿಕೋನ, ಮಲೆನಾಡಿನ ಜ್ವಲಂತ ಸಮಸ್ಯೆಗಳು ಹೀಗೆ ಒಂದೊಂದೇ ಅಂಶಗಳು ಕವಿಗೋಷ್ಠಿಯಲ್ಲಿ ತೆರೆದುಕೊಂಡವು.

Vijaya Karnataka 4 Mar 2019, 10:49 pm
ಚಿಕ್ಕಮಗಳೂರು : ಹೆಣ್ಣಿನ ನೋವು, ನಲಿವು, ದುಃಖ ದುಮ್ಮಾನ, ಸಮಾನತೆಯೆಡೆಗಿನ ಕಾತುರ, ಸಮಾಜದಲ್ಲಿ ಕಾಣುವ ದೃಷ್ಟಿಕೋನ, ಮಲೆನಾಡಿನ ಜ್ವಲಂತ ಸಮಸ್ಯೆಗಳು ಹೀಗೆ ಒಂದೊಂದೇ ಅಂಶಗಳು ಕವಿಗೋಷ್ಠಿಯಲ್ಲಿ ತೆರೆದುಕೊಂಡವು.
Vijaya Karnataka Web flooding issues open with the poetry
ಕವಿಗೋಷ್ಠಿ ತೆರೆದುಕೊಂಡ ಜ್ವಲಂತ ಸಮಸ್ಯೆಗಳು


ಡಾ.ಟಿ.ಸಿ. ಪೂರ್ಣಿಮಾ ಅವರ 'ಉರಿವ ಇಳೆ' ಕವಿತೆಯಲ್ಲಿ ಕಲಿಯುಗದ ನಾಡ ರಾವಣರ ಆರ್ಭಟ, ಸೀತೆಯ ಮೇಲೆ ರಾವಣನೊಬ್ಬನದ್ದೇ ಕಣ್ಣಿತ್ತು. ಆದರೆ, ಈಗಿನ ಮಹಿಳೆಯರ ಮೇಲೆ ನೂರಾರುಕಣ್ಣುಗಳಿವೆ. ಸೀತೆಗೆ ಒಂದು ಕ್ಷಣದ ಪರೀಕ್ಷೆ ಆದರೆ, ಈಗಿನ ಹೆಣ್ಣಿಗೆ ನಿತ್ಯ ಬೆಂಕಿ ಎದುರಿಸಬೇಕಾಗಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ಡಿ. ನಳಿನಾ 'ನಮ್ಮೂರಿಗೆ ಬನ್ನಿ' ಕವಿತೆ ಮಲೆನಾಡಿನಲ್ಲಿ ನಡೆಯುತ್ತಿರುವ ಅಕ್ರಮ, ಅನ್ಯಾಯ, ದೌರ್ಜನ್ಯ, ಕೋಮುವಾದ, ಮಾಫಿಯಾಗಳ ಮೇಲೆ ಬೆಳಕು ಚೆಲ್ಲಿತು. ನಾಡು ಹಾಳು ಮಾಡುವುದಾದರೆ ಬರಬೇಡಿ, ಇದು ನಿಮ್ಮೂರೆಂದು ಭಾವಿಸಿಯೆಂಬ ವಾಣಿ ಹೃದಯಸ್ಪರ್ಶಿಯಾಗಿತ್ತು.

ಉಮಾದೇವಿ ಅವರ 'ಕಾಲ', ಡಾ. ಎಸ್‌.ಜಿ. ಮಾಲತಿಶೆಟ್ಟಿ 'ಅನ್ನದಾತನ ಆತ್ಮಹತ್ಯೆ', ಡಾ. ವಿಜಯಶ್ರೀ ಸಬರದ 'ನೀವು ಕಾಣಿರೆ ನೀವು ಕಾಣಿರೆ', ಮಮತಾಜ್‌ ಬೇಗಂ 'ಅಲ್ಲೊಂದು ಮನೆಯಿತ್ತು', ಮೀನಾ ಪಾಟೀಲ್‌ 'ಉಲಿವ ಹಕ್ಕಿ', ಜಯಶ್ರೀ ಕಂಬಾರ 'ಕವಿಯೇ ಕೇಳು', ಆಶಾ ಕಡಪಟ್ಟಿ 'ಕೆಂಪು ದೀಪ', ಡಾ.ಶಾರದಾ ಮುಳ್ಳೂರು 'ಮರೆಯಲಾಗದ ಆ ರಾತ್ರಿ', ಎ.ಜಿ.ರತ್ನಾ ಕಾಳೇಗೌಡ 'ಕರಿ ನೆರಳು', ಸವಿತಾ ರಮೇಶ್‌ 'ನಾ ವನಿತೆ ಬೇಕಿದೆ ಸಮಾನತೆ', ದೀಪಾ ಹಿರೇಗುತ್ತಿ 'ಆಹ್ವಾನ' ಹಾಗೂ ಜ.ನಾ. ತೇಜಶ್ರೀ ಅವರ ಕವಿತೆಗಳು ಸೂಕ್ಷ್ಮವಾಗಿ ಹೆಣ್ಣಿನ ಮೇಲಾಗುತ್ತಿರುವ ಅನ್ಯಾಯಗಳನ್ನು ತೆರೆದಿಟ್ಟವು.

* ಕವಿತೆಯಷ್ಟೇ ವಾಚನವೂ ಪ್ರಮುಖ: ಕವಿತೆ ಎಷ್ಟೇ ಅಂದವಾಗಿದ್ದರೂ ಅದನ್ನು ಸೊಗಸಾಗಿ ವಾಚಿಸುವ ಕಲೆಯನ್ನು ಕವಯತ್ರಿಯರು ಮೈಗೂಡಿಸಿಕೊಳ್ಳಬೇಕು ಹಾಗೂ ಕವಿತೆಗಳನ್ನು ಯಾವುದೇ ಕಾರಣ ಮಾರಾಟ ಅಥವಾ ಅಡವಿಡುವ ಕೆಲಸ ಮಾಡಬಾರದು ಎಂದು ಸವಿತಾ ಬಾಗಭೂಷಣ್‌ ಸಲಹೆ ನೀಡಿದರು. ಲಕ್ಷ್ಮಿಕಾಂತ್‌ ಸ್ವಾಗತಿಸಿದರು. ಆನಂದ ಮೂರ್ತಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ