ಆ್ಯಪ್ನಗರ

ಜನ ಸಾಮಾನ್ಯರಿಗೆ, ಉಚಿತ ಕಾನೂನು ನೆರವು

ಕಾನೂನು ಸಾಕ್ಷ ರತಾ ರಥ ಪ್ರವಾಸದೊಂದಿಗೆ ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಅರಿವು ಮೂಡಿಸಲಾಗುವುದು ಎಂದು ನರಸಿಂಹರಾಜಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷೆ ಎಂ.ಸಿ.ಸುಮಾ ಹೇಳಿದರು.

Vijaya Karnataka 7 Jan 2019, 5:00 am
ಬಾಳೆಹೊನ್ನೂರು: ಕಾನೂನು ಸಾಕ್ಷ ರತಾ ರಥ ಪ್ರವಾಸದೊಂದಿಗೆ ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಅರಿವು ಮೂಡಿಸಲಾಗುವುದು ಎಂದು ನರಸಿಂಹರಾಜಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷೆ ಎಂ.ಸಿ.ಸುಮಾ ಹೇಳಿದರು.
Vijaya Karnataka Web CKM-6bhr3


ಅವರು ಭಾನುವಾರ ಪಟ್ಟಣದ ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಬಾಳೆಹೊನ್ನೂರು ಲಯನ್ಸ್‌ ಕ್ಲಬ್‌, ಮತ್ತು ಬಿ.ಕಣಬೂರು ಗ್ರಾ.ಪಂ. ವತಿಯಿಂದ ಹಮ್ಮಿಕೊಂಡಿದ್ದ ಕಾನೂನು ಸಾಕ್ಷ ರತಾ ಕಾರ್ಯಕ್ರಮಲ್ಲಿ ಮಾತನಾಡಿದರು. ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಇದ್ದು, ಜನ ಸಾಮಾನ್ಯರಿಗೆ, ಗ್ರಾಮೀಣ ಪ್ರದೇಶದ ಜನ ಸಾಮಾನ್ಯರಿಗೆ ಉಚಿತ ಕಾನೂನು ನೆರವು ನೀಡಲಿದೆ. ಅಲ್ಲದೆ 1ಲಕ್ಷ ಕ್ಕಿಂತ ಕಡಿಮೆ ಆಧಾಯ ಇರುವ ಬಡವರಿಗೆ, ದುರ್ಬಲರಿಗೆ ಸೇವಾ ಪ್ರಾಧಿಕಾರದಿಂದಲೇ ವಕೀಲರನ್ನು ನೇಮಿಸಿ ಕೊಡಲಿದ್ದೇವೆ, ಸಮಿತಿಗೆ ಅರ್ಜಿ ನೀಡಿ ಕಾನೂನು ಸೇವಾ ಪ್ರಾಧಿಕಾರದ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ವಕೀಲರಾದ ಜೈಪ್ರಕಾಶ್‌ ಮಾತನಾಡಿದರು. ನರಸಿಂಹರಾಜಪುರದ ವಕೀಲರ ಸಂಘದ ಕಾರ್ಯದರ್ಶಿ ಎಚ್‌.ಎ.ಸಾಜು ಅವರು ಕಸ್ತೂರಿ ರಂಗನ್‌ ವರದಿಯ ಬಗ್ಗೆ ಮಾತನಾಡಿದರು. ವಕೀಲರಾದ ಪೌಲ್‌ ಚೆರಿಯನ್‌, ಎಂ.ಆರ್‌.ಶಿವಪ್ರಸಾದ್‌, ಜಿ.ಪಂ.ಸದಸ್ಯೆ ಚಂದ್ರಮ್ಮ, ಬಿ.ಕಣಬೂರು ಗ್ರಾ.ಪಂ.ಅಧ್ಯಕ್ಷ ಮಹಮ್ಮದ್‌ ಹನೀಪ್‌, ಗ್ರಾ..ಪಂ.ಮಾಜಿ ಅಧ್ಯಕ್ಷ ಮಹಮ್ಮದ್‌ ಜುಹೇಬ್‌, ಹಿರಿಯಣ್ಣಭಂಡಾರಿ, ಬಿ.ಕೆ.ಮಧುಸೂಧನ್‌, ಜಾನ್‌ ಡಿಸೋಜಾ, ಗ್ರಾ.ಪಂ.ಸದಸ್ಯರಾದ ಇಬ್ರಾಹಿಂಶಾಫಿ, ಲೀನಾಜ್ಯೋತಿ, ವಿನ್ನಿಪ್ರೆಡ್‌ ಸಿಕ್ವೇರಾ, ಶ್ರೀನಿವಾಸ್‌, ಜೇಸಿ ಸಂಸ್ಥೆಯ ನವೀನ್‌ ಲಾಯ್ಡ್‌ ಮಿಸ್ಕಿತ್‌ ಪಾಲ್ಗೊಂಡಿದ್ದರು. ಬಿ.ಕಣಬೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಕೆ.ಸೋಮಶೇಖರ್‌ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ